ಜಿಡ್ಡುಗಟ್ಟಿರುವ ಕಠಿಣ ಫ್ಯಾಟ್ ಕರಗಿಸಲು ಈ 5 ಮಾರ್ನಿಂಗ್ ಡ್ರಿಂಕ್ಸ್ ಟ್ರೈ ಮಾಡಿ.. ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದರಲ್ಲಿ ಅನುಮಾನವೇ ಇಲ್ಲ..!
ಆರೋಗ್ಯಕರ ತೂಕ ಇಳಿಕೆ ಹಾಗೂ ಜಿಡ್ಡುಗಟ್ಟಿರುವ ಹೊಟ್ಟೆಯ ಫ್ಯಾಟ್ ಕರಗಿಸಲು ಬೆಳಿಗ್ಗೆ ಹೊತ್ತು ಕೆಲವು ಪಾನೀಯಗಳನ್ನು ಕುಡಿಯುವುದು ಬಹಳ ಪ್ರಯೋಜನಕಾರಿ ಆಗಿದೆ.
ನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಚಮತ್ಕಾರಿ ಪಾನೀಯಗಳನ್ನು ಕುಡಿಯುವುದರಿಂದ ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗುತ್ತದೆ. ಅಂತಹ ಮಾರ್ನಿಂಗ್ ಡ್ರಿಂಕ್ಸ್ ಗಳೆಂದರೆ...
ತೂಕ ಇಳಿಕೆ ಪಾನೀಯಗಳ ವಿಷಯಕ್ಕೆ ಬಂದರೆ ಮೊದಲು ನೆನಪಾಗುವುದೇ ಲೆಮನ್ ವಾಟರ್. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಬೆರೆಸಿ ಕುಡಿದರೆ ಎಂತಹ ಕಠಿಣ ಫ್ಯಾಟ್ ಆದರೂ ಸುಲಭವಾಗಿ ಕರಗುತ್ತದೆ.
ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಇದು ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸಲು ಜೊತೆಗೆ ಹೊಟ್ಟೆಯ ಸುತ್ತಲೂ ಶೇಖರಗೊಂಡಿರುವ ಕೊಬ್ಬನ್ನು ಸುಡಲು ಪರಿಣಾಮಕಾರಿ ಆಗಿದೆ.
ಉರಿಯೂತ ಲಕ್ಷಣಗಳಿಂದ ಸಮೃದ್ಧವಾಗಿರುವ ಶುಂಠಿಯಿಂದ ಟೀ ತಯಾರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸವಿದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಹೊಟ್ಟೆಯ ಕೊಬ್ಬನ್ನು ಬೆಣ್ಣೆಯಂತೆ ಕರಗಿಸುತ್ತದೆ.
ದಿನವಿಡೀ ಸೌತೆಕಾಯಿ ಪುದೀನ ಮಿಶ್ರಿತ ನೀರನ್ನು ಕುಡಿಯುವುದರಿಂದ ಇದು ದೇಹವನ್ನು ಡಿಟಾಕ್ಸ್ ಮಾಡಿ ಬೆಲ್ಲಿ ಫ್ಯಾಟ್ ಕರಗಿಸಲು ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.
ನಿತ್ಯ ಒಂದು ಲೋಟ ನೀರಿನಲ್ಲಿ ಒಂದೆರಡು ಸ್ಪೂನ್ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಜೊತೆಗೆ ಜಿಡ್ಡುಗಟ್ಟಿದ ಕೊಬ್ಬನ್ನು ಕರಗಿಸಲು ಕೂಡ ಪರಿಣಾಮಕಾರಿ ಆಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.