ನಿಮ್ಮ ಬೆಳಗಿನ ಅಭ್ಯಾಸ ಈ ರೀತಿ ಇದ್ದರೆ ಚಳಿಗಾಲದಲ್ಲೂ ತೂಕ ಇಳಿಯುತ್ತೆ, ಬೆಲ್ಲಿ ಫ್ಯಾಟ್ ಸಹ ಕರಗುತ್ತೆ..!
ಬೆಳಿಗ್ಗೆ ಎದ್ದ ಕೂಡಲೇ ಮಾಡುವ ಕೆಲವು ಕೆಲಸಗಳು ತೂಕ ಇಳಿಕೆ, ಹೊಟ್ಟೆಯ ಕೊಬ್ಬು ಕರಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ನಿತ್ಯ ಬೆಳಿಗ್ಗೆ ಹೊತ್ತು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಚಳಿಗಾಲದಲ್ಲೂ ಸುಲಭವಾಗಿ ತೂಕ ಇಳಿಸಬಹುದು. ಮಾತ್ರವಲ್ಲ, ಬೆಲ್ಲಿ ಫ್ಯಾಟ್ ಕೂಡ ಕರಾಗುತ್ತೆ ಎನ್ನಲಾಗುತ್ತದೆ.
ಬೆಳಿಗ್ಗೆ ಎದ್ದ ಕೂಡಲೇ ಬಾಯಿ ತೊಳೆಯುವ ಮುಂಚೆ ಒಂದು ಗ್ಲಾಸ್ ನೀರು ಕುಡಿಯುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಇದು ಚಯಾಪಚಯವನ್ನು ಹೆಚ್ಚಿಸುವ ಜೊತೆಗೆ ದೇಹದ ಕೊಬ್ಬನ್ನು ಸುಡುವಲ್ಲಿಯೂ ಪರಿಣಾಮಕಾರಿ ಆಗಿದೆ.
ಪ್ರತಿದಿನ ಬೆಳಿಗ್ಗೆ ವಾಕಿಂಗ್, ಜಾಗಿಂಗ್, ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇದರಿಂದ ದಿನವಿಡೀ ದೇಹವು ಹೆಚ್ಚುವರಿ ಕ್ಯಾಲೋರಿಗಳನ್ನು ಸುಡುತ್ತದೆ.
ನಿತ್ಯ ಮುಂಜಾನೆ ಬಿಸಿಲಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಿ. ಇದರಿಂದ ನಿಮ್ಮ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸಲು, ಉತ್ತಮ ಗುಣಮಟ್ಟದ ನಿದ್ರೆ ಪಡೆಯುವುದರ ಜೊತೆಗೆ ತೂಕ ನಷ್ಟಕ್ಕೂ ಪ್ರಯೋಜನಕಾರಿ ಆಗಿದೆ.
ನಿತ್ಯ ಬೆಳಗಿನ ಉಪಹಾರದಲ್ಲಿ ಪ್ರೊಟೀನ್ ಸಮೃದ್ಧ ಆಹಾರಗಳನ್ನು ಸೇರ್ವಿಸಿ. ಇದು ಸಹ ತೂಕ ಇಳಿಕೆಯಲ್ಲಿ ಅತ್ಯುತ್ತಮ ಕೊಡುಗೆ ನೀಡಬಲ್ಲದು.
ಪ್ರತಿ ನಿತ್ಯ ಆರೋಗ್ಯಕರ ಆಹಾರಗಳ ಅಭ್ಯಾಸವನ್ನು ರೂಢಿಸಿಕೊಳ್ಳಿ. ಹೊರಗಿನ ಆಹಾರ, ಜಂಕ್ ಫುಡ್ ಸೇವನೆಯನ್ನು ತಪ್ಪಿಸಿ. ಇದರಿಂದ ಆರೋಗ್ಯಕರವಾಗಿ ಸುಲಭವಾಗಿ ತೂಕ ನಿಯಂತ್ರಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.