Most Dangerous Places In the World: ವಿಶ್ವದ ಅತ್ಯಂತ ಅಪಾಯಕಾರಿ ಜಾಗಗಳಿವು, ಕೇವಲ ಹೋಗುವ ಯೋಚನೆಯೇ ನಡುಕ ಹುಟ್ಟಿಸುತ್ತೆ
1. Villarrica Volcano, ಚಿಲಿ - ಇದೊಂದು ಸಕ್ರಿಯ ಲಾವಾ ಸರೋವರವಾಗಿದ್ದು, ಇದು ಸಾಹಸ ಉತ್ಸಾಹಿಗಳಿಗೆ ಪಾದಯಾತ್ರೆಯ ತಾಣವಾಗಿದೆ. ಇಲ್ಲಿ, ಸಕ್ರಿಯ ಕುಳಿಯ ಮೇಲಿರುವ ಹೆಲಿಕಾಪ್ಟರ್‌ನಿಂದ ಬಂಗೀ ಜಂಪಿಂಗ್ ನಿಮಗೆ ಅತ್ಯಾಕರ್ಷಕ ಮತ್ತು ಸ್ವಲ್ಪ ಭಯಾನಕ ಅನುಭವ ನೀಡಲಿದೆ.
2. Mount Hua, ಚೀನಾ - ಇದು ಕೂಡ ವಿಶ್ವದ ಅತ್ಯಂತ ಅಪಾಯಕಾರಿ ಎತ್ತರದ ಸ್ಥಳಗಳಲ್ಲಿ ಒಂದಾಗಿದೆ. ನೀವು ಎತ್ತರಕ್ಕೆ ಹೆದರುತ್ತಿದ್ದರೆ ಇಲ್ಲಿಗೆ ಹೋಗಬೇಡಿ. ಇಲ್ಲಿ ಪ್ಲಾಂಕ್ ವಾಕ್ ಅತ್ಯಂತ ಭಯಾನಕ ಅನುಭವ ನೀಡುತ್ತದೆ.
3.Teahupo'o, ಪ್ರೆಂಚ್ ಪಾಲಿನೆಷಿಯಾ - ಇದರ ಅಲೆಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ಅಲೆಗಳೆಂದು ಪರಿಗಣಿಸಲಾಗಿದೆ. Teahupo'o ಅಲೆಗಳು 21 ಅಡಿ ಎತ್ತರವನ್ನು ತಲುಪಬಲ್ಲವು.
4. Gates of Hell, ತುರ್ಕ್ಮೇನಿಸ್ತಾನ್ - ಇಲ್ಲಿರುವ ದ Darvaza Gas Crater ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಪ್ರವಾಸವು ನಿಮಗೆ ನಿಜವಾಗಿಯೂ ಭಯಾನಕ ಅನುಭವ ನೀಡುತ್ತದೆ. ಇದನ್ನು ಭೂಮಿಯ ಮೇಲಿರುವ ನರಕದ ಬಾಗಿಲು ಎಂದು ಕೂಡ ಕರೆಯಲಾಗುತ್ತದೆ.
5. Snake Island, ಬ್ರೆಜಿಲ್ - ಇದು ಕೂಡ ಭೂಮಿಯ ಮೇಲಿನ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ನೀವು ವಿಷಪೂರಿತ ಹಾವುಗಳ ದಟ್ಟ ಜನಸಂಖ್ಯೆ ಕಾಣಬಹುದು. ಇದು ವಿಶ್ವದ ಅತಿ ದೊಡ್ಡ ಹಾವುಗಳ ಜನಸಂಖ್ಯೆ ಎಂದು ನಂಬಲಾಗಿದೆ.