ಈ ರಾಶಿಯ ಜನರಿಗೆ ಮೂಗಿನ ತುದಿಯಲ್ಲೇ ಸಿಟ್ಟು.. ಮಾತು ಮಾತಿಗೂ ಕೋಪಗೊಳ್ಳುವರು!
ಕೆಲವು ಜನರು ಪ್ರತಿ ವಿಷಯಕ್ಕೂ ಕೋಪಗೊಳ್ಳುತ್ತಾರೆ. ಮಾತು ಮಾತಿಗೂ ಸಿಟ್ಟು ಬರುತ್ತದೆ. ಇದು ಅವರ ರಾಶಿಗನುಗುಣವಾದ ಸ್ವಭಾವ.
ಕನ್ಯಾ ರಾಶಿ : ಪ್ರತಿಯೊಂದು ವಿಷಯದಲ್ಲೂ ಕೋಪಗೊಳ್ಳುವರು. ಸಣ್ಣ ವಿಷಯಗಳಿಗೆ ಕೋಪಗೊಳ್ಳುವಂತೆ, ಸಣ್ಣ ವಿಷಯಕ್ಕೂ ಅವರು ಸಂತೋಷಪಡುತ್ತಾರೆ.
ವೃಷಭ ರಾಶಿ : ಈ ರಾಶಿಯ ಜನರು ಕಠಿಣ ಪರಿಶ್ರಮಿಗಳಾಗಿರುತ್ತಾರೆ. ಬಹಳ ತಡವಾಗಿ ಸಿಟ್ಟು ಬರುತ್ತೆ ಆದರೆ ಅದು ಬಂದರೆ ತುಂಬಾ ಸ್ಟ್ರಾಂಗ್, ಒಮ್ಮೆ ಕೋಪ ಬಂದರೆ ಸಮಾಧಾನ ಮಾಡುವುದು ತುಂಬಾ ಕಷ್ಟ.
ಮೇಷ ರಾಶಿ : ಈ ರಾಶಿಯ ಜನರು ನೇರ ಸ್ವಭಾವದವರು. ಯಾರಾದರೂ ತಮ್ಮ ಮಾತನ್ನು ತಿರಸ್ಕರಿಸಿದರೆ ಇವರ ಪಿತ್ತ ನೆತ್ತಿಗೇರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.