ಈ ರಾಶಿಯಲ್ಲಿ ಹುಟ್ಟಿದವರು ಲಕ್ಷ್ಮೀ ಪುತ್ರರೇ! ಹುಟ್ಟಿನಿಂದಲೇ ಬರುವುದು ಕೀರ್ತಿ, ಗೌರವ, ಪ್ರತಿಷ್ಠೆ !ಮುಖೇಶ್, ನೀತಾ ಅಂಬಾನಿ ಮಾತ್ರವಲ್ಲ ಅವರ ಮಕ್ಕಳದ್ದು ಕೂಡಾ ಇದೇ ರಾಶಿ
ಜ್ಯೋತಿಷ್ಯದಲ್ಲಿ ಮಗುವಿನ ಹುಟ್ಟಿದ ಸಮಯ, ಜಾಗ ಮತ್ತು ದಿನಾಂಕ ಬಹಳ ಮುಖ್ಯವಾಗಿರುತ್ತದೆ. ಇದನ್ನು ಆಧರಿಸಿ ಯಾವ ನಕ್ಷತ್ರ, ಯಾವ ರಾಶಿ ಎನ್ನುವುದನ್ನು ಹೇಳಲಾಗುತ್ತದೆ.
ರಾಶಿಗನುಗುಣವಾಗಿ ಮನುಷ್ಯನ ಗುಣ ನಡತೆ, ಭವಿಷ್ಯ ನಿರ್ಧಾರವಾಗುತ್ತದೆ. ಕೆಲವರು ಏನು ಮಾಡಿದರೂ ಸುಖ ಎನ್ನುವುದು ಅವರ ಪಾಲಿಗೆ ಇರುವುದೇ ಇಲ್ಲ. ಇದು ಅವರ ಜನ್ಮ ರಾಶಿಯನ್ನು ಅವಲಂಬಿತವಾಗಿರುತ್ತದೆ.
ಇನ್ನು ಕೆಲವರು ಹುಟ್ಟುತ್ತಲೇ ಕೀರ್ತಿ, ಗೌರವ,ಪ್ರತಿಷ್ಠೆ ಹಿಟ್ಟು ಬರುತ್ತಾರೆ. ಸಾಕ್ಷಾತ್ ಲಕ್ಷ್ಮೀ ಸಂತಾನದಂತೆ ಇರುತ್ತಾರೆ ಇವರು. ಇದಕ್ಕೂ ಅವರು ಹುಟ್ಟಿರುವ ರಾಶಿಯೇ ಕಾರಣವಾಗಿರುತ್ತದೆ.
ಮೇಷ ರಾಶಿ : ಮೇಷ ರಾಶಿಯವರು ಹಠ ಸ್ವಭಾವದವರು. ಇವರ ಹಠವೇ ಇವರನ್ನು ಯಶಸ್ಸಿನತ್ತ ಸಾಗಿಸುತ್ತದೆ. ಇವರು ಯಾವುದೇ ವಿಷಯದಲ್ಲಿ ಒಮ್ಮೆ ನಿರ್ಧಾರ ಮಾಡಿದರೆ ಸಾಕು ಆ ಕೆಲಸ ಮುಗಿಸಿದ ನಂತರವೇ ನಿಟ್ಟಿಸಿರು ಬಿಡುತ್ತಾರೆ.
ವೃಶ್ಚಿಕ ರಾಶಿ : ಈ ರಾಶಿಯವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚೇ ಇರುತ್ತದೆ. ಇವರು ಹುಟ್ಟುತ್ತಲೇ ಧನಿಕರಾಗಿಯೇ ಹುಟ್ಟುತ್ತಾರೆ.ಇವರು ಸ್ವಂತ ಉದ್ಯೋಗಕ್ಕೆ ಕೈ ಹಾಕಿದರೆ ಅಲ್ಲಿ ಯಶಸ್ಸು ಖಂಡಿತಾ. ಜೀವನದಲ್ಲಿ ಸೋಲಿಲ್ಲದೆ ಮುಂದುವರೆಯುವ ಅದೃಷ್ಟ ಇವರದ್ದು.
ಹಾಗೆ ನೋಡಿದರೆ ಈ ದೇಶದ ಶ್ರೀಮಂತ ಪರಿವಾರವಾದ ಅಂಬಾನಿ ಕುಟುಂಬ ಅಂದರೆ ಮುಖೇಶ್ ಅಂಬಾನಿಯವರದ್ದು ಮೇಷ ರಾಶಿ. ಅವರ ಪುತ್ರ ಅನಂತ್ ಅಮ್ಬಾನಿಯದ್ದು ಕೂಡಾ ಮೇಷ ರಾಶಿಯೇ. ಇನ್ನು ನೀತಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಪುತ್ರಿ ಈಶಾ ಅಂಬಾನಿಯದ್ದು ವೃಶ್ಚಿಕ ರಾಶಿ ಎನ್ನಲಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.