ಈ ದಿನಾಂಕದಲ್ಲಿ ಹುಟ್ಟಿದ ಹುಡುಗಿಯರು ಕಾಲಿಟ್ಟಲೆಲ್ಲಾ ಬೆಳೆಯುವುದು ಚಿನ್ನದ ಬೆಳೆ !ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಅದೃಷ್ಟದಾತೆ !ಇವರಿಂದಲೇ ಬೆಳಗುವುದು ಪತಿಯ ಬಾಳು

Fri, 25 Oct 2024-9:04 pm,

ಜ್ಯೋತಿಷ್ಯದಲ್ಲಿ ರಾಶಿಗನುಗುಣವಾಗಿ ಭವಿಷ್ಯ ಹೇಳಿದರೆ, ಸಂಖ್ಯಾ ಶಾಸ್ತ್ರದಲ್ಲಿ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಭವಿಷ್ಯ ಹೇಳಲಾಗುತ್ತದೆ.   

ಸಂಖ್ಯಾಶಾಸ್ತ್ರದಲ್ಲಿ ಪ್ರತಿ ಸಂಖ್ಯೆಗೂ ಅಧಿಪತಿ ಗ್ರಹ ಇರುತ್ತದೆ. ಇದರ ಪ್ರಕಾರ ಅದೃಷ್ಟ, ದುರಾದೃಷ್ಟ  ನಿರ್ಧಾರವಾಗುತ್ತದೆ.   

 6, 15 ಮತ್ತು 24 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 6 ಆಗಿರುತ್ತದೆ.  ರಾಡಿಕ್ಸ್ ಸಂಖ್ಯೆ 6 ರ ಅಧಿಪತಿ ಗ್ರಹ ಶುಕ್ರ. ಹಾಗಾಗಿ ಈ ದಿನಾಂಕದಲ್ಲಿ ಹುಟ್ಟಿದವರಿಗೆ ಶುಕ್ರ ದೆಸೆ ಅಧಿಕವಾಗಿರುತ್ತದೆ.

ಇವರು ಮೃದು ಸ್ವಭಾವದವರಾಗಿರುತ್ತಾರೆ. ಇವರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಹಣ ಸಂಗ್ರಹಿಸುವುದೆಂದರೆ ಇವರಿಗೆ ತುಂಬಾ ಕಷ್ಟ. ಇವರತ್ತ ಎದುರಿಗಿರುವವರು  ಬಹಳ ಬೇಗ ಆಕರ್ಷಿತರಾಗುತ್ತಾರೆ.

ಇವರು ತಮ್ಮ ಜೀವನದ ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳುತ್ತಾರೆ.  ಇವರ ಪ್ರತೀ ನಿರ್ಧಾರ ಸರಿಯಾಗಿಯೇ ಇರುವುದು. ಉತ್ತಮ ಜೀವನವನ್ನು ನಡೆಸುತ್ತಾರೆ ಮತ್ತು ಸಮಾಜದಲ್ಲಿ ಗೌರವಾನ್ವಿತರಾಗಿರುತ್ತಾರೆ.

ಇವರು ಹುಟ್ಟಿದ ಕೂಡಲೇ ತಂದೆ ತಾಯಿಯ ಭಾಗ್ಯ ಬೆಳಗುತ್ತಾರೆ.ಇವರು ಹುಟ್ಟಿದ ಕ್ಷಣದಿಂದಲೇ ಹೆತ್ತವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯುವುದು. 

ಇವರು ಬಾಳ ಸಂಗಾತಿಯ ಪಾಲಿಗೂ  ಅದೃಷ್ಟ ದೇವತೆಯಾಗಿರತ್ತಾರೆ. ಇವರು ಪತಿ ಮತ್ತು ಪತಿಯ ಪಾಲಿಗೆ ಬೆಳಕಾಗುತ್ತಾರೆ. ಇವರ ಪ್ರವೇಶದೊಂದಿಗೆ ಗಂಡನ ಜೀವನಕ್ಕೆ ಸೌಭಾಗ್ಯ ಪ್ರವೇಶವಾಗುತ್ತದೆ.  

ಇವರು ಜೀವನವನ್ನು ಉತ್ತಮಗೊಳಿಸಲು ಯಾವಾಗಲೂ ನೀಲಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಇಲ್ಲದಿದ್ದರೆ, ಕೆಲವು ವಿಶೇಷ ಕೆಲಸ ಮಾಡುವ ಸಂದರ್ಭಗಳಲ್ಲಿಯಾದರೂ ನೀಲಿ ಬಣ್ಣದ ಬಟ್ಟೆಯನ್ನು ಧರಿಸಬೇಕು.

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link