ಸದಾ ಸಿರಿವಂತರ ಸಾಲಿನಲ್ಲಿ ನಿಲ್ಲುತ್ತಾರೆ ಈ ರಾಶಿಯವರು! ಎಂಥಾ ಪರಿಸ್ಥಿತಿಯಲ್ಲಿಯೂ ಇವರ ಜೇಬು ಖಾಲಿಯಾಗುವುದೇ ಇಲ್ಲ !
ರಾಶಿಯವರ ಜೀವನದಲ್ಲಿ ಎಂದಿಗೂ ಹಣದ ಕೊರತೆಯಾಗುವುದಿಲ್ಲ. ಅವರ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಎದುರಾಗುವುದೇ ಇಲ್ಲ. ಸಿರಿವಂತಿಕೆಯ ವಿಷಯದಲ್ಲಿ ಈ ರಾಶಿಯವರು ಅಗ್ರಸ್ಥಾನದಲ್ಲಿರುತ್ತಾರೆ.
ಶ್ರೀಮಂತನಾಗುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರುವ ಗುಣಲಕ್ಷಣಗಳು ಮತ್ತು ಸ್ವಭಾವವನ್ನು ಈ ರಾಶಿಯವರು ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯ ಸಂಪತ್ತು ಅವನ ಜಾತಕದ ಎರಡನೇ ಮತ್ತು ಎಂಟನೇ ಮನೆಗಳಿಗೆ ಸಂಬಂಧಿಸಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದ ಎರಡನೇ ಮತ್ತು ಎಂಟನೇ ಮನೆಗಳು ವೃಷಭ ರಾಶಿ ಮತ್ತು ವೃಶ್ಚಿಕ ರಾಶಿಯಿಂದ ಆಳಲ್ಪಡುತ್ತವೆ.
ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯ ಜನರು ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು. ಇವರಿಗೆ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ. ಹುಟ್ಟುತ್ತಲೇ ಇವರು ಲಕ್ಷ್ಮೀ ದೇವಿಯ ಆಶೀರ್ವಾದ ಪಡೆದುಕೊಂಡೇ ಬರುತ್ತಾರೆ.
ಜ್ಯೋತಿಷ್ಯದ ಪ್ರಕಾರ, ತುಲಾ ರಾಶಿಯನ್ನು ವಿಶ್ವದ ಶ್ರೀಮಂತ ರಾಶಿ ಎದ್ನು ಹೇಳಲಾಗುತ್ತದೆ. ಈ ರಾಶಿಯವರು ಬಲವಾದ ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮದ ಆಧಾರದ ಮೇಲೆ ಶ್ರೀಮಂತರಾಗುತ್ತಾರೆ.
ಜ್ಯೋತಿಷ್ಯದ ಪ್ರಕಾರ ವೃಶ್ಚಿಕ ರಾಶಿಯವರು ಆದಾಯವನ್ನು ಗಳಿಸುವ ವಿಷಯದಲ್ಲಿ ಯಾವತ್ತೂ ಮೇಲೂ ಗೈ ಸಾಧಿಸುತ್ತಾರೆ. ಇವರ ಕೈಯ್ಯಲ್ಲಿ ಯಾವತ್ತೂ ಹಣಕ್ಕೆ ಕೊರತೆ ಎದುರಾಗುವುದಿಲ್ಲ. ಇವರ ಜೇಬು ಹಣದಿಂದ ತುಂಬಿರುತ್ತದೆ.
ಮಿಥುನ ರಾಶಿಯವರ ಕೈಯಲ್ಲಿ ಹಣ ಉಳಿಯುವುದೇ ಇಲ್ಲ. ಮೀನ ರಾಶಿಯವರು ಕೂಡಾ ಹಣ ಗಳಿಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಕರ್ಕ ರಾಶಿಯವರು ಕಠಿಣ ಪರಿಶ್ರಮ ಮತ್ತು ಬಲವಾದ ಇಚ್ಛೆಯ ನಂತರವೂ ಶ್ರೀಮಂತರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)