`ಉಫ್`..! ಮೌನಿ ರಾಯ್ ಗಾರ್ಜಿಯಸ್ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ : ಫೋಟೋಸ್ ನೋಡಿ..
ಮೌನಿ ರಾಯ್ ಬಾಲಿವುಡ್ ಹಾಟ್ ನಟಿಯರಲ್ಲಿ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಸುಂದರಿ ಆಗಾಗ ಹೊಸ ಫೋಟೋ ಶೂಟ್ ಮೂಲಕ ಸುದ್ದಿಯಲ್ಲಿರುತ್ತಾಳೆ.
ತಮ್ಮ ರಜಾದಿನದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಹಂಚಿಕೊಳ್ಳುವ ಮೌನಿ, ಬೀಚ್ ನಲ್ಲಿ ಬಿಕಿನಿ ತೊಟ್ಟು ಕ್ಯಾಮರಾಗೆ ಪೋಸ್ ನೀಡಿರುತ್ತಾರೆ.
ರಜಾದಿನಗಳ ಥ್ರೋಬ್ಯಾಕ್ ಫೋಟೋಗಳನ್ನು ಪೋಸ್ಟ್ ಮಾಡಿರುವ ಮೌನಿಯ ಅಂದಕ್ಕೆ ನೆಟ್ಟಿಗರು, ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮೌನಿ ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಬಿಕಿನಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಬಳುಕುವ ಬಳ್ಳಿಯಂತ ತಮ್ಮ ಅಂದವನ್ನು ಪ್ರದರ್ಶನ ಮಾಡಿದ್ದಾರೆ.
ಹಾಟ್ ಗ್ರೇ ಬಿಕಿನಿಯನ್ನು ಧರಿಸಿರುವ ಮೌನಿ, ಸಮುದ್ರತೀರದ ಅಂದವನ್ನು ಸವಿತ್ತಾ ಮಲಗಿಕೊಂಡಿರುವ ಫೋಟೋ ಅದ್ಭುತವಾಗಿದೆ.
ಅಭಿಷೇಕ್ ಬಚ್ಚನ್ ಅಭಿನಯದ ರನ್ ಚಿತ್ರದ ಮೂಲಕ ಮೌನಿ ಚಿತ್ರರಂಗಕ್ಕೆ ಕಾಲಿಟ್ಟುರು. ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಶೋನಲ್ಲಿ ಸಹ ಕಾಣಿಸಿಕೊಂಡಿದ್ದರು.
ಮೌನಿ ಮುಂದೆ ಹಾರರ್-ಕಾಮಿಡಿ ದಿ ವರ್ಜಿನ್ ಟ್ರೀ ಚಿತ್ರದಲ್ಲಿ ಪಾಲಕ್ ತಿವಾರಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರವನ್ನು ಸಂಜಯ್ ದತ್ ತಮ್ಮ ನಿರ್ಮಾಣ ಕಂಪನಿ ತ್ರೀ ಡೈಮೆನ್ಷನ್ ಮೋಷನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.