ಮದುವೆಗೂ ಮುನ್ನವೇ ತಾಯಿಯಾದ ಮೃಣಾಲ್ ಠಾಕುರ್..!ನಟಿ 8 ವರ್ಷದ ಮಗುವಿಗೆ ತಾಯಿನಾ..?ವಿಡಿಯೋ ವೈರಲ್
ಮದುವೆಗೂ ಮುನ್ನವೇ ತಾಯಂದಿರಾಗಿ ಜಗತ್ತಿನ ಮುಂದೆ ಅದನ್ನು ಖುಷಿಯಿಂದ ಒಪ್ಪಿಕೊಂಡ ಅದೆಷ್ಟೋ ನಟಿಯರು ಚಿತ್ರರಂಗದಲ್ಲಿ ಇದ್ದಾರೆ. 32 ವರ್ಷದ ನಟಿ ಮೃಣಾಲ್ ಠಾಕೂರ್ ಕೂಡ ಮದುವೆಯಾಗದಿದ್ದರೂ ಸುಂದರ ಮಗಳಿಗೆ ತಾಯಿಯಾಗಿದ್ದಾಳೆ. ಇದು ವಿಚಿತ್ರ ಎನಿಸಿದರೂ ನಟಿ 8 ವರ್ಷದ ಬಾಲಕಿಯ ತಾಯಿಯಾಗಿರುವುದು ನಿಜ. ಸ್ವತಹಃ ಅವರೇ ಈ ಸತ್ಯವನ್ನು ಬಿಚ್ಚಿಟ್ಟಿದ್ದು, ಈ ನಂತರ ಹುಟ್ಟುವ ಮಗು ನನ್ನ ಎರಡನೇ ಮಗು ಎಂದು ನಟಿ ಹೇಳಿಕೊಂಡಿದ್ದಾರೆ.
ಮೃಣಾಲ್ ಠಾಕೂರ್ ಅವರ ಹೆಸರು ಕುಶಾಲ್ ಟಂಡನ್, ಗಾಯಕ ಬಾದ್‌ಶಾ, ಸಿದ್ಧಾಂತ್ ಚತುರ್ವೇದಿ ಅವರಂತಹ ತಾರೆಗಳೊಂದಿಗೆ ತುಳುಕು ಹಾಕಿಕೊಳ್ಳುತ್ತಿರುತ್ತಾದೆ. ಇತ್ತೀಚೆಗಷ್ಟೇ ಆಕೆಗೆ ವಿರಾಟ್ ಕೊಹ್ಲಿ ಅವರ ಮೇಲೆ ಪ್ರೀತಿ ಇದೆ ಎಂಬವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತ್ತು. ಆದರೆ ಈ ಸುದ್ದಿಗಳನ್ನು ಅಲ್ಲಗಳೆದಿರುವ ಅವರು, ಇಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮನವಿ ಮಾಡಿ ‘ಸ್ಟಾಪ್ ಇಟ್ ಓಕೆ’ ಎಂದು ಬರೆದಿದ್ದಾರೆ. ಈ ಸುದ್ದಿಗಳ ನಡುವೆ ಇದೀಗ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಪುಟ್ಟ ಬಾಲಕಿಯನ್ನು ತನ್ನವಳೆಂದು ಬಣ್ಣಿಸಿ ಆಕೆ ತನ್ನ ಮೊದಲ ಮಗು ಎಂದು ಹೇಳಿದ್ದಾಳೆ.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಟಿ 'ಇವಳು ನನ್ನ ಮೊದಲ ಮಗು, ನಂತರ ನನಗೆ ಮಗುವಾದರೆ ಅದು ಎರಡನೆಯದ್ದು. ಅವಳು ನನ್ನನ್ನು ಯಾಶ್ನಾ ಅಥವಾ ಮ್... ಎಂದು ಕರೆಯುತ್ತಾಳೆ ಅವಳಿಂದ ಕಲಿಯುವುದು ಎಷ್ಟು ಸುಂದರ, ನನಗೆ ಆಕೆ ಏನು ಕಲಿಸಿದ್ದಾಳೆ ಎಂದು ಆ ದಡ್ಡಿಗೆ ತಿಳಿದಿಲ್ಲ' ಎಂದಿದ್ದಾರೆ.
ಮೃಣಾಲ್ ಠಾಕೂರ್ ಅವರನ್ನು ತನ್ನ ಮೊದಲ ಮಗುವಾಗಿ ಸ್ವೀಕರಿಸಿದ್ದಾರೆ. ಅವರ ವಯಸ್ಸು 8 ವರ್ಷ. ಬಹುಶಃ ನಟಿ ಮಗುವನ್ನು ದತ್ತು ತೆಗೆದುಕೊಂಡಿರಬಹುದು ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಈ ಹುಡುಗಿಯನ್ನು ಮೃಣಾಲ್ ದತ್ತು ಪಡೆದಿಲ್ಲ ಅಥವಾ ಈ ಮಗುವಿಗೆ ಜನ್ಮ ಕೂಡ ನೀಡಿಲ್ಲ . ಈ ಹುಡುಗಿ ನಿಜವಾಗಿಯೂ ಬಾಲ ನಟಿ ಕಿಯಾರಾ ಖನ್ನಾ. ಮೃಣಾಲ್ ಅವರು ಸೌತ್ ಸ್ಟಾರ್ ನಾನಿ ಅವರ 'ಹಾಯ್ ನನ್ನ' ಚಿತ್ರದಲ್ಲಿ ಕಿಯಾರಾ ಜೊತೆ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಮೃಣಾಲ್ 'ಯಶ್ನಾ' ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಯಾರಾ 'ಮಹಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವೈರಲ್ ಆಗುತ್ತಿರುವ ಈ ವೀಡಿಯೊವನ್ನು ಕಿಯಾರಾ ಅವರೇ ಹಂಚಿಕೊಂಡಿದ್ದಾರೆ, ಇದನ್ನು ಜನರು ಮತ್ತೆ ಇಷ್ಟಪಡುತ್ತಿದ್ದಾರೆ. ಮೃಣಾಲ್ ಅವರು ವೀಡಿಯೊದಲ್ಲಿ ಕೆಂಪು ಎಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ. ಕಿಯಾರಾ ವಿಡಿಯೋ ಜೊತೆಗೆ ಸುಂದರವಾದ ಶೀರ್ಷಿಕೆಯನ್ನೂ ಬರೆದಿದ್ದಾರೆ. ಅವರು ಬರೆದಿದ್ದಾರೆ- 'ನಿನ್ನನ್ನು ನನ್ನ ಜೀವನದಲ್ಲಿ ಪಡೆಯುವುದಕ್ಕೆ ನಾನು ಸಾಕಷ್ಟು ಅದೃಷ್ಟ ಮಾಡಿದ್ದೇನೆ. ನಾನು ನಿನ್ನನ್ನು ಪಡೆಯಲು ಕೃತಜ್ಞಳಾಗಿದ್ದೇನೆ, ಅಷ್ಟೆ ಲ್ಲ ನಿನ್ನನ್ನು ನಾನು ತುಂಬಾ ಪ್ರೀತಿ ಮಾಡುತ್ತಾನೆ ಅಷ್ಟೆ ಅಲ್ಲ ಜಾಸ್ತಿ ಮಿಸ್ ಕೂಡ ಮಾಡಿಕೊಳ್ಳುತ್ತೇನೆ.ಶೀಘ್ರವೇ ನಿನ್ನನ್ನು ಕಾಣಲು ಬರುತ್ತಿದ್ದೇನೆ" ಎಂದು ಬರೆದು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.