ಭಾರತದ ಈ ಪ್ರತಿಷ್ಠಿತ ಶಾಲೆಯಲ್ಲಿ ಮಗಳಿಗೆ ದಾಖಲಾತಿ ಮಾಡಿಸಿದ ಧೋನಿ! 3ನೇ ತರಗತಿ ಓದುತ್ತಿರುವ ಝಿವಾ ಫೀಜ್ ಎಷ್ಟು ಗೊತ್ತಾ? ಆ ಸ್ಕೂಲ್ ಯಾವುದು?
ಟೀಂ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ, ತಮ್ಮ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಅವರೊಂದಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ.
ಅಂದಹಾಗೆ ಈ ವರದಿಯಲ್ಲಿ ನಾವು ಧೋನಿ ಮಗಳು ಝಿವಾ ಯಾವ ಶಾಲೆಯಲ್ಲಿ ಓದುತ್ತಿದ್ದಾಳೆ? ಅಲ್ಲಿನ ಫೀಸ್ ಎಷ್ಟು? ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ
ಝಿವಾ ರಾಂಚಿಯ ಪ್ರತಿಷ್ಠಿತ ಸಂಸ್ಥೆ ಟೌರಿಯನ್ ವರ್ಲ್ಡ್ ಸ್ಕೂಲ್ʼನಲ್ಲಿ ಓದುತ್ತಿದ್ದಾರೆ. ಈ ಟೌರಿಯನ್ ವರ್ಲ್ಡ್ ಸ್ಕೂಲ್ ಅನ್ನು ಅಮಿತ್ ಬಜಾಜ್ ಅವರು 2008 ರಲ್ಲಿ ಪ್ರಾರಂಭಿಸಿದರು.
ಟೌರಿಯನ್ ವರ್ಲ್ಡ್ ಸ್ಕೂಲ್ 65 ಎಕರೆಗಳಷ್ಟು ವಿಸ್ತಾರವಾಗಿದ್ದು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಹಳೆಯ ವಿದ್ಯಾರ್ಥಿ ಅಮಿತ್ ಬಜಾಜ್ ಶಾಲೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಬಜಾಜ್, ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆ ಎರಡನ್ನೂ ಕೇಂದ್ರೀಕರಿಸುವ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ.
ಶಾಲೆಯು ಸಾವಯವ ಕೃಷಿ, ಕುದುರೆ ಸವಾರಿ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸುವಂತಹ ಶಿಕ್ಷಣವನ್ನು ನೀಡುತ್ತದೆ. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳು ಪಠ್ಯಕ್ರಮದ ಪ್ರಮುಖ ಭಾಗವಾಗಿದೆ. ಟೌರಿಯನ್ ವರ್ಲ್ಡ್ ಸ್ಕೂಲ್ ಅಂತರಾಷ್ಟ್ರೀಯ ಶಿಕ್ಷಕರನ್ನು ನೇಮಿಸಿಕೊಂಡಿದೆ.

ಇನ್ನು ಟೌರಿಯನ್ ವರ್ಲ್ಡ್ ಸ್ಕೂಲ್‌ನಲ್ಲಿ ಓದುತ್ತಿರುವ ಝಿವಾ ಅವರ ಶಿಕ್ಷಣ ಶುಲ್ಕ 4 ಲಕ್ಷ ರೂ. ಎಲ್ ಕೆಜಿಯಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕ ಸುಮಾರು 4.40 ಲಕ್ಷ ರೂ. ಇನ್ನು 9ರಿಂದ 12ನೇ ತರಗತಿಗೆ ಸುಮಾರು 4.80 ಲಕ್ಷ ರೂ. ಶುಲ್ಕ ಪಾವತಿಸಬೇಕು.