ಎಂಎಸ್ ಧೋನಿ ಅತ್ತೆ ದೇಶದ ಪ್ರಖ್ಯಾತ ಬ್ಯುಸಿನೆಸ್ ವುಮೆನ್! ಸುಮಾರು 800 ಕೋಟಿ ರೂ. ವ್ಯವಹಾರ ಸಾಮ್ರಾಜ್ಯಕ್ಕೆ ಯಜಮಾನಿ ಈಕೆ... ಯಾರು ಗೊತ್ತಾ?
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿರಲಿ, ಎಲ್ಲೇ ಇರಲಿ... ಅಭಿಮಾನಿಗಳ ದಂಡು ಅಲ್ಲಿ ಹರಿದುಬರುತ್ತದೆ. ಭಾರತೀಕ ಕ್ರಿಕೆಟ್ ಜಗತ್ತಿಗೆ ಹೊಸ ಮೆರುಗು ತಂದ ಈ ವ್ಯಕ್ತಿ ಕೋಟ್ಯಾಂತರ ರೂ. ಆಸ್ತಿಗೆ ವಾರಸುದಾರ ಕೂಡ ಹೌದು.
ಧೋನಿ ಕೇವಲ ಒಬ್ಬ ಕ್ರಿಕೆಟಿಗನಲ್ಲ.. ಅದರ ಹೊರತಾಗಿ ಯಶಸ್ವಿ ಉದ್ಯಮಿ ಕೂಡ ಹೌದು. ಇನ್ನು ಇವರಷ್ಟೇ ಅಲ್ಲದೆ, ಧೋನಿ ಅತ್ತೆ ಶೀಲಾ ಸಿಂಗ್ ಕೂಡ ಉದ್ಯಮಿಯಾಗಿದ್ದು, ಕೋಟಿಗಟ್ಟಲೆ ಮೌಲ್ಯದ ಕಂಪನಿ ಹೊಂದಿದ್ದಾರೆ.
ಕ್ಯಾಪ್ಟನ್ ಕೂಲ್ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ನಾವಿಂದು ಧೋನಿ ಅತ್ತೆ ಶೀಲಾ ಸಿಂಗ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಎಂಎಸ್ ಧೋನಿ ಅತ್ತೆ, ಸಾಕ್ಷಿ ಧೋನಿ ಅವರ ತಾಯಿ ಶೀಲಾ ಸಿಂಗ್ ಸಿಇಒ ಆಗಿರುವ ಕಂಪನಿ ಪ್ರಾರಂಭವಾಗಿದ್ದು 2019 ರಲ್ಲಿ. ಧೋನಿ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಈ ಕಂಪನಿಯನ್ನು ಸಾಕ್ಷಿ ಧೋನಿ 2019 ರಲ್ಲಿ ಪ್ರಾರಂಭಿಸಿದರು. ಸಾಕ್ಷಿ ಅವರ ತಾಯಿ ಶೀಲಾ ಸಿಂಗ್ 2020 ರಲ್ಲಿ ಈ ಕಂಪನಿಯ ಭಾಗವಾದರು.
ಧೋನಿ ಎಂಟರ್‌ಟೈನ್‌ಮೆಂಟ್ʼನ ಮಾಲೀಕರು ಶೀಲಾ ಸಿಂಗ್ ಅಲ್ಲ, ಸಾಕ್ಷಿ ಧೋನಿ. ಕಂಪನಿಯ ಬಹುಪಾಲು ಷೇರುಗಳನ್ನು ಸಾಕ್ಷಿ ಹೊಂದಿದ್ದಾರೆ. ಆದರೆ, ಶೀಲಾ ಸಿಂಗ್ ಈ ಕಂಪನಿಯಲ್ಲಿ ಗಣನೀಯ ಪಾಲನ್ನು ಹೊಂದಿದ್ದಾರೆ ಮತ್ತು ಕಂಪನಿಯ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರ ಫಲವಾಗಿಯೇ ಸಾಕ್ಷಿ ಮತ್ತು ಶೀಲಾ ಸಿಂಗ್ ಒಟ್ಟಾಗಿ ಧೋನಿ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಅನ್ನು ಕೇವಲ 4 ವರ್ಷಗಳಲ್ಲಿ 800 ಕೋಟಿ ರೂ. ವ್ಯವಹಾರದತ್ತ ಕೊಂಡೊಯ್ದಿದ್ದಾರೆ ಎಂದೇ ಹೇಳಬಹುದು.
ಇನ್ನು ಇದಷ್ಟೇ ಅಲ್ಲದೆ, ಸಾಕ್ಷಿ ಧೋನಿ ಅನೇಕ ವ್ಯವಹಾರಗಳಲ್ಲಿ ಸಕ್ರಿಯರಾಗಿದ್ದಾರೆ. ತನ್ನ ತಾಯಿಯೊಂದಿಗೆ 800 ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ನಡೆಸುವುದರ ಜೊತೆಗೆ, ಹಾಕಿ ಕ್ಲಬ್ʼನ ಸಹ-ಮಾಲೀಕರಾಗಿದ್ದಾರೆ. ಸಾಕ್ಷಿ ಮತ್ತು ಎಂಎಸ್ ಧೋನಿ ಒಟ್ಟಾಗಿ ಈ ಹಾಕಿ ಕ್ಲಬ್ ಅನ್ನು ನಡೆಸುತ್ತಿದ್ದು, ಕ್ಯಾಪ್ಟನ್ ಕೂಲ್ ಅನೇಕ ವ್ಯವಹಾರಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಇದೇ ಈ ಕಾರಣದಿಂದಾಗಿ ಅವರ ನಿವ್ವಳ ಮೌಲ್ಯವು 1000 ಕೋಟಿ ರೂ. ದಾಟುತ್ತಿದೆ.