ಪತ್ನಿ, ತಂದೆ-ತಾಯಿ ಅಲ್ಲ, ಧೋನಿ ಯಶಸ್ಸಿಗೆ ಮುಖ್ಯ ಕಾರಣವೇ ಈಕೆ..! ಇವರಿಲ್ಲದಿದ್ದರೆ ಎಂಎಸ್‌ಡಿ ಕ್ರಿಕೆಟಿಗನಾಗುತ್ತಿರಲಿಲ್ಲ..

Thu, 19 Sep 2024-9:08 pm,

ಹೌದು.. ಧೋನಿ ಕಿರಿಯ ಸಹೋದರ ಸಹೋದರಿಯರ ಬಗ್ಗೆ ಹೆಚ್ಚು ಯಾರಿಗೂ ಗೊತ್ತಿಲ್ಲ.. ಅದರಲ್ಲೂ ಎಂಎಸ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳುವುದು ಅಪರೂಪ. ಹೀಗಾಗಿ ಅವರ ಒಡಹುಟ್ಟಿದವರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಧೋನಿಗೆ ಹಿರಿಯ ಸಹೋದರ ನರೇಂದ್ರ ಸಿಂಗ್ ಧೋನಿ, ಜಯಂತಿ ಗುಪ್ತಾ ಎಂಬ ಒಬ್ಬ ಅಕ್ಕ ಇದ್ದಾಳೆ..  

ಧೋನಿ ಜಯಂತಿ ಗುಪ್ತಾ ಅವರಿಗಿಂತ ಮೂರ್ನಾಲ್ಕು ವರ್ಷ ಚಿಕ್ಕವರು ಎಂದು ವರದಿಯಾಗಿದೆ. ಜಯಂತಿ ಗುಪ್ತಾ ಅವರು ಧೋನಿ ಕ್ರಿಕೆಟ್ ಅನ್ನು ವೃತ್ತಿಯಾಗಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಧ್ಯ ಜಯಂತಿ ಮತ್ತು ಧೋನಿಯವರ ಒಡನಾಟ ಹೇಗಿತ್ತು ಎನ್ನುವುದರ ಬಗ್ಗೆ ತಿಳಿಯೋಣ..   

ಧೋನಿ 7 ಜುಲೈ 1981 ರಂದು ರಾಂಚಿಯಲ್ಲಿ ಜನಿಸಿದರು. ಪಾನ್ ಸಿಂಗ್ ಮತ್ತು ದೇವಕಿ ದೇವಿ ದಂಪತಿ ಮೂರನೇ ಮಗು ಮಹೇಂದ್ರ ಸಿಂಗ್‌ ಧೋನಿ. ಅಣ್ಣ ನರೇಂದ್ರ ಸಿಂಗ್ ಧೋನಿ ಮತ್ತು ಅಕ್ಕನ ಹೆಸರು ಜಯಂತಿ ಗುಪ್ತಾ. ಎಂಎಸ್ ಧೋನಿ ಅವರ ಕ್ರಿಕೆಟ್ ಜೀವನದಲ್ಲಿ ಜಯಂತಿ ಗುಪ್ತಾ ಪ್ರಮುಖ ಪಾತ್ರ ವಹಿಸಿದ್ದಾರೆ.  

ಮಧ್ಯಮ ವರ್ಗದ ಕುಟುಂಬ, ಪಾನ್‌ ಸಿಂಗ್‌ ಸಣ್ಣ ಸರ್ಕಾರಿ ಉದ್ಯೋಗ ಮಾಡುತ್ತಿದ್ದರು. ಇದರಿಂದಾಗಿ ಧೋನಿಗೆ ಆರಂಭದಲ್ಲಿ ದೊಡ್ಡ ಕನಸು ಕಾಣುವ ಧೈರ್ಯ ಇರಲಿಲ್ಲ. ಆದರೂ, ಅವರ ಸಹೋದರಿ ಅವರನ್ನು ಪ್ರೋತ್ಸಾಹಿಸಿದರು. ಎಷ್ಟೋ ಅಡೆತಡೆಗಳ ನಡುವೆಯೂ ಕ್ರಿಕೆಟ್ ಮೇಲಿನ ಉತ್ಸಾಹ ಕೈ ಬಿಡದಂತೆ ಬೆಂಬಲ ನೀಡಿದರು.   

ಮಾಧ್ಯಮ ವರದಿಗಳ ಪ್ರಕಾರ, ಜಯಂತಿ ಗುಪ್ತಾ ರಾಂಚಿಯ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನ ವೈಯಕ್ತಿಕ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾಳೆ. ಸಾಮಾನ್ಯ ಜೀವನ ನಡೆಸಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.  

ಜಯಂತಿ ಗುಪ್ತಾ ಧೋನಿಯ ಆಪ್ತ ಸ್ನೇಹಿತರಲ್ಲಿ ಒಬ್ಬರಾದ ಗೌತಮ್ ಗುಪ್ತಾ ಅವರನ್ನು ವಿವಾಹವಾದರು. ಗೌತಮ್ ಧೋನಿಗೆ ಕ್ರಿಕೆಟ್ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಹಾಯ ಮಾಡಿದರು ಮತ್ತು ಪ್ರೋತ್ಸಾಹಿಸಿದರು. ಕಷ್ಟದ ಸಮಯದಲ್ಲಿ ಅವರೊಂದಿಗೆ ಇದ್ದರು. ಆದರೆ ಜಯಂತಿ ಮತ್ತು ಗೌತಮ್ ಯಾವಾಗ ಮದುವೆಯಾದರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಧೋನಿ ಅವರ ಜೀವನಚರಿತ್ರೆಯ ಪ್ರಕಾರ, ಅವರು ಭಾರತಕ್ಕಾಗಿ ಆಡುವ ಮೊದಲು, ಅವರ ಸಹೋದರಿ ವಿವಾಹವಾದರು ಎನ್ನಲಾಗಿದೆ..  

ಗೌತಮ್ ಮತ್ತು ಜಯಂತಿ ರಾಂಚಿಯಲ್ಲಿ ಉಳಿದುಕೊಂಡಿದ್ದಾರೆ. ಅವರ ಕುಟುಂಬ ಸಾಮಾಜಿಕ ಜಾಲತಾಣಗಳಿಂದ ಬಹಳ ದೂರದಲ್ಲಿದೆ. ಅದಕ್ಕಾಗಿಯೇ ಅವರ ಬಗ್ಗೆ ವೈಯಕ್ತಿಕ ವಿವರಗಳು ವ್ಯಾಪಕವಾಗಿ ತಿಳಿದಿಲ್ಲ. ಧೋನಿ ಪ್ರಸ್ತುತ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಈ ಯಶಸ್ಸಿಗೆ ಧೋನಿಯ ಕಠಿಣ ಪರಿಶ್ರಮ ಪ್ರಮುಖ. ಆದರೆ ಅವರ ಪ್ರಯಾಣವನ್ನು ರೂಪಿಸುವಲ್ಲಿ ಅವರ ಸಹೋದರಿಯ ಕೊಡುಗೆ ಅಪಾರ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link