GOAT ನಲ್ಲಿ ಧೋನಿ ನಟನೆ ಕನ್ಫರ್ಮ್?! ವಿಜಯ್‌ಗೆ ವಿಲನ್‌ ಆಗ್ತಾರಾ ಕ್ಯಾಪ್ಟನ್‌ ಕೂಲ್‌

Sun, 01 Sep 2024-5:44 pm,

ನಟ ವಿಜಯ್ ಅವರು ಪೂರ್ಣಾವಧಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.. ಹಾಗಾಗಿ ಅವರ ಕೊನೆಯ ಚಿತ್ರ ದಿ ಗೋಟ್‌ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಜೊತೆಗೆ ಪ್ರಶಾಂತ್, ಪ್ರಭುದೇವ, ಅಜ್ಮಲ್, ಜಯರಾಮ್ ಮುಂತಾದವರು ನಟಿಸಿದ್ದಾರೆ. ತಂದೆ ಮತ್ತು ಮಗನ ದ್ವಿಪಾತ್ರದಲ್ಲಿ ನಟಿಸಿರುವ ವಿಜಯ್ ಎದುರು ಸ್ನೇಹಾ ಮತ್ತು ಮೀನಾಕ್ಷಿ ಚ್ಲೇತ್ರಿ ಅಭಿನಯಿಸಿದ್ದಾರೆ.   

ಇತ್ತೀಚಿಗೆ ರಿಲೀಸ್‌ ಆದ ನಟ ವಿಜಯ್ ಒಲ್ಡ್‌ ಲುಕ್‌ ಅಭಿಮಾನಿಗಳಿಂದ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಆನಂತರ ಬಿಡುಗಡೆಯಾದ ಚಿತ್ರದ ಹಾಡುಗಳು ಕೂಡ ಚಿತ್ರತಂಡ ನಿರೀಕ್ಷಿಸಿದಷ್ಟು ಹಿಟ್ ಆಗಲಿಲ್ಲ. ಆದರೆ ನಿನ್ನೆ ಬಿಡುಗಡೆಯಾದ 'ಮತ್ತ' ಹಾಡಿಗೆ ಅಭಿಮಾನಿಗಳಿಂದ "ಥಿಯೇಟ್ರಿಕಲ್ ಮೆಟೀರಿಯಲ್" ಎಂಬ ಕಾಮೆಂಟ್‌ಗಳು ಬಂದಿವೆ.  

ಗೋಟ್‌ ಚಿತ್ರದ ನಿರ್ದೇಶಕ ವೆಂಕಟ್ ಪ್ರಭು ಅವರು ಅಪಾರ ಕ್ರಿಕೆಟ್ ಅಭಿಮಾನಿಯಾಗಿದ್ದು, ಚೆನ್ನೈ ಐಪಿಎಲ್‌ನಲ್ಲಿ ಅವರ ನೆಚ್ಚಿನ ತಂಡವಾಗಿದೆ. ಅವರು ನಿರ್ದೇಶಿಸುವ ಎಲ್ಲಾ ಚಿತ್ರಗಳಲ್ಲಿ ಖಂಡಿತವಾಗಿಯೂ ಕೆಲವು ಸಿಎಸ್‌ಕೆ ಉಲ್ಲೇಖಗಳನ್ನು ಹಾಕುತ್ತಾರೆ.   

ಹಾಗೆ ನೋಡಿದರೆ ‘ದಿ ಗೋಟ್‌’ ಚಿತ್ರದಲ್ಲೂ ಇದೇ ರೀತಿಯ ಉಲ್ಲೇಖ ಇರಬಹುದೆಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಈ ಚಿತ್ರದಲ್ಲಿ ಧೋನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಸಹ ಕೇಳಿಬರುತ್ತಿದೆ. ಈ ಕುರಿತು ವೆಂಕಟ್‌ ಅವರು ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ.   

ಅರವಿಂದ್ ಆಕಾಶ್ ವೆಂಕಟ್ ಪ್ರಭು ಅವರ ಆಪ್ತ ಸ್ನೇಹಿತ ಮತ್ತು ಸಹನಟ. ಅವರು ಸಹ ಗೋಟ್‌ನಲ್ಲೂ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಚಿತ್ರದ ಕುರಿತು ಮಾತನಾಡಿದ ಅವರಿಗೆ, ಧೋನಿಯ ಅತಿಥಿ ಪಾತ್ರದ ಬಗ್ಗೆ ಕೇಳಲಾಯಿತು. ಅದಕ್ಕೆ ಅವರು, “ನಾವು ಕ್ಲೈಮ್ಯಾಕ್ಸ್‌ನಲ್ಲಿ ಸಿಎಸ್‌ಕೆ ತೋರಿಸುತ್ತಿದ್ದೇವೆ.. ಕ್ಲೈಮ್ಯಾಕ್ಸ್ ನಲ್ಲಿ ತೆರೆಮೇಲೆ ಥಲಾ ಬರುತ್ತಾರೆ..” ಎಂದು ಹೇಳಿದ್ದಾರೆ.   

ಈ ಒಂದು ಹೇಳಿಕೆ ಈ ಚಿತ್ರದಲ್ಲಿ ಧೋನಿಯ ಅತಿಥಿ ಪಾತ್ರವನ್ನು ಖಚಿತಪಡಿಸಿದೆ. ಒಟ್ಟಾರೆಯಾಗಿ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿರುವ ಗೋಟ್‌ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಇದಾದ ನಂತರ ವಿಜಯ್ ತಮ್ಮ 69ನೇ ಚಿತ್ರದಲ್ಲೂ ನಟಿಸಲಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link