ವಿಕೆಟ್ ಕೀಪರ್ ಆಗಿದ್ದು ಬ್ಯಾಟಿಂಗ್’ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿದ ಕ್ರಿಕೆಟಿಗ ಯಾರು? ಅಗ್ರ 5ರಲ್ಲಿ ನಮ್ಮವ ಒಬ್ಬನೇ

Fri, 04 Aug 2023-12:28 pm,

ಕ್ರಿಕೆಟ್ ಇತಿಹಾಸದಲ್ಲೇ ಟೆಸ್ಟ್ ಕ್ರಿಕೆಟ್ ಎಂಬುದು ಅತೀ ಪ್ರಸಿದ್ಧವಾದುದು, ಈ ಟೂರ್ನಿಯಲ್ಲಿ ಆಡಬೇಕೆಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಈ ಆಟದ ಸುದೀರ್ಘ ಸ್ವರೂಪವು ತನ್ನ ಎದುರಾಳಿಯೊಂದಿಗೆ ಐದು ಅಥವಾ ನಾಲ್ಕು ದಿನಗಳ ಆಕ್ಷನ್-ಪ್ಯಾಕ್ಡ್ ಯುದ್ಧವನ್ನು ಆಯೋಜನೆ ಮಾಡಿದಂತಿರುತ್ತದೆ. ಅಷ್ಟೇ ಅಲ್ಲದೆ, ಮೈದಾನದಲ್ಲಿ ಪ್ರತಿಯೊಬ್ಬ ಕ್ರಿಕೆಟಿಗನ ದಕ್ಷತೆಯನ್ನು ಹೊರತರುತ್ತದೆ.

ನಾವಿಂದು ವಿಕೆಟ್ ಕೀಪರ್ ಆಗಿದ್ದುಕೊಂಡು, ತಮ್ಮ ತಮ್ಮ ರಾಷ್ಟ್ರಗಳಿಗಾಗಿ ಬೃಹತ್ ಮೊತ್ತದ ರನ್ ಗಳಿಸಿದ ಕೆಲವು ವಿಕೆಟ್-ಕೀಪರ್ ಕಂ ಬ್ಯಾಟರ್‌’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಜಿಂಬಾಬ್ವೆ ಕ್ರಿಕೆಟ್‌’ನ ದಂತಕಥೆ, ಆಂಡಿ ಫ್ಲವರ್ 1992 ರಿಂದ 2002 ರ ಅವಧಿಯಲ್ಲಿ 53.71 ರ ಸರಾಸರಿಯೊಂದಿಗೆ ಟೆಸ್ಟ್ ಕ್ರಿಕೆಟ್‌’ನಲ್ಲಿ 4404 ರನ್ ಗಳಿಸಿದ್ದಾರೆ.

ಸ್ಟೀವರ್ಟ್, ಇಂಗ್ಲೆಂಡ್ ಪರ 82 ಟೆಸ್ಟ್ ಪಂದ್ಯಗಳಲ್ಲಿ 34.92 ಸರಾಸರಿಯೊಂದಿಗೆ 4540 ರನ್ ಗಳಿಸಿದ್ದಾರೆ.

ಟೀಂ ಇಂಡಿಯಾದ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ 2005 ರಲ್ಲಿ ತಮ್ಮ ಟೆಸ್ಟ್‌’ಗೆ ಪಾದಾರ್ಪಣೆ ಮಾಡಿದರು. 224 ರನ್‌’ಗಳ ಅತ್ಯುತ್ತಮ ಸ್ಕೋರ್ ಹೊಂದಿರುವ ಅವರು, ಒಟ್ಟಾರೆಯಾಗಿ 4876 ರನ್‌ ಗಳಿಸಿದ್ದಾರೆ. ಭಾರತದ ಪರ 90 ಟೆಸ್ಟ್ ಪಂದ್ಯಗಳನ್ನು ಆಡಿದ ಅವರ ಸರಾಸರಿ 38.09 ಆಗಿದೆ.

ಮಾರ್ಕ್ ಬೌಷರ್ 1997 ರಿಂದ 2012 ರವರೆಗೆ ದಕ್ಷಿಣ ಆಫ್ರಿಕಾ ಪರ ರೆಡ್-ಬಾಲ್ ಕ್ರಿಕೆಟ್ ಆಡಿದ್ದಾರೆ. ಈ ಅವಧಿಯಲ್ಲಿ ಅವರು 30.30 ರ ಸರಾಸರಿಯೊಂದಿಗೆ 5515 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾದ ಪ್ರಸಿದ್ಧ ವಿಕೆಟ್‌ ಕೀಪರ್ ಮತ್ತು ಬ್ಯಾಟರ್, ಆಡಮ್ ಗಿಲ್‌ಕ್ರಿಸ್ಟ್ ಟೆಸ್ಟ್ ಕ್ರಿಕೆಟ್‌ ನಲ್ಲಿ ತಮ್ಮ ರಾಷ್ಟ್ರಕ್ಕಾಗಿ 5570 ರನ್ ಗಳಿಸಿದರು. ಅಜೇಯ 204 ರನ್‌ ಗಳ ಅತ್ಯಧಿಕ ಸ್ಕೋರ್‌ ನೊಂದಿಗೆ 47.61 ಸರಾಸರಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಮುಗಿಸಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link