ಪತ್ನಿ ಮರಣದ ನಂತರ ಮಗಳ ಸೌಂದರ್ಯಕ್ಕೆ ಮರುಳಾಗಿ ಆಕೆಯ ಜೊತೆಯೇ ಲೈಂಗಿಕ ಸಂಬಂಧ ಹೊಂದಿದ್ದ ತಂದೆ!? ಈತ ಬೇರಾರು ಅಲ್ಲ ಭಾರತದ ಪ್ರಖ್ಯಾತ...
ಮೊಘಲರ ಇತಿಹಾಸದಲ್ಲಿ ಜಹನಾರಾ ಎಂಬಾಕೆ ಅತ್ಯಂತ ಶ್ರೀಮಂತ ರಾಜಕುಮಾರಿ. ಅಷ್ಟೇ ಅಲ್ಲದೆ ಸೌಂದರ್ಯವತಿಯೂ ಹೌದು. ಈಕೆ ಚಕ್ರವರ್ತಿ ಷಹಜಹಾನ್‌ನ ಪುತ್ರಿ. ಜಹಾನಾರಾ ತನ್ನ ಸಹೋದರ ದಾರಾ ಶಿಕೋನನ್ನು ವಿವಾಹವಾಗುವ ಮೂಲಕ ವಿಚಿತ್ರ ಇತಿಹಾಸವನ್ನು ಬರೆದಿದ್ದಳು.
ಇದನ್ನು ಮೊಘಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಮದುವೆ ಎಂದು ಕರೆಯಲಾಯಿತು. ಫೆಬ್ರವರಿ 1633ರಲ್ಲಿ ಆಗ್ರಾದಲ್ಲಿ ನಡೆದ ಈ ಮದುವೆಯನ್ನು ಆಯೋಜಿಸಲು ಒಟ್ಟು 32 ಲಕ್ಷ ರೂ. ಖರ್ಚು ಮಾಡಲಾಗಿತ್ತು ಎಂದು ಹೇಳಲಾಗುತ್ತದೆ.
ಮೊಘಲ್ ಯುಗದ ಅತ್ಯಂತ ಶಕ್ತಿಶಾಲಿ ರಾಜಕುಮಾರಿಯ ಹೊರತಾಗಿ, ಜಹನಾರಾಳ ಜೀವನವು ಸಾಕಷ್ಟು ನೋವು, ಅಸಹನೀಯತೆ ಜೊತೆಗೆ ನಿಗೂಢತೆಯಿಂದಲೇ ಕೂಡಿತ್ತು ಎಂದು ಒಂದಷ್ಟು ಉಲ್ಲೇಖಗಳು ಹೇಳುತ್ತವೆ. ಅದರಲ್ಲಿ ಮುಖ್ಯವಾದ ವಿಚಾರವೆಂದರೆ, ಪತ್ನಿಯ ಮರಣದ ನಂತರ ಷಹಜಹಾನ್ ತನ್ನ ಮಗಳು ಜಹಾನರಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬುದು.
ಫ್ರೆಂಚ್ ಇತಿಹಾಸಕಾರ ಫ್ರಾಂಕೋಯಿಸ್ ಬರ್ನಿಯರ್ ತನ್ನ 'ಟ್ರಾವೆಲ್ಸ್ ಇನ್ ದಿ ಮೊಘಲ್ ಎಂಪೈರ್' ಪುಸ್ತಕದಲ್ಲಿ ಚಕ್ರವರ್ತಿ ಷಹಜಹಾನ್ ಜಹಾನಾರಾಳನ್ನು ತುಂಬಾ ಪ್ರೀತಿಸುತ್ತಿದ್ದ ಎಂದು ಬರೆದಿದ್ದಾರೆ. ಜಹಾನಾರಾ ತನ್ನ ತಂದೆಯನ್ನು ಎಷ್ಟು ನೋಡಿಕೊಂಡಳು ಎಂದರೆ ರಾಜನಿಗೆ ಯಾವುದೇ ಆಹಾರವನ್ನು ತಯಾರಿಸಿದರೂ ಅದು ಜಹನಾರ ಸಲಹೆಯ ನಂತರವೇ ತಯಾರಿಸಲ್ಪಟ್ಟಿತು. ಜಹನಾರಾನೇ ಏನು ಮಾಡಬೇಕೆಂದು ಮತ್ತು ಏನು ಮಾಡಬಾರದು ಎಂದು ನಿರ್ಧರಿಸುತ್ತಿದ್ದರು.
ಬರ್ನಿಯರ್ ಮತ್ತಷ್ಟು ಉಲ್ಲೇಖಿಸಿದ್ದು, "ಮೊಘಲ್ ಸುಲ್ತಾನರಲ್ಲಿ ಚಕ್ರವರ್ತಿ ಷಹಜಹಾನ್ ಮತ್ತು ಅವರ ಮಗಳ ನಡುವೆ ಅಕ್ರಮ ಸಂಬಂಧವಿತ್ತು" ಎಂದು ಹೇಳಿದ್ದಾರೆ.
ಇನ್ನು ಕೆಲವು ಇತಿಹಾಸಕಾರರು ಷಹಜಹಾನ್ ಮತ್ತು ಜಹನಾರಾ ನಡುವಿನ ಸಂಬಂಧದ ವದಂತಿಯನ್ನು ಸಾಬೀತುಪಡಿಸಲು ಪ್ರಯತ್ನಿಸಿದರು. ಜಹನಾರಾ ತನ್ನ ಜೀವನದುದ್ದಕ್ಕೂ ಕನ್ಯೆಯಾಗಿಯೇ ಇದ್ದಳು ಎಂದು ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ. ಆದರೆ ಇನ್ನೂ ಕೆಲವು ಇತಿಹಾಸಕಾರರು ಇದನ್ನು ಅಲ್ಲಗಳೆದಿದ್ದರು.
ಇದಲ್ಲದೇ ಮೊಘಲರ ಸಂಪ್ರದಾಯವೂ ಇದಕ್ಕೆ ಕಾರಣ ಎನ್ನಲಾಗಿದೆ. ಬಂಧುಗಳ ನಡುವೆ ಹೆಣ್ಣುಮಕ್ಕಳನ್ನು ಮದುವೆ ಮಾಡುವುದು ಉತ್ತಮ ಎಂದು ಅಲ್ಲಿನ ಮಾತಾಗಿತ್ತು. ಒಂದು ವೇಳೆ ಬೇರೊಬ್ಬನಿಗೆ ಮದುವೆ ಮಾಡಿದರೆ, ಆತ ಮೊಘಲ್ ಸುಲ್ತಾನರನ್ನು ವಶಪಡಿಸಿಕೊಳ್ಳಬಹುದು ಮತ್ತು ಸಾಮ್ರಾಜ್ಯವನ್ನು ವಿಭಜಿಸಬಹುದು ಎಂಬ ಭೀತಿ ಅವರಲ್ಲಿ ಕಾಡಿತ್ತು.
ಇತಿಹಾಸಕಾರ ನಿಕೊಲಾವೊ ಮನುಚಿ ತನ್ನ ದಾಖಲೆಯಲ್ಲಿ ಫ್ರಾಂಕೋಯಿಸ್ ಬರ್ನಿಯರ್‌ನ ದೃಷ್ಟಿಕೋನವನ್ನು ವಿರೋಧಿಸುತ್ತಾನೆ. ಜಹನಾರಾಗೆ ಓರ್ವ ಪ್ರೇಮಿಯಿದ್ದನು. ಷಹಜಹಾನನ ಭಯದಿಂದ ಜಹಾನಾರಾಳನ್ನು ಭೇಟಿಯಾಗಲು ಬಂದಾಗಲೆಲ್ಲ ಗುಟ್ಟಾಗಿ ಬರುತ್ತಿದ್ದನು ಎಂದು ಬರೆದಿದ್ದಾರೆ. ಮನೂಚಿ ಮಾತ್ರವಲ್ಲ, ರಾಣಾ ಸಫವಿ ಎಂಬವರು ಕೂಡ ಇದನ್ನೇ ಬರೆದಿದ್ದಾರೆ.
ಇನ್ನು ಷಹಜಹಾನ್ ಮತ್ತು ರಾಜಕುಮಾರಿಯ ನಡುವಿನ ಅಕ್ರಮ ಸಂಬಂಧಗಳ ಬಗ್ಗೆ ಅನೇಕ ವಿಷಯಗಳನ್ನು ಬರೆದ ಏಕೈಕ ಇತಿಹಾಸಕಾರ ಬರ್ನಿಯರ್ ಎಂದು ನಿಕೊಲಾವೊ ಮನುಚಿ ಮತ್ತು ರಾಣಾ ಸಫವಿ ಬರೆಯುತ್ತಾರೆ.
ಇನ್ನು ಷಹಜಹಾನ್ ವಯಸ್ಸಾದಾಗ, ದಾರಾ ಶಿಕೋಹ್ ಮತ್ತು ಔರಂಗಜೇಬ್ ನಡುವೆ ಸುಲ್ತಾನರ ಸಿಂಹಾಸನಕ್ಕಾಗಿ ಹೋರಾಟ ಪ್ರಾರಂಭವಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಬರ್ನಿಯರ್ ಔರಂಗಜೇಬನ ನಿಕಟ ವ್ಯಕ್ತಿಯಾಗಿದ್ದ. ಆದರೆ ಜಹಾನಾರಾ ತನ್ನ ಮತ್ತೋರ್ವ ಸಹೋದರ ದಾರಾ ಶಿಕೋ ಜೊತೆಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಳು. ಇದೇ ಕಾರಣಕ್ಕೆ ಔರಂಗಜೇಬ್‌ಗೆ ನಿಕಟವಾದ ಇತಿಹಾಸಕಾರರೆಲ್ಲರೂ ಆಕೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಮತ್ತು ಆಕೆಯ ವ್ಯಕ್ತಿತ್ವವನ್ನು ಹಾಳುಗೆಡವಳು ಪ್ರಯತ್ನಿಸಿದ್ದರು ಎನ್ನಲಾಗಿದೆ.