ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಬಳಿ ಇವೆ ದುಬಾರಿ ಬೆಲೆಯ ಕಾರುಗಳು..!

Tue, 07 Sep 2021-1:58 pm,

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಗ್ಯಾರೇಜ್ 168ಕ್ಕೂ ಹೆಚ್ಚು ಕಾರುಗಳನ್ನು ನಿಲ್ಲಿಸಲು ಸ್ಥಳಾವಕಾಶ ಹೊಂದಿದೆ. ಅಂಬಾನಿ ಕುಟುಂಬವು ತಮ್ಮ ಈ ದೊಡ್ಡ ಗ್ಯಾರೇಜ್‌ನಲ್ಲಿ ಅನೇಕ ವಿಶ್ವ ದರ್ಜೆಯ ಕಾರುಗಳನ್ನು ಹೊಂದಿದ್ದಾರೆ.

ಉದ್ಯಮಿ ಮುಕೇಶ್ ಅಂಬಾನಿಯವರ ಗ್ಯಾರೇಜ್‌ನಲ್ಲಿ ಅನೇಕ ದುಬಾರಿ ಬೆಲೆಯ ಕಾರುಗಳ ಸಂಗ್ರವಿದೆ.  Bentley Bentayga, Mercedes-AMG G63, Rolls Royce Phantom Drophead Coupe, Porsche Cayenne ಸೇರಿದಂತೆ ಇನ್ನು ಹಲವು ಕೋಟಿ ಕೋಟಿ ರೂ. ಮೌಲ್ಯದ ಇಂಪೋರ್ಟೆಡ್ ಕಾರುಗಳನ್ನು ಹೊಂದಿದ್ದಾರೆ.

ಉದ್ಯಮಿ ಮುಕೇಶ್ ಅಂಬಾನಿಯವರು ತಮ್ಮ ರಕ್ಷಣೆಯ ಉದ್ದೇಶದಿಂದ ಬುಲೆಟ್ ಪ್ರೂಫ್ ಕಾರುಗಳನ್ನು ಹೊಂದಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ಕೇವಲ ಐಷಾರಾಮಿ ಕಾರುಗಳಿಗಷ್ಟೇ ಸ್ಥಾನವಿದೆ. White Bentley, Mercedes-Benz E-Class, BMW 18 ಮುಂದಾದ ದುಬಾರಿ ಬೆಲೆಯ ಕಾರುಗಳಿವೆ.      

ಉದ್ಯಮಿ ಮುಕೇಶ್ ಅಂಬಾನಿ ಒಡೆತನದಲ್ಲಿ ವಿಶ್ವ ದರ್ಜೆಯ ಹಲವಾರು ಐಷಾರಾಮಿ ಕಾರುಗಳಿವೆ. Tesla Model S, Lamborghini Urus, Land Rover Ranger Rover LWB, Mercedes-AMG G63 ಮೊದಲಾದ ಕಾರುಗಳನ್ನು ಅವರು ಹೊಂದಿದ್ದಾರೆ.   

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯರ ಸುರಕ್ಷತೆ ಉದ್ದೇಶದಿಂದ ಸರ್ಕಾರವು ಅವರಿಗೆ Z+ ಭದ್ರತೆ ನೀಡಿದೆ. ಅವರಿಗಾಗಿಯೇ ವಿಶೇಷವಾಗಿ ಕಾರುಗಳನ್ನು ವಿನ್ಯಾಸಗೊಳಿಸಲಾಗಿದೆ.   

ಮುಕೇಶ್ ಅಂಬಾನಿಯವರ ಗ್ಯಾರೇಜ್‌ನಲ್ಲಿ BMW i8 ಮತ್ತು Bentley Bentayga ದುಬಾರಿ ಬೆಲೆಯ ಕಾರುಗಳಿವೆ.   

ಮುಕೇಶ್ ಅಂಬಾನಿಯವರ Mercedes Benz ಬೆಲೆ ಬರೋಬ್ಬರಿ 10 ಕೋಟಿ ರೂ. ಆಗಿದೆ. ಹೊರಗಡೆ ಪ್ರಯಾಣಕ್ಕೆ ಅಂಬಾನಿ ಇದನ್ನೆ ಹೆಚ್ಚಾಗಿ ಬಳಸುತ್ತಾರೆ. ಇದು ಗುಂಡು ನಿರೋಧಕವಾಗಿದ್ದು, 15 ಕೆಜಿಯಷ್ಟು TNT ಸ್ಫೋಟವನ್ನು ಸಹಿಸಿಕೊಳ್ಳುತ್ತದೆ.

ಮುಕೇಶ್ ಅಂಬಾನಿಯವರು ಶ್ರೀಮಂತ ಉದ್ಯಮಿಯಾಗಿರುವುದರಿಂದ ತಮ್ಮ ಲೈಫ್ ಸ್ಟೈಲ್ ಗೆ ತಕ್ಕುನಾಗಿ ಅನೇಕ ದುಬಾರಿ ಮೌಲ್ಯದ ಕಾರುಗಳನ್ನು ಹೊಂದಿದ್ದಾರೆ.

ವಾಣಿಜ್ಯ ನಗರಿ ಮುಂಬೈನ ಅಲ್ಟಮೌಂಟ್ ರಸ್ತೆಯಲ್ಲಿ 27 ಅಂತಸ್ತಿನ ಭವ್ಯ ಬಂಗಲೆ ‘ಅಂಟಿಲಿಯಾ’ವನ್ನು ಹೊಂದಿದ್ದಾರೆ. ಈ ಗಗನಚುಂಬಿ ಕಟ್ಟಡವು 400,000 ಚದರ ಅಡಿ ಎತ್ತರವಿದೆ.

ಅಂತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ತಮ್ಮ ಸಂಗ್ರಹದಲ್ಲಿ ಅನೇಕ ಐಷಾರಾಮಿ, ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link