ಅಂಬಾನಿಯ ಆಂಟಿಲಿಯಾ 27 ಮಹಡಿಯ ಮನೆಯಾದರೂ ನೀತಾ-ಮುಖೇಶ್ ಈ ಫ್ಲೋರ್ ಗಷ್ಟೇ ಹೋಗುವುದು! ಇದರ ಹಿಂದಿದೆ ಈ ರಹಸ್ಯ
ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿರುವ ಆಂಟಿಲಿಯಾ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಗೆ ಸೇರಿದೆ.27 ಅಂತಸ್ತಿನ ಈ ಮನೆಯಲ್ಲಿ ಮುಖೇಶ್ ಅಂಬಾನಿ ಇಡೀ ಕುಟುಂಬ ವಾಸವಿದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ರಾಧಿಕಾ ಮರ್ಚೆಂಟ್, ಪೃಥ್ವಿಅಂಬಾನಿ, ವೇದಾ ಅಂಬಾನಿ ಎಲ್ಲರೂ ಇದ್ದಾರೆ.
ಅಟ್ಲಾಂಟಿಕ್ ಮಹಾಸಾಗರದಲ್ಲಿ ಫ್ಯಾಂಟಮ್ ದ್ವೀಪದ ಆಧಾರದಲ್ಲಿ ಈ ಮನೆಗೆ ಆಂಟಿಲಿಯಾ ಎಂದು ಹೆಸರಿಸಲಾಗಿದೆ.ಆಂಟಿಲಿಯಾ ಸೌತ್ ಮುಂಬೈನ ಹೃದಯಭಾಗದಲ್ಲಿದೆ.ಇದು ಮೂರು ಹೆಲಿಪ್ಯಾಡ್‌ಗಳನ್ನು ಹೊಂದಿದೆ.
ಆಂಟಿಲಿಯಾ 37,000 ಚದರ ಮೀಟರ್‌ಗಳಲ್ಲಿ ಹರಡಿದ್ದು, 173 ಮೀಟರ್ ಎತ್ತರವಿದೆ. ಬಹು ಅಂತಸ್ತಿನ ಕಾರ್ ಪಾರ್ಕಿಂಗ್,9 ಹೈ-ಸ್ಪೀಡ್ ಲಿಫ್ಟ್‌ಗಳು ಮತ್ತು ಸಿಬ್ಬಂದಿಗಾಗಿ ವಿಶೇಷ ಸೂಟ್‌ಗಳನ್ನು ಹೊಂದಿದೆ.
ಅಂಬಾನಿ ಕುಟುಂಬವು ಅವರ ಭವ್ಯವಾದ ಮನೆ ಆಂಟಿಲಿಯಾದಲ್ಲಿ 26ನೇ ಮಹಡಿಯಲ್ಲಿ ವಾಸಿಸುತ್ತಿದೆ.ಯಾಕೆ ಇದೇ ಮಹಡಿಯಲ್ಲಿ ಅಂಬಾನಿ ಕುಟುಂಬ ವಾಸವಿದೆ ಎನ್ನುವುದಕ್ಕೂ ಒಂದು ಕಾರಣವಿದೆ.
ವರದಿಯ ಪ್ರಕಾರ, ಇದೇ ಮಹಡಿಯಲ್ಲಿ ವಾಸವಿರುವ ನಿರ್ಧಾರ ನೀತಾ ಅಂಬಾನಿಯವರದ್ದಂತೆ.ಏಕೆಂದರೆ ಇಲ್ಲಿನ ಪ್ರತಿ ಕೋಣೆಯಲ್ಲಿ ಉತ್ತಮವಾದ ಸೂರ್ಯನ ಬೆಳಕು ಮತ್ತು ಗಾಳಿ ಬರುತ್ತದೆ. ಇನ್ನು ಆಂಟಿಲಿಯಾದ 26 ನೇ ಮಹಡಿಗೆ ಅಂಬಾನಿ ಕುಟುಂಬದ ಆಪ್ತರಿಗೆ ಮಾತ್ರ ಪ್ರವೇಶವಂತೆ.