Multibagger stocks: ಒಂದೇ ವಾರದಲ್ಲಿ 37% ಲಾಭ ನೀಡಿದ 8 ಷೇರುಗಳು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು!!
ಸೆಂಟಮ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಳೆದೊಂದು ವಾರದಲ್ಲಿ ಶೇ.37ರಷ್ಟು ಲಾಭ ಗಳಿಸಿದೆ. ಈ ಮೂಲಕ 52 ವಾರಗಳ ಹೊಸ ಗರಿಷ್ಠ ಮಟ್ಟ ₹2,381.20ರಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ ಶುಕ್ರವಾರದ ವಹಿವಾಟಿನಲ್ಲಿ ಈ ಷೇರು ಶೇ.14.24ರಷ್ಟು ಏರಿಕೆ ಕಂಡಿತ್ತು. ಅಂತಿಮವಾಗಿ 2,280 ರೂ.ಗೆ ಕೊನೆಗೊಂಡಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ ಪ್ರಸ್ತುತ 2,940 ಕೋಟಿ ರೂ.ನಷ್ಟಿದೆ.
ಸನ್‌ಫ್ಲಾಗ್ ಐರನ್ ಅಂಡ್ ಸ್ಟೀಲ್ ಕಂಪನಿಯ ಷೇರುಗಳು ಕಳೆದ ವಾರದಲ್ಲಿ ಶೇ.27ರಷ್ಟು ಆದಾಯ ನೀಡಿದೆ. ಈ ಷೇರು 52 ವಾರಗಳ ಹೊಸ ಗರಿಷ್ಠ ಮಟ್ಟವಾದ ₹280ಕ್ಕೆ ತಲುಪಿದೆ. ಕಳೆದ ಶುಕ್ರವಾರದ ವಹಿವಾಟಿನಲ್ಲಿ ಈ ಷೇರು ಶೇ.6.69ರಷ್ಟು ಏರಿಕೆ ಕಂಡು 273.50ಕ್ಕೆ ಸ್ಥಿರವಾಗಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ ₹4950 ಕೋಟಿ ರೂ.ನಷ್ಟು ಇದೆ.
ಗೋಕುಲ್ ದಾಸ್ ಎಕ್ಸ್‌ಪೋರ್ಟ್ಸ್ ಕಂಪನಿಯ ಷೇರುಗಳು ಕಳೆದ ವಾರದಲ್ಲಿ ಶೇ.23.4ರಷ್ಟು ಲಾಭ ನೀಡಿವೆ. ಈ ಷೇರು 52 ವಾರಗಳ ಹೊಸ ಗರಿಷ್ಠ ಮಟ್ಟ ₹1,210ರಲ್ಲಿ ವಹಿವಾಟು ನಡೆಸುತ್ತಿದೆ. ಶುಕ್ರವಾರದ ವಹಿವಾಟಿನಲ್ಲಿ ಈ ಷೇರು ಶೇ.6.29ರಷ್ಟು ಏರಿಕೆ ಕಂಡಿದೆ. ಅಂತಿಮವಾಗಿ ₹1201.85ರಲ್ಲಿ ಕ್ಲೋಸ್ ಆಯಿತು. ಈ ಕಂಪನಿಯ ಮಾರುಕಟ್ಟೆ ಮೌಲ್ಯ 8,580 ಕೋಟಿ ರೂ. ಇದೆ.
ಗ್ರೀವ್ಸ್ ಕಾಟನ್ ಸ್ಟಾಕ್ ಕಳೆದ ವಾರದಲ್ಲಿ ಹೂಡಿಕೆದಾರರಿಗೆ ಶೇ.22ರಷ್ಟು ಆದಾಯ ನೀಡಿದೆ. ಕಳೆದ ಶುಕ್ರವಾರ ಈ ಷೇರು ಶೇ.0.32ರಷ್ಟು ಕುಸಿದು 241.24 ರೂ.ಗೆ ವಹಿವಾಟು ಮುಗಿಸಿದೆ. ಶುಕ್ರವಾರ ಈ ಕಂಪನಿಯ ಮಾರುಕಟ್ಟೆ ಮೌಲ್ಯ ₹5,610 ಕೋಟಿಯಷ್ಟಿದೆ.
ಕಳೆದ ವಾರದಲ್ಲಿ ಕೀಟೆಕ್ಸ್ ಗಾರ್ಮೆಂಟ್ಸ್ ಷೇರು ಶೇ.22ರಷ್ಟು ಏರಿಕೆ ಕಂಡಿವೆ. ಈ ಷೇರುಗಳು 52 ವಾರಗಳ ಹೊಸ ಗರಿಷ್ಠ ಮಟ್ಟ ₹879.10ಕ್ಕೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಈ ಷೇರು ಶೇ.5ರಷ್ಟು ಲಾಭ ನೀಡಿದ್ದು, ₹871ಕ್ಕೆ ಕೊನೆಗೊಂಡಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 5,790 ಕೋಟಿ ರೂ.ನಷ್ಟಿದೆ.
ಗುಜರಾತ್ ಇಂಡಸ್ಟ್ರೀಸ್ ಪವರ್ ಲಿ. ಕಂಪನಿಯ ಷೇರುಗಳು ಕಳೆದ ವಾರದಲ್ಲಿ ಶೇ.17.2ರಷ್ಟು ಏರಿಕೆಯಾಗಿದ್ದು, 52 ವಾರಗಳ ಗರಿಷ್ಠ ಮಟ್ಟ ₹270ಕ್ಕೆ ತಲುಪಿತ್ತು. ಕಳೆದ ವಹಿವಾಟಿನ ದಿನದಂದು ಶೇ.0.05ರಷ್ಟು ಏರಿಕೆ ಕಂಡ ಈ ಷೇರು ₹248ರಲ್ಲಿ ಮುಕ್ತಾಯವಾಯಿತು. ಈ ಕಂಪನಿಯ ಮಾರುಕಟ್ಟೆ ಮೌಲ್ಯ 3,750 ಕೋಟಿ ರೂ. ಇದೆ.
ಇಂಡೋ ಕೌಂಟ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರುಗಳು ಕಳೆದ ವಾರದಲ್ಲಿ ಶೇ.17ರಷ್ಟು ಏರಿಕೆ ಕಂಡಿದೆ. ಇದರೊಂದಿಗೆ ಹೊಸ 52 ವಾರಗಳ ಗರಿಷ್ಠ 450.45 ರೂ. ಮುಟ್ಟಿದೆ. ಕಳೆದ ಶುಕ್ರವಾರದ ವಹಿವಾಟಿನಲ್ಲಿ ಶೇ.4.29ರಷ್ಟು ಏರಿಕೆ ಕಂಡ ಈ ಷೇರು 400 ರೂ.ಗೆ ಮುಕ್ತಾಯವಾಯಿತು. ಈ ಕಂಪನಿಯ ಮಾರುಕಟ್ಟೆ ಮೌಲ್ಯ 7,912 ಕೋಟಿ ರೂ. ಇದೆ.
ವಿಧಿ ಸ್ಪೆಷಾಲಿಟಿ ಫುಡ್ ಇನ್‌ಗ್ರಿಡಿಯೆಂಟ್ಸ್ ಲಿ. ಷೇರು ಕಳೆದ ವಾರದಲ್ಲಿ ಶೇ.15.5ರಷ್ಟು ಲಾಭ ಗಳಿಸಿದೆ. ಈ ಷೇರುಗಳು 52 ವಾರಗಳ ಗರಿಷ್ಠ ಮಟ್ಟ ₹569.55ಕ್ಕೆ ತಲುಪಿದೆ. ಕಳೆದ ಶುಕ್ರವಾರ ಈ ಷೇರು ಶೇ.7.5ರಷ್ಟು ಏರಿಕೆಯೊಂದಿಗೆ 563.40ರಲ್ಲಿ ಕ್ಲೋಸ್ ಆಗಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 2,800 ಕೋಟಿ ರೂ.ನಷ್ಟಿದೆ.