Multibagger Stocks: ಹೂಡಿಕೆದಾರರಿಗೆ ಬಂಪರ್ ರಿಟರ್ನ್ ನೀಡಿದ ಷೇರುಗಳು

Tue, 05 Sep 2023-10:00 pm,

ರೈಲ್ವೆ ವಿಕಾಸ ನಿಗಮ ಷೇರು ಕಳೆದ 1 ವರ್ಷದಲ್ಲಿ ಹೂಡಿಕೆದಾರರಿಗೆ ಬಂಪರ್ ಲಾಭ ನೀಡಿದೆ. 1 ವರ್ಷದಲ್ಲಿ ಈ ಷೇರು ಬರೋಬ್ಬರಿ 376.68% ರಿಟರ್ನ್ ನೀಡಿದೆ. ಕಳೆದೊಂದು ವಾರದಲ್ಲಿ ಈ ಷೇರು 21.30% ಮತ್ತು 1 ತಿಂಗಳಿನಲ್ಲಿ ಶೇ.26.09% ಲಾಭ ನೀಡಿದೆ.

ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ (IRFC) ಷೇರು ಕಳೆದ 1 ವರ್ಷದಲ್ಲಿ ಹೂಡಿಕೆದಾರರಿಗೆ 2 ಪಟ್ಟು ಹೆಚ್ಚು ಲಾಭ ನೀಡಿದೆ. ಕಳೆದೊಂದು ವರ್ಷದಲ್ಲಿ 222.54%, ಕಳೆದ 5 ದಿನದಲ್ಲಿ 44.64% ಮತ್ತು ಕಳೆದೊಂದು ತಿಂಗಳಿನಲ್ಲಿ 45.23% ರಿಟರ್ನ್ ನೀಡಿದೆ.

ರೈಲ್‌ಟೆಲ್ ಕಾರ್ಪೊರೇಶನ್ ಆಫ್ ಇಂಡಿಯಾ ಷೇರು ಸಹ ಹೂಡಿಕೆದಾರರಿಗೆ ಭರ್ಜರಿ ಲಾಭ ಮಾಡಿಕೊಟ್ಟಿದೆ. ಕಳೆದೊಂದು ವರ್ಷದಲ್ಲಿ ಈ ಷೇರು 126.27%, ಕಳೆದ 5 ದಿನದಲ್ಲಿ ಶೇ.17.05% ಮತ್ತು ಕಳೆದೊಂದು ತಿಂಗಳಿನಲ್ಲಿ 32.95% ಲಾಭವನ್ನು ನೀಡಿದೆ.

ರೈಟ್ಸ್ ಲಿಮಿಟೆಡ್ ಷೇರು ಕೂಡ ಹೂಡಿಕೆದಾರರಿಗೆ ಬಂಪರ್ ಲಾಭವನ್ನು ನೀಡಿದೆ. ಈ ಷೇರು ಕಳೆದೊಂದು ವರ್ಷದಲ್ಲಿ 71.67%, ಕಳೆದ 5 ದಿನಗಳಲ್ಲಿ 7.46% ಮತ್ತು ಕಳೆದೊಂದು ತಿಂಗಳಿನಲ್ಲಿ 12.06% ಲಾಭವನ್ನು ನೀಡಿದೆ.

ಟಿಟಾಗಢ್ ರೈಲ್ ಸಿಸ್ಟಮ್ಸ್ ಷೇರು ಕೂಡ ಹೂಡಿಕೆದಾರರ ಕೈಹಿಡಿದಿದ್ದು, ಭರ್ಜರಿ ಲಾಭ ನೀಡಿದೆ. ಕಳೆದ 1 ವರ್ಷದಲ್ಲಿ ಈ ಷೇರು 76.51%, ಕಳೆದ 5 ದಿನಗಳಲ್ಲಿ 10.75% ಮತ್ತು ಕಳೆದ 1 ತಿಂಗಳಿನಲ್ಲಿ 26.83% ಲಾಭವನ್ನು ನೀಡಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link