ಸ್ಟಾರ್‌ ಕ್ರಿಕೆಟರ್‌ ತಂದೆಯಿಂದ ಕ್ರಿಕೆಟ್ ಕ್ಲಬ್‌​ನಲ್ಲಿ ಮತಾಂತರ! ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್‌ ಇವರೇ ಅಂತಿದ್ದ ಪ್ಲೇಯರ್‌ನ ಸದಸ್ಯತ್ವವನ್ನೇ ರದ್ದುಗೊಳಿಸಿದ ಸಮಿತಿ!

Tue, 22 Oct 2024-2:29 pm,

ಭಾರತದ ಸ್ಟಾರ್ ಮಹಿಳಾ ಕ್ರಿಕೆಟರ್ ಜೆಮಿಮಾ ರಾಡ್ರಿಗಸ್‌ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಡ್ರಿಗಸ್‌ 4 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ 30 ರನ್ ತಲುಪಲು ಸಾಧ್ಯವಾಗಲಿಲ್ಲ. 13, 23, 16 ಮತ್ತು 16 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಇದೀಗ ಜೆಮಿಮಾಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುಂಬೈನ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾದ ಖಾರ್ ಜಿಮ್ಖಾನಾ ಅವರ ಸದಸ್ಯತ್ವವನ್ನು ರದ್ದುಗೊಳಿಸಿದೆ.

 

ಜೆಮಿಮಾ ಅವರ ತಂದೆ ಐವಾನ್ ರಾಡ್ರಿಗಸ್ ಅವರ ಕೆಲಸದಿಂದಾಗಿ ಖಾರ್ ಜಿಮ್ಖಾನಾ ಈ ಹೆಜ್ಜೆ ಇಟ್ಟಿದ್ದಾರೆ. ಜೆಮಿಮಾ ತಂದೆ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ,ಐವಾನ್ ನೇತೃತ್ವದಲ್ಲಿ ಕೆಲವು ಸದಸ್ಯರು ಕ್ಲಬ್ ಆವರಣವನ್ನು ಧಾರ್ಮಿಕ ಚಟುವಟಿಕೆಗಳಿಗೆ ಬಳಸಿಕೊಂಡ ಹಿನ್ನೆಲೆಯಲ್ಲಿ ಖಾರ್ ಜಿಮಖಾನಾ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಕ್ಲಬ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಮತಾಂತರಕ್ಕೆ ಪ್ರಚೋದನೆ ನೀಡಲಾಗುತ್ತಿತ್ತು ಎನ್ನಲಾಗಿದೆ.

 

ಈ ಕುರಿತು ಭಾನುವಾರ ಖಾರ್ ಜಿಮಖಾನ ವಾರ್ಷಿಕ ಸಾಮಾನ್ಯ ಸಭೆ ಕರೆದಿದೆ. ಇದರಲ್ಲಿ ಜೆಮಿಮಾ ಅವರ ಸದಸ್ಯತ್ವವನ್ನು ರದ್ದುಪಡಿಸಲು ನಿರ್ಧರಿಸಲಾಯಿತು. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಖಾರ್ ಜಿಮ್‌ಖಾನಾ ಅಧ್ಯಕ್ಷ ವಿವೇಕ್ ದೇವ್ನಾನಿ, “ಅಕ್ಟೋಬರ್ 20, 2024 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಂಗೀಕರಿಸಿದ ನಿರ್ಣಯದ ಪ್ರಕಾರ ಜೆಮಿಮಾ ರಾಡ್ರಿಗಸ್‌ಗೆ ನೀಡಲಾದ ಗೌರವ ಮೂರು ವರ್ಷಗಳ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.

 

ಖಾರ್ ಜಿಮ್ಖಾನಾದ ವ್ಯವಸ್ಥಾಪಕ ಸಮಿತಿಯ ಸದಸ್ಯ ಶಿವ ಮಲ್ಹೋತ್ರಾ ಅವರು ಕಾರಣಗಳನ್ನು ವಿವರಿಸಿದ್ದಾರೆ. "ಜೆಮಿಮಾ ಅವರ ತಂದೆ ಬ್ರದರ್ ಮ್ಯಾನುಯೆಲ್ ಮಿನಿಸ್ಟ್ರೀಸ್ ಹೆಸರಿನ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ನಮಗೆ ತಿಳಿದುಬಂದಿದೆ. ಈ ಅವಧಿಯಲ್ಲಿ 35 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲಿ ಏನಾಗುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ದೇಶಾದ್ಯಂತ ಮತಾಂತರದ ಬಗ್ಗೆ ಕೇಳುತ್ತೇವೆ" ಎಂದು ಹೇಳಿದ್ದಾರೆ.

 

ಜೆಮಿಮಾ 2018 ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ 3 ಟೆಸ್ಟ್, 30 ODI ಮತ್ತು 104 T20 ಪಂದ್ಯಗಳನ್ನು ಆಡಿದ್ದಾರೆ. 3 ಟೆಸ್ಟ್‌ಗಳಲ್ಲಿ 58.75 ಸರಾಸರಿಯಲ್ಲಿ 235 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 3 ಅರ್ಧಶತಕಗಳನ್ನು ಗಳಿಸಿದ್ದಾರೆ.

 

ಜೆಮಿಮಾ 30 ಏಕದಿನ ಪಂದ್ಯಗಳಲ್ಲಿ 5 ಅರ್ಧಶತಕಗಳ ಸಹಾಯದಿಂದ 710 ರನ್ ಗಳಿಸಿದ್ದಾರೆ. ಅವರ ಸರಾಸರಿ 27.30 ಆಗಿದೆ. ಜೆಮಿಮಾಗೆ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿದೆ. 104 ಪಂದ್ಯಗಳಲ್ಲಿ 29.75 ಸರಾಸರಿ ಮತ್ತು 114.17 ಸ್ಟ್ರೈಕ್ ರೇಟ್‌ನಲ್ಲಿ 2142 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧಶತಕಗಳನ್ನು ಹೊಂದಿದ್ದಾರೆ.

 

ಇನ್ನೊಂದೆಡೆ ಟೀಂ ಇಂಡಿಯಾ ಮಹಿಳಾ ತಂಡ ಇತ್ತೀಚೆಗೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೋಲು ಕಂಡಿತ್ತು. ಅಷ್ಟೇ ಅಲ್ಲದೆ, ಆ ಬಳಿಕ ನಾಯಕ ಹರ್ಮನ್‌ ಪ್ರೀತ್‌ ಸ್ಥಾನಕ್ಕೂ ಕುತ್ತು ಬರುವ ಸೂಚನೆ ಇತ್ತು. ಈ ನಡುವೆ ಮುಂದಿನ ಕ್ಯಾಪ್ಟನ್‌ ಯಾರಾಗಬಲ್ಲರು ಎಂಬ ಚರ್ಚೆಯಲ್ಲಿ ಇವರ ಜೆಮಿಮಾ ಹೆಸರು ಕೂಡ ಕೇಳಿಬಂದಿತ್ತು.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link