See Pics: ದೈನಂದಿನ ಯೋಗದ ಬಗ್ಗೆ ಮುಸ್ಲಿಂ ಯೋಗ ಗುರು ಸಲಹೆ
ಯೋಗ ಗುರು ಮನ್ಸೂರ್ ಹೇಳುವಂತೆ ಪ್ರಾಚೀನ ಕಾಲದಿಂದಲೂ ಯೋಗವು ನಮ್ಮ ದೇಶದಲ್ಲಿದೆ, ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಯೋಗ ಜನಪ್ರಿಯವಾಗಿದೆ. ವಿಶೇಷವಾಗಿ ವಿಶ್ವ ಯೋಗ ದಿನವನ್ನು ನಿಗದಿಪಡಿಸಿ ಇಡೀ ವಿಶ್ವದ ಜನರು ಯೋಗವನ್ನು ಗೌರವಿಸುವಂತಾಗಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಆಗಿರುವ ಜಾಗೃತಿಯಿಂದಾಗಿ, ಮುಂಬಯಿಯಲ್ಲಿರುವ ಮುಸ್ಲಿಂ ಸಮುದಾಯವು ಈ ತಪ್ಪು ಕಲ್ಪನೆಯನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದೆ. ಆದರೆ ಯೋಗ ಗುರು ಮನ್ಸೂರ್ ಅವರೇ ಯೋಗ ಸಂಸ್ಥೆಯ ಮೂಲಕ ಮುಸ್ಲಿಂ ಸಮುದಾಯದ ಮಧ್ಯದಲ್ಲಿ ಯೋಗ ಕ್ರಾಂತಿಯನ್ನು ತರುತ್ತಿದ್ದಾರೆ.
ಸಾಮಾನ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ಸೂರ್ಯ ನಮಸ್ಕಾರದ ಬಗ್ಗೆ ಆಕ್ಷೇಪವಿದೆ. ಆದರೆ ಸೂರ್ಯ ನಮಸ್ಕಾರ ಮಾಡಲು ಯಾವುದೇ ಆಕ್ಷೇಪಣೆ ಇರಬಾರದು ಮತ್ತು ಅದನ್ನು ಭಂಗಿ(Posture)ಯಂತೆ ಮಾಡಬೇಕು ಎಂದು ಮನ್ಸೂರ್ ಬಲೂಚ್ ಹೇಳುತ್ತಾರೆ.
ಯೋಗ ಗುರು ಸ್ವತಃ ಹಲವು ವರ್ಷಗಳಿಂದ ಯೋಗ ಮಾಡುತ್ತಿದ್ದಾರೆ ಮತ್ತು ಮುಂಬೈನಲ್ಲಿ ನ್ಯೂ ಏಜ್ ಹಾಟ್ ಯೋಗ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಬಲೂಚ್ ಅವರ ಯೋಗ ಸಂಸ್ಥೆಯಲ್ಲಿ, ಮುಸ್ಲಿಂ ಸಮುದಾಯದ ಬಹಳಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ, ಬುರ್ಕ ಧರಿಸಿ ಯೋಗ ಕಲಿಯಲು ಹಲವಾರು ಮಹಿಳೆಯರು ಬರುತ್ತಿದ್ದಾರೆ ಎಂದು ಹೇಳಿದರು.
ಯೋಗವು ತಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ ಎಂದು ಯೋಗಾಭ್ಯಾಸ ಮಾಡುವವರು ನಂಬುತ್ತಾರೆ. ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ ಕೂಡ ಅವರು ಸಾಕಷ್ಟು ಆರೋಗ್ಯವನ್ನು ಅನುಭವಿಸುತ್ತಿದ್ದಾರೆ. ಕೆಲವು ಜನರು ಕಳೆದ ಏಳು-ಎಂಟು ವರ್ಷಗಳಿಂದ ಯೋಗಕ್ಕೆ ತರಬೇತಿ ನೀಡುತ್ತಿದ್ದು, ಕೆಲವು ಹೊಸಬರು ಯೋಗದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೂ ಕೆಲವರು ಹಲವು ವರ್ಷಗಳ ವರೆಗೆ ತಮ್ಮ ಯೋಗವನ್ನು ಮುಂದುವರೆಸುವ ಬಗ್ಗೆ ಮಾತನಾಡುತ್ತಿದ್ದಾರೆ.
ಯೋಗವು ನಮ್ಮ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ ಹಿಂದೂ-ಮುಸ್ಲಿಂ, ಧರ್ಮ, ಸಮುದಾಯ ಮತ್ತು ಜಾತಿಯ ಹೆಸರಿನಲ್ಲಿ ಯೋಗವನ್ನು ದೇಶಾದ್ಯಂತ ವಿಭಜಿಸುವ ಮೂಲಕ ಸೂರ್ಯ ನಮಸ್ಕಾರವನ್ನು ವಿವಾದಕ್ಕೆ ತರಲಾಗುತ್ತಿದೆ. ಮತ್ತೊಂದೆಡೆ, ಭರವಸೆಯ ಕಿರಣವಾಗಿ ಮಾರ್ಪಟ್ಟಿರುವ ಯೋಗ ಗುರು ಮನ್ಸೂರ್ ಬಲೂಚ್ ಅವರು ಕಳೆದ 10 ವರ್ಷಗಳಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.