ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ಶತ್ರುಗಳಿದ್ದಂತೆ ಈ 4 ಆಹಾರಗಳು
ಯೂರಿಕ್ ಆಸಿಡ್ ಮಟ್ಟ ಹೆಚ್ಚಾದಾಗ, ಕೀಲುಗಳಲ್ಲಿ ಊತ, ನೋವು ಮತ್ತು ಬಿಗಿತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ಕೆಲವು ಆಹಾರಗಳನ್ನು ಶತ್ರುಗಲಿದ್ದಂತೆ ಎನ್ನಲಾಗುತ್ತದೆ. ಅಂತಹ ಆಹಾರಗಳೆಂದರೆ...
ಮೀನು, ಚಿಪ್ಪುಮೀನು, ಸಾಲ್ಮಾನ್ ನಂತಹ ಸಮುದ್ರಾಹಾರಗಳಲ್ಲಿ ಪ್ಯೂರಿನ್‌ಗಳು ಕಂಡು ಬರುತ್ತದೆ. ಇವು ಯೂರಿಕ್ ಆಸಿಡ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತವೆ.
ಮದ್ಯಪಾನ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ಮದ್ಯ, ವಿಶೇಷವಾಗಿ ಬಿಯರ್ ಸೇವನೆಯು ಯೂರಿಕ್ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸಬಹುದು.
ಮಾರುಕಟ್ಟೆಯಲ್ಲಿ ಸಿದ್ದವಾಗಿ ಸಿಗುವ ಕೋಲ್ಡ್ ಡ್ರಿಂಕ್ಸ್ ಗಳು ತೂಕ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕೂಡ ಹೆಚ್ಚಿಸಬಹುದು.
ನಿಮಗೆ ಯೂರಿಕ್ ಆಸಿಡ್ ಸಮಸ್ಯೆ ಇದ್ದರೆ ಇಂದಿನಿಂದಲೇ ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದನ್ನು ತ್ಯಜಿಸಿ. ಇಲ್ಲದಿದ್ದರೆ, ಸಂಸ್ಕರಿಸಿದ ಆಹಾರಗಳಲ್ಲಿ ಬಳಸಲ್ಪಡುವ ಸಕ್ಕರೆ, ಉಪ್ಪು ಸೇರಿದಂತೆ ಇತರ ಪದಾರ್ಥಗಳು ಯೂರಿಕ್ ಆಸಿಡ್ ಅನ್ನು ವೇಗವಾಗಿ ಹೆಚ್ಚಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.