ಸಣ್ಣಗಾಗಬೇಕೆ? ಹಾಗಿದ್ದರೆ ಮಿಸ್ ಮಾಡದೆ ತಿನ್ನಿ ಈ 5 ಮಸಾಲೆ
ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಮಸಾಲೆಗಳಲ್ಲಿ ಜೀರಿಗೆಯೂ ಒಂದು. ಒಂದೇ ಒಂದು ಚಮಚ ಜೀರಿಗೆ ನಿಮ್ಮ ತೂಕ ನಷ್ಟಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆ ಹಾಕಿ ರಾತ್ರಿಯಿಡೀ ನೆನೆಯಲು ಬಿಡಿ. ಮರುದಿನ ಬೆಳಿಗ್ಗೆ ಎದ್ದು ಈ ನೀರನ್ನು ಕುಡಿಯುವುದರಿಂದ ಸುಲಭವಾಗಿ ತೂಕ ಇಳಿಸಬಹುದು.
ಆರೋಗ್ಯಕ್ಕೆ ಅರಿಶಿನ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ತೂಕ ನಷ್ಟಕ್ಕೂ ಕೂಡ ಅರಿಶಿನವನ್ನು ದಿವ್ಯೌಷಧ ಎಂದು ಪರಿಗಣಿಸಲಾಗಿದೆ.
ಮೆಂತ್ಯ ಸೊಪ್ಪು, ಮೆಂತ್ಯ ಕಾಳುಗಳು ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆ ಇಲ್ಲ. ನೀವು ಹೊಟ್ಟೆಯ ಕೊಬ್ಬನ್ನು ಕರಗಿಸಲು ಬಯಸಿದರೆ ಒಂದು ಚಮಚ ಮೆಂತ್ಯವನ್ನು ರಾತ್ರಿಯಿಡೀ ಒಂದು ಗ್ಲಾಸ್ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದ ನಂತರ ಶೋಧಿಸಿ ಕುಡಿಯಿರಿ. ಇದರ ಪರಿಣಾಮ ಕೆಲವೇ ದಿನಗಳಲ್ಲಿ ನೀವು ಕಾಣಬಹುದು.
ಆಹಾರದ ರುಚಿಯಲ್ಲಿ ಹೆಚ್ಚಿಸಬಲ್ಲ ದಾಲ್ಚಿನ್ನಿ ಸೇವನೆಯಿಂದ ಸಕ್ಕರೆಯನ್ನು ಕೊಬ್ಬಾಗಿ ಪರಿವರ್ತಿಸುವುದನ್ನು ತಡೆಯಬಹುದು. ದಾಲ್ಚಿನ್ನಿ ಚಹಾ ಕುಡಿಯುವುದರಿಂದ ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿ ಸ್ಲಿಮ್ ಆಗಬಹುದು.
ಶೀತ, ಕೆಮ್ಮು ಎಂದೊಡನೆ ತಕ್ಷಣ ಮೆಣಸಿನ ಸಾಂಬಾರ್ ಮಾಡುತ್ತೇವೆ. ಆದರೆ, ನಿಯಮಿತವಾಗಿ ಮೆಣಸಿನ ಬಳಕೆಯೂ ಹೊಟ್ಟೆಯ ಕೊಬ್ಬು ಹೆಚ್ಚಾಗುವುದನ್ನು ತಡೆಯುತ್ತದೆ. ಇದರಿಂದ ಸುಲಭವಾಗಿ ತೂಕ ಇಳಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.