40ವರ್ಷ ತುಂಬಿದ ಬಳಿಕವೂ ಚಿರ ಯುವತಿಯಂತೆ ಕಾಣಲು ಬಯಸುವ ಮಹಿಳೆಯರ ಆಹಾರದಲ್ಲಿ ಇರಲೇಬೇಕು ಈ 5 ಸೂಪರ್‌ಫುಡ್‌ಗಳು
ನಿತ್ಯ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇವಿಸುವುದರಿಂದ ಮಹಿಳೆಯರು 40 ತುಂಬಿದರೂ ಚಿರ ಯುವತಿಯರಂತೆ ಕಾಣಬಹುದು. ಮಹಿಳೆಯರಿಗಾಗಿ ಅಂತಹ ಐದು ಸೂಪರ್‌ಫುಡ್‌ಗಳೆಂದರೆ...
ಮಹಿಳೆಯರು ನಿತ್ಯ ತಮ್ಮ ಆಹಾರದಲ್ಲಿ ಮೊಸರನ್ನು ಬಳಸುವುದರಿಂದ ಮೂಳೆಗಳು ಬಲಗೊಳ್ಳುವುದರಾ ಜೊತೆಗೆ ಸ್ತನ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯ ಅಪಾಯವನ್ನು ತಪ್ಪಿಸಬಹುದು.
ಮಹಿಳೆಯರು ನಿತ್ಯ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ.
ಟೊಮಾಟೊ ಹಣ್ಣಿನಲ್ಲಿ ಲೈಕೋಪೀನ್ ಎಂಬ ಪೋಷಕಾಂಶ ಕಂಡುಬರುತ್ತದೆ. ಇದರ ಬಳಕೆಯಿಂದ ಮಹಿಳೆಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಆಗಿದೆ.
ನಿಮ್ಮ ದೈನಂದಿನ ಆಹಾರದಲ್ಲಿ ತಾಜಾ ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಬಳಸುವುದರಿಂದ ಮಹಿಳೆಯರು ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು.
ಮಹಿಳೆಯರು ತಮ್ಮ ಆಹಾರದಲ್ಲಿ ಆಮ್ಲಾ/ನೆಲ್ಲಿಕಾಯಿಯನ್ನು ಬಳಸುವುದರಿಂದ ಹೊಟ್ಟೆ, ಕಣ್ಣು, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ಸದಾ ಯಂಗ್ ಆಗಿ ಕಾಣಲು ಸಾಧ್ಯವಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.