ಹೈ ಬಿಪಿಯ ಲಕ್ಷಣಗಳಿವು! ಈ ನಾಲ್ಕು ಸಂಕೇತಗಳನ್ನು ಎಂದಿಗೂ ನಿರ್ಲಕ್ಷಿಸದಿರಿ
ಅಧಿಕ ರಕ್ತದೊತ್ತಡ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.ಆದರೆ, ರಕ್ತದೊತ್ತಡದ ಮಟ್ಟ ಹೆಚ್ಚಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕೆಲವು ಲಕ್ಷಣಗಳನ್ನು ಅರಿತುಕೊಳ್ಳಬೇಕು.
ಚಳಿಗಾಲದಲ್ಲಿ ಬೆಳಗ್ಗೆ ಎದ್ದ ನಂತರ ತಲೆನೋವು ಕಾಣಿಸಿಕೊಳ್ಳುತ್ತದೆ.ಕೆಲವೊಮ್ಮೆ ಇದು ದೀರ್ಘಕಾಲದವರೆಗೆ ಮಲಗುವುದರಿಂದ ಅಥವಾ ದೇಹದಲ್ಲಿ ನೀರಿನ ಕೊರತೆಯಿಂದಲೂ ಸಂಭವಿಸಬಹುದು. ಆದರೆ, ಪ್ರತಿದಿನ ಅಥವಾ ಒಂದೇ ದಿನದಲ್ಲಿ ಪದೇ ಪದೇ ತಲೆನೋವು ಕಾಣಿಸಿಕೊಳ್ಳುತ್ತಿದ್ದರೆ ರಕ್ತದೊತ್ತಡದ ಮಟ್ಟವು ಹೆಚ್ಚಾಗಿರುವ ಸಾಧ್ಯತೆಯಿದೆ.
ಒತ್ತಡದಿಂದಾಗಿ ಅನೇಕ ಬಾರಿ ರಕ್ತದೊತ್ತಡದ ಮಟ್ಟವು ಹೆಚ್ಚಾಗುತ್ತದೆ. ಈ ಸ್ಥಿತಿಯಲ್ಲಿ ಅತಿಯಾದ ಬೆವರುವಿಕೆ, ನರಗಳಲ್ಲಿ ಜುಮ್ಮೆನ್ನುವುದು ಮುಂತಾದ ಸಮಸ್ಯೆಗಳೂ ಬರಬಹುದು.
ಬಿಪಿ ಹಠಾತ್ ಹೆಚ್ಚಳದಿಂದಾಗಿ, ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.
ಬಿಪಿ ಮಟ್ಟ ಹೆಚ್ಚಾಗುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಹೆಚ್ಚಾಗಬಹುದು.