ನಿಮಗೆ ಹೀಗಾಗುತ್ತಿದ್ದರೆ ಹಾರ್ಟ್ ನಲ್ಲಿ ಬ್ಲೋಕೆಜ್ ಇರುವುದು ಪಕ್ಕಾ!ಹಾರ್ಟ್ ಅಟ್ಯಾಕ್ ಆಗುವ ಮುನ್ನ ಎಚ್ಚೆತ್ತುಕೊಳ್ಳಿ !
ಕೆಲವರಿಗೆ ಪದೇ ಪದೇ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಕೆಲವೊಮ್ಮೆ ಉಸಿರಾಟ ಬಹಳ ಕಷ್ಟಕರ ಎನಿಸುತ್ತದೆ.ನಿಮಗೂ ಹೀಗಾಗುತ್ತಿದ್ದರೆ ಅಸಡ್ಡೆ ಮಾಡಬೇಡಿ.
ಪದೇ ಪದೇ ಮೂರ್ಛೆ ಹೋಗುತ್ತಿದ್ದರೆ,ಅದು ಹಾರ್ಟ್ ಬ್ಲೋಕೆಜ್ ನಿಂದಲೇ ಆಗಿರುವ ಸಾಧ್ಯತೆ ಹೆಚ್ಚು.ಹೃದಯಾಘಾತದ ಸಂದರ್ಭದಲ್ಲಿಯೂ ಈ ಸಂಕೇತ ಕಂಡು ಬರುತ್ತದೆ. ಮಾತ್ರವಲ್ಲ ಹೃದಯ ಬಡಿತದ ವೇಗ ವಿಪರೀತ ಹೆಚ್ಚಾಗುತ್ತದೆ.
ಹೃದಯದಲ್ಲಿ ಬ್ಲೋಕೆಜ್ ಇದ್ದರೆ ಎದೆ ನೋವು ಕಾಣಿಸಿಕೊಳ್ಳುತ್ತದೆ.ಹೀಗೆ ಎದೆ ನೋವು ಕಾನಿಸಿಕೊಳ್ಳುವಾಗ ಗ್ಯಾಸ್, ಆಸಿಡಿಟಿ ಎಂದು ನಿರ್ಲಕ್ಷಿಸದೆ ವೈದ್ಯರ ಬಳಿಗೆ ಹೋಗಿ.
ಕಾರಣವಿಲ್ಲದೆ ಆಗಾಗ ತಲೆಸುತ್ತುತ್ತಿದ್ದರೆ ಅದು ಹಾರ್ಟ್ ಬ್ಲೋಕೆಜ್ ನಿಂದ ಆಗಿರಬಹುದು. ಸಾಮಾನ್ಯವಾಗಿ ಅನೇಕ ಸಂದರ್ಭಗಳಲ್ಲಿ ತಲೆಸುತ್ತುವುದು ಕಾಣಿಸುತ್ತಿರುತ್ತದೆ.
ವಿನಾ ಕಾರಣ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುವುದು ಕೂಡಾ ಹೃದಯದ ಬ್ಲೋಕೆಜ್ ನಿಂದಲೇ ಆಗಿರುತ್ತದೆ. ಇದು ಸಾಮಾನ್ಯ ಎಂದುಕೊಂಡು ನಿರ್ಲಕ್ಷ್ಯ ತೋರದೆ ತಜ್ಞರ ಸಲಹೆ ಪಡೆಯಬೇಕು.
ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳು ಮತ್ತು ಸಲಹೆಗಳನ್ನು ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.