ಮನೆಯಲ್ಲಿ ಈ 2 ಗಿಡಗಳನ್ನು ಹಾಕಿದರೆ ಆಗಲಿದೆ ಭರ್ಜರಿ ಧನಲಾಭ
ವಾಸ್ತು ಪ್ರಕಾರ, ಅಶೋಕ ಸಸ್ಯವು ತುಂಬಾ ಮಂಗಳಕರವಾಗಿದೆ. ಈ ಸಸ್ಯ ದುಃಖವನ್ನು ಕೊನೆಗೊಳಿಸುತ್ತದೆ. ಇದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಸಹ ತರುತ್ತದೆ. ಹೀಗಿರುವಾಗ ಈ ಸಸ್ಯವನ್ನು ಮನೆಯಲ್ಲಿ ನೆಡಬೇಕು.
ಉದ್ಯಾನದಲ್ಲಿ ಅಶೋಕ ಗಿಡವನ್ನು ನೆಡಬಹುದು. ಈ ಸಸ್ಯವು ಮನೆಯ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ. ಇದರೊಂದಿಗೆ, ಮನೆಗೆ ಅಂಟಿ ಕೊಳ್ಳ ಬಹುದಾದ ದುಃಖ ದೂರವಾಗುತ್ತದೆ.
ವ್ಯಾಪಾರದಲ್ಲಿ ಆರ್ಥಿಕ ಪ್ರಗತಿಗೆ ಅಶೋಕ ಮರವು ಸಹಾಯ ಮಾಡುತ್ತದೆ. ಈ ಸಸ್ಯದ ಬೀಜಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ವ್ಯಾಪಾರದ ಸ್ಥಳದಲ್ಲಿ ಇರಿಸಿದರೆ ಪ್ರಯೋಜನಕಾರಿಯಾಗಲಿದೆ ಎನ್ನಲಾಗುತ್ತದೆ.
ನೆಲ್ಲಿಕಾಯಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಸಂತೋಷ ಮತ್ತು ಸಂಪತ್ತು ಹೆಚ್ಚುತ್ತದೆ. ನೆಲ್ಲಿಕಾಯಿ ಗಿಡ ಬೆಳೆದಂತೆ ಮನೆಯಲ್ಲಿ ಸಮೃದ್ಧಿಯಾಗುತ್ತಲೇ ಇರುತ್ತದೆ ಎನ್ನುವುದು ನಂಬಿಕೆ. ಇದಲ್ಲದೆ ವಿಷ್ಣುವಿನ ಜೊತೆಗೆ ಲಕ್ಷ್ಮಿಯ ಅನುಗ್ರಹವೂ ಸಿಗುತ್ತದೆ.
ನೆಲ್ಲಿಕಾಯಿ ಮತ್ತು ಅಶೋಕ ಗಿಡಗಳ ಬುಡದಲ್ಲಿ ಕಸ ಸಂಗ್ರಹಿಸಲು ಬಿಡಬಾರದು. ಅಲ್ಲದೆ, ಈ ಸಸ್ಯಗಳನ್ನು ಒಂದು ರೀತಿಯ ದೇವಾಲಯವೆಂದು ಪರಿಗಣಿಸಬೇಕು. ಈ ಎರಡೂ ಸಸ್ಯಗಳು ಶುಭಫಲವನ್ನು ಹೆಚ್ಚಿಸುತ್ತವೆ.