Chanakya Niti: ಯಶಸ್ಸಿನ ಹಾದಿಯಲ್ಲಿ ನಡೆಯಲು ನಿಮ್ಮ ಮಕ್ಕಳಿಗೆ ಕಲಿಸಲೇಬೇಕಾದ 5 ಅಭ್ಯಾಸಗಳಿವು
ಮಹಾನ್ ವಿದ್ವಾಂಸ, ರಾಜ ಸಲಹೆಗಾರ, ಶಿಕ್ಷಕ, ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ ಚಾಣಕ್ಯ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಮಕ್ಕಳು ತಮ್ಮ ಜೀವನದ ಹಾದಿಯನ್ನು ಸುಲಭಗೊಳಿಸಿ ನಿರ್ದಿಷ್ಟ ಗುರಿಯನ್ನು ಸಾಧಿಸಲು ಅವರಿಗೆ ಚಿಕ್ಕಂದಿನಿಂದಲೇ ಕೆಲವು ಅಭ್ಯಾಸಗಳು ಕರಗತವಾಗಬೇಕು ಎನ್ನಲಾಗುತ್ತದೆ. ಹಾಗಿದ್ದರೆ, ಯಶಸ್ವಿ ಜೀವನವನ್ನು ನಡೆಸಲು ಮಕ್ಕಳು ರೂಢಿಗೊಳಿಸಿಕೊಳ್ಳಬೇಕಾದ ಆ ಐದು ಪ್ರಮುಖ ಅಭ್ಯಾಸಗಳು ಯಾವುವು ಎಂದು ತಿಳಿಯುವುದಾದರೆ....
ಆಚಾರ್ಯ ಚಾಣಕ್ಯರ ಪ್ರಕಾರ, ವಿದ್ಯಾರ್ಥಿ ಜೀವನದಿಂದ ಹಿಡಿದು ಜೀವನದ ಉದ್ದಕ್ಕೂ ಗುರಿ ಹೊಂದಿರುವುದು ಬಹಳ ಮುಖ್ಯ. ನಿರ್ದಿಷ್ಟ ಗುರಿ ರೂಪಿಸಿಕೊಂಡು ಎಂತಹುದೇ ಸಂದರ್ಭದಲ್ಲಿ ಗುರಿಯನ್ನು ಮರೆಯದೆ ನಮ್ಮ ನಿರ್ದಿಷ್ಟ ಗುರಿಯತ್ತ ಸಾಗಲು ಶ್ರಮಿಸಬೇಕು. ಇದರಿಂದ ಮಾತ್ರವೇ ಯಶಸ್ಸನ್ನು ಗಳಿಸಲು ಸಾಧ್ಯ.
ಚಾಣಕ್ಯ ನೀತಿಯ ಪ್ರಕಾರ, ಮಕ್ಕಳಿಗೆ ಚಿಕ್ಕಂದಿನಿಂದಲೇ ಪ್ರತಿ ಕೆಲಸದಲ್ಲೂ ಶಿಸ್ತು ಎಂಬುದನ್ನೂ ಕಲಿಸಬೇಕು. ಆಚಾರ್ಯ ಚಾಣಕ್ಯರ ಪ್ರಕಾರ ಪ್ರತಿ ಕೆಲಸಕ್ಕೂ ಒಂದು ನಿರ್ದಿಷ್ಟ ಸಮಯವನ್ನು ಸ್ವತಃ ರೂಪಿಸಬೇಕು. ಅಷ್ಟೇ ಅಲ್ಲ, ಪ್ರತಿ ಕೆಲಸವನ್ನು ಶಿಸ್ತಿನಿಂದ ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದು ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡಿಯ್ಯುತ್ತದೆ.
ಚಾಣಕ್ಯ ನೀತಿಯ ಪ್ರಕಾರ, ಮಕ್ಕಳು ಬೆಳಿಗ್ಗೆ ಬೇಗ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿ ಬ್ರಹ್ಮ ಮುಹೂರ್ತದಲ್ಲಿ ಓಡುವುದರ ಜ್ಞಾನಾರ್ಜನೆಯಾಗುತ್ತದೆ. ಇದು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಇದಕ್ಕಾಗಿ ನಿತ್ಯ ಬೆಳಿಗ್ಗೆ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಸಮಯದ ಮಹತ್ವವನ್ನು ಅರಿಯುವುದು, ಅದನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು. ಸಮಯಕ್ಕೆ ಸರಿಯಾಗಿ ಏನು ಮಾಡಬೇಕೋ ಆ ಕೆಲಸಗಳನ್ನು ಮಾಡುವುದರಿಂದ ಜೀವನದ ಹಾದಿ ಸುಲಭವಾಗುತ್ತದೆ. ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಯಾವುದೇ ಕೆಲಸವನ್ನು ಮಾಡಬೇಕಾದರೆ ದೇಹಕ್ಕೆ ಶಕ್ತಿ ಬೇಕೇಬೇಕು. ಇದಕ್ಕಾಗಿ ಮಕ್ಕಳಿಗೆ ಸದಾ ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ನೀಡುವುದನ್ನು ಪೋಷಕರು ಖಚಿತಪಡಿಸಿಕೊಳ್ಳಬೇಕು. ಅಷ್ಟೇ ಅಲ್ಲ, ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಉತ್ತಮ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯಕರವಾದ ಉತ್ತಮ ಜೀವನವನ್ನು ಆನಂದಿಸಬಹುದು ಎನ್ನಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.