ಚಳಿಗಾಲದಲ್ಲಿ ನೋಡಲೇಬೇಕಾದ 5 ಸ್ಥಳಗಳು..! ಸಂಗಾತಿ ಜೊತೆ ತಪ್ಪದೇ ಹೋಗಿ ನೋಡಿ..
ಚಳಿಗಾಲ ಸಮೀಪಿಸುತ್ತಿದೆ. ಇದಲ್ಲದೆ, ರಜಾದಿನಗಳು ಹೆಚ್ಚುತ್ತಿವೆ.. ಇದಕ್ಕಿಂತ ಪ್ರವಾಸಕ್ಕೆ ಉತ್ತಮ ಸಮಯ ಯಾವುದು..? ಅಲ್ವಾ.. ಹಾಗಾಗಿ ಇಲ್ಲಿ ನಾವು ಚಳಿಗಾಲದಲ್ಲಿ ದಕ್ಷಿಣ ಭಾರತದಲ್ಲಿ ನೋಡಲೇಬೇಕಾದ ಕೆಲವು ಸ್ಥಳಗಳನ್ನು ಪಟ್ಟಿ ಮಾಡಿದ್ದೇವೆ.. ನೋಡಿ... ಹೋಗಿ.. ಕುಟುಂಬ ಅಥವಾ ಸ್ನೇಹಿತರೊಂದಿಗೆ ರಜಾದಿನವನ್ನು ಆನಂದಿಸಿ.
ಊಟಿ: ಚಳಿಗಾಲದ ನಿಜವಾದ ಮಜೆಯನ್ನು ನಿಜವಾಗಿಯೂ ಆನಂದಿಸಬೇಕು ಅಂದ್ರೆ.. ಊಟಿಗಿಂತ ಉತ್ತಮವಾದ ಸ್ಥಳ ಯಾವುದಿಲ್ಲ.. ಊಟಿ ಚಳಿಗಾಲದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಇಂದು ಪ್ರಮುಖ. ಮುಂಜಾನೆ ಮಂಜು, ಚಹಾ ತೋಟಗಳು, ವಿಧದ ಚಹಾವನ್ನು ಸವಿಯುತ್ತ.. ವಿಶ್ರಾಂತಿ ಪಡೆಯಲು ಉತ್ತಮ ಸ್ಥಳ.
ಮಡಿಕೇರಿ: ಮಡಿಕೇರಿಯನ್ನು ಭಾರತದ ಪುಟ್ಟ ಸ್ಕಾಟ್‌ಲ್ಯಾಂಡ್ ಎಂದು ಪ್ರೀತಿಯಿಂದ ಕರೆಯುತ್ತಾರೆ. ಸಂಸ್ಕೃತಿಗೆ ಹೆಸರಾದ ಸುಂದರ ಪ್ರವಾಸಿ ತಾಣ. ಇದು ಕಾಫಿ ಎಸ್ಟೇಟ್‌ಗಳಿಗೆ ಹೆಸರುವಾಸಿಯಾಗಿದೆ. ಜಲಪಾತ ಸೇರಿದಂತೆ ಸಾಹಸ ಕ್ರೀಡೆಗಳಿಗೆ ಕೊರತೆ ಇರುವುದಿಲ್ಲ.
ಆಲಪ್ಪುಳ: ಕೇರಳದ ವಿಶಿಷ್ಟತೆಗೆ ಆಲಪ್ಪುಳವೂ ಒಂದು ಕಾರಣ. ನೀರಿನಿಂದ ಸುತ್ತುವರೆದಿರುವ ನೈಸರ್ಗಿಕ ಭೂದೃಶ್ಯಗಳು, ಅದ್ಭುತವಾದ ಕಡಲತೀರಗಳು ಮತ್ತು ದೋಣಿ ವಿಹಾರವು ಈ ಸ್ಥಳದ ಸೌಂದರ್ಯವನ್ನು ಸೇರಿಸಲು ತಪ್ಪಿಸಿಕೊಳ್ಳಬಾರದು. ನಿಮ್ಮ ಸಂಗಾತಿಯೊಂದಿಗೆ ಚಳಿಗಾಲದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.
ವಯನಾಡ್: ಚಳಿಗಾಲದಲ್ಲಿ ನೀವು ಭೇಟಿನೀಡಲೇಬೇಕಾದ ಸ್ಥಳ ಕೇರಳದ ವಯನಾಡ್. ಎಲ್ಲಿ ತಿರುಗಿದರೂ ಹಚ್ಚ ಹಸಿರಿನ ದೃಶ್ಯಾವಳಿ.. ಕಣ್ಣಿಗೆ ಹಬ್ಬ.. ಪರ್ವತಗಳ ಸೌಂದರ್ಯ ನಿಮ್ಮನ್ನ ಮಂತ್ರಮುಗ್ಧರನ್ನಾಗಿಸುತ್ತದೆ.. ವಿಶೇಷವಾಗಿ ಚಳಿಗಾಲದಲ್ಲಿ ನೋಡಲು ಎರಡು ಕಣ್ಣು ಸಾಲದು..
ಕೊಡೈಕೆನಾಲ್ : ಬೆಟ್ಟಗಳ ರಾಣಿ ಎಂದು ಪ್ರಸಿದ್ಧತೆ ಪಡೆದಿರುವ ಕೊಡೈಕೆನಾಲ್‌ಗೆ ಚಳಿಗಾಲದಲ್ಲಿ ಭೇಟಿ ನೀಡುವುದು ಅತ್ಯುತ್ತಮ ಪ್ಲಾನ್. ಇಲ್ಲಿನ ತಂಪಾದ ಗಾಳಿಯ ನಡುವೆ ಪರ್ವತದ ಮೇಲೆ ಕುಳಿತು ಒಂದು ಕಪ್ ಬಿಸಿ ಕಾಫಿ ಸವಿಯುತ್ತ.. ಪ್ರಕೃತಿಯನ್ನು ಆನಂದಿಸಬಹುದು. ನೀವು ಹೆಚ್ಚು ಶಾಂತಿಯುತ ವಾತಾವರಣ ಬಯಸುತ್ತಿದ್ದರೆ.. ಈ ಸ್ಥಳಕ್ಕೆ ತಪ್ಪದೇ ಭೇಟಿ ನೀಡಿ..