ಈ ಬೀಜವನ್ನು ತೆಂಗಿನೆಣ್ಣೆಯೊಂದಿಗೆ ಅರೆದು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದು!ಕೂದಲು ಉದುರುವುದನ್ನೂ ತಡೆಯುತ್ತದೆ
ರಾಸಾಯನಿಕ ಬಣ್ಣಗಳು ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ ನಿಜ, ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಅದೇ ಸ್ಥಿತಿ ಮರುಕಳಿಸುತ್ತದೆ.ಹೀಗಾದಾಗ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಪ್ರಯತ್ನಿಸುವುದು ಜಾಣತನ.
ನೈಸರ್ಗಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಅದಕ್ಕೆ ಸಾಸಿವೆ, ಮೆಂತ್ಯೆ ಕಾಳು ಮತ್ತು ತೆಂಗಿನೆಣ್ಣೆಯನ್ನು ಬಳಸಬೇಕು.
ಸಾಸಿವೆ ಮತ್ತು ಮೆಂತ್ಯೆಯಲ್ಲಿ ವಿಟಮಿನ್ ಇ, ವಿಟಮಿನ್ ಎ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳು ಕೂದಲಿನ ಪೋಷಕಾಂಶದ ಕೊರತೆಯನ್ನು ನೀಗಿಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.
ತೆಂಗಿನೆಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ ಅದಕ್ಕೆ ಸಾಸಿವೆ ಪುಡಿ ಮತ್ತು ಮೆಂತ್ಯೆ ಪುಡಿಯನ್ನು ಸೇರಿಸಬೇಕು.ಈ ಪುಡಿಯ ಬಣ್ಣವು ಗಾಢವಾಗುವವರೆಗೆ ಬಿಸಿ ಮಾಡಬೇಕು.ಈಗ ಈ ಎಣ್ಣೆಯನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿದರೆ ಸಾಕು.
ಈ ಮಿಶ್ರಣವನ್ನು ಹಚ್ಚಿದ ಕೆಲವೇ ದಿನಗಳಲ್ಲಿ ನಿಮ್ಮ ತಲೆಯಲ್ಲಿ ಬಿಳಿ ಕೂದಲು ಮಾಯವಾಗುವುದು ಖಂಡಿತಾ. ಇದರೊಂದಿಗೆ ಶುಷ್ಕ ಕೂದಲು, ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸಮಸ್ಯೆಗಳೂ ದೂರವಾಗುತ್ತವೆ.
ಈ ಎಣ್ಣೆಯನ್ನು ಹಚ್ಚುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಸಾಸಿವೆ ಮತ್ತು ಮೆಂತ್ಯದಲ್ಲಿರುವ ಔಷಧೀಯ ಗುಣಗಳು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಇದು ದಪ್ಪ ಮತ್ತು ಉದ್ದನೆಯ ಕೂದಲಿಗೂ ಕಾರಣವಾಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು,ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.ZEE NEWS ಇದನ್ನು ಖಚಿತಪಡಿಸುವುದಿಲ್ಲ.