ಈ ಎಣ್ಣೆಯನ್ನು ಹೀಗೆ ಬಳಸಿದರೆ ಮಂದ ದೃಷ್ಟಿ ಹಂತ ಹಂತವಾಗಿ ಚುರುಕಾಗುವುದು !ಕನ್ನಡಕ್ಕ ಬಳಕೆಯನ್ನು ಶಾಶ್ವತವಾಗಿ ನಿಲ್ಲಿಸಬಹುದು !
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳು ಕೂಡಾ ದೃಷ್ಟಿ ದೋಷದಿಂದ ಬಳಸುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಕೂಡಾ ಕನ್ನಡಕ್ಕ ಧರಿಸುವಂತೆ ಆಗಿದೆ.
ಕಣ್ಣಿನ ದೃಷ್ಟಿ ಕಡಿಮೆಯಾಗುವುದಕ್ಕೆ ಕಾರಣಗಳು ಹಲವು.ಅಧಿಕ ಟಿವಿ ನೋಡುವುದು, ಮೊಬೈಲ್, ಟ್ಯಾಬ್ ಗಳ ಬಳಕೆ ಕೂಡಾ ಕಣ್ಣಿನ ದೃಷ್ಟಿಯನ್ನು ಕಡಿಮೆಯಾಗುವುದಕ್ಕೆ ಕಾರಣವಾಗಿದೆ.
ಇದಲ್ಲದೆ ಸಾಸಿವೆ ಎಣ್ಣೆ ಕೂಡಾ ಕಣ್ಣ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ, ಇದಕ್ಕಾಗಿ ಸಾಸಿವೆ ಎಣ್ಣೆಯನ್ನು ಯಾವ ರೀತಿಯಲ್ಲಿ ಬಳಸುತ್ತೇವೆ ಎನ್ನುವುದು ಇಲ್ಲಿ ಮುಖ್ಯ.
ಸಾಸಿವೆ ಎಣ್ಣೆಯನ್ನು ಹೊಕ್ಕುಳಕ್ಕೆ ಹಚ್ಚುವುದರಿಂದ ಕಣ್ಣುಗಳ ಆರೋಗ್ಯವನ್ನು ಸುಧಾರಿಸಬಹುದು. ಇದು ಮಂದ ದೃಷ್ಟಿಯನ್ನು ಚುರುಕಾಗಿಸಲು ಸಹಾಯ ಮಾಡುತ್ತದೆ.
ಹೊಕ್ಕುಳು ಕಣ್ಣುಗಳಿಗೆ ಹೋಗುವ ನರಗಳಿಗೆ ಸಂಪರ್ಕ ಹೊಂದಿದೆ. ಹೀಗಾಗಿ ಹೊಕ್ಕುಳಕ್ಕೆ ಸಾಸಿವೆ ಎಣ್ಣೆ ಹಚ್ಚುವುದರಿಂದ ಅದು ಕಣ್ಣ ದೃಷ್ಟಿ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ಉಬ್ಬಿದ ಕಣ್ಣುಗಳು ಮತ್ತು ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನು ವಿಟಮಿನ್ ಎ ಇರುವ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಚುರುಕಾಗುತ್ತದೆ. ಇದು UV ಕಿರಣಗಳಿಂದ ಕಾರ್ನಿಯಾ ಮತ್ತು ರೆಟಿನಾವನ್ನು ರಕ್ಷಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.