ಸಾಸಿವೆ ಎಣ್ಣೆಯಲ್ಲಿ ಇವೆರಡು ವಸ್ತುಗಳನ್ನು ಬೆರೆಸಿಟ್ಟು ಬಳಸಿ, ಬಿಳಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯುತ್ತೆ..!
ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಇ ಹೆರಳವಾಗಿದೆ. ಜೊತೆಗೆ ಇದರಲ್ಲಿ ಆಂಟಿಫಂಗಲ್, ಕೊಲೊನ್ ಕೂಡ ಕಂಡು ಬರುತ್ತದೆ. ಹಾಗಾಗಿ ಇದು ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣವನ್ನು ನೀಡುವುದರ ಜೊತೆಗೆ ಕೂದಲಿನ ಬೆಳವಣಿಗೆಗೂ ಪರಿಣಾಮಕಾರಿ ಪರಿಹಾರ ಎಂದು ಹೇಳಲಾಗುತ್ತದೆ.
ಕೂದಲಿಗೆ ಸಾಸಿವೆ ಎಣ್ಣೆ ಹಚ್ಚಿ ಮಸಾಜ್ ಮಾಡಬಹುದು. ಇಲ್ಲವೇ, ಇದನ್ನು ಸೀರಮ್ ರೀತಿಯಲ್ಲೂ ಬಳಸಬಹುದು. ಆದರೆ, ಬಿಳಿ ಕೂದಲಿಗೆ ಸಾಸಿವೆ ಎಣೆಯನ್ನು ಬಲಸುವಾಗ ಇದರಲ್ಲಿ ಒಂದೆರಡು ಪದಾರ್ಥಗಳನ್ನು ಬೆರೆಸಿ ಹಚ್ಚುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಸಹಕಾರಿ ಆಗಿದೆ.
ಮೆಂತ್ಯದಲ್ಲಿ ಜಿಂಕ್, ಮೇಗ್ನೀಶಿಯಮ್, ವಿಟಮಿನ್ ಎ, ಬಿ, ಸಿ, ಬಿ6 ಮತ್ತು ಫೋಲಿಕ್ ಆಮ್ಲ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಲು ಹಾಗೂ ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ.
ಕರಿಬೇವಿನ ಎಲೆಗಳಲ್ಲೂ ಕೂಡ ವಿಟಮಿನ್ ಎ, ಸಿ, ಕಬ್ಬಿಣ, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಸಮೃದ್ಧವಾಗಿದ್ದು ಇವೆಲ್ಲವೂ ಕೂದಲಿಗೆ ನೈಸರ್ಗಿಕ ಬಣ್ಣ ನೀಡುವ ಜೊತೆಗೆ ಉದ್ದ ಕೂದಲನ್ನು ಹೊಂದಲು ಸಹಕಾರಿ ಆಗಿವೆ.
ಮೊದಲಿಗೆ ಒಂದು ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಸಾಸಿವೆ ಎಣ್ಣೆ, ಮೆಂತ್ಯ ಕಾಳುಗಳು, ಕರಿಬೇವಿನ ಸೊಪ್ಪನ್ನು ಹಾಕಿ ಸಣ್ಣ ಉರಿಯಲ್ಲಿ ಬಣ್ಣ ಬದಲಾಗುವವರೆಗೂ ಕಾಯಿಸಿ. ಅದು ಕಪ್ಪು ಬಣ್ಣಕ್ಕೆ ತಿರುಗಿದ ಬಳಿಕ ಸ್ಟೌವ್ ಆರಿಸಿ.
ಮೆಂತ್ಯ ಕಾಳುಗಳು, ಕರಿಬೇವಿನ ಎಲೆಗಳೊಂದಿಗೆ ಕಾಯಿಸಿಟ್ಟ ಸಾಸಿವೆ ಎಣ್ಣೆಯನ್ನು ಫಿಲ್ಟರ್ ಮಾಡಿಟ್ಟು ವಾರದಲ್ಲಿ ಒಮ್ಮೆ ಈ ಎಣ್ಣೆಯನ್ನು ಬಳಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.