ಹೇರ್ ಡೈ ಬೇಕಿಲ್ಲ! ಸಾಸಿವೆ ಎಣ್ಣೆಯಲ್ಲಿ ಈ ಹಸಿರು ಎಲೆಗಳನ್ನು ಬೆರೆಸಿ ಹಚ್ಚಿ ನೋಡಿ, ಒಂದೂ ಬಿಳಿ ಕೂದಲು ಇರಲ್ಲ!

Mon, 25 Nov 2024-9:14 am,

ಬಿಳಿ ಕೂದಲನ್ನು ಕಪ್ಪಾಗಿಸಲು ರಾಸಾಯನಿಕ ಮುಕ್ತವಾದ ಸಾಸಿವೆ ಎಣ್ಣೆ ಬಹಳ ಪ್ರಯೋಜನಕಾರಿ ಆಗಿದೆ.   

ಸಾಸಿವೆ ಎಣ್ಣೆಯಲ್ಲಿ ಒಂದು ವಿಶಿಷ್ಟವಾದ ಹಸಿರು ಎಲೆಗಳನ್ನು ಬೆರೆಸಿ ಹಚ್ಚುವುದರಿಂದ ಕೂದಲು ಬೇರುಗಳಿಂದ ಗಾಢ ಕಪ್ಪಾಗುತ್ತದೆ. 

ವಾಸ್ತವವಾಗಿ, ಸಾಸಿವೆ ಎಣ್ಣೆಯು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿ ಬೇರುಗಳಿಂದ ಕೂದಲನ್ನು ಪೋಷಿಸುತ್ತದೆ. 

ಕರಿಬೇವಿನ ಎಲೆಗಳಲ್ಲಿ ಬೀಟಾ-ಕ್ಯಾರೋಟಿನ್, ಪ್ರೊಟೀನ್ ಹೇರಳವಾಗಿದ್ದು ಇದು ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುವುದರ ಜೊತೆಗೆ ಕೂಡಲ ಬೆಳವಣಿಗೆಯನ್ನು ಕೂಡ ಪ್ರಚೋದಿಸುತ್ತದೆ. 

ಒಂದು ಕಪ್ ಸಾಸಿವೆ ಎಣ್ಣೆಯನ್ನು ಕಬ್ಬಿಣದ ಬಾಣಲೆಗೆ ಹಾಕಿ ಸ್ವಲ್ಪ ಬಿಸಿ ಮಾಡಿ ಅದರಲ್ಲಿ ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಎಣ್ಣೆ ಒಂದೆರಡು ಕುದಿ ಬಂದ ಮೇಲೆ ಒಲೆ ಆರಿಸಿ. 

ಕಾಯಿಸಿಟ್ಟ ಎಣ್ಣೆ ತಣ್ಣಗಾದ ಬಳಿಕ ಒಂದು ಗಾಜಿನ ಸೀಸೆಯಲ್ಲಿ ಎಣ್ಣೆಯನ್ನು ಶೋಧಿಸಿ ಸಂಗ್ರಹಿಸಿಡಿ. 

ಕರಿಬೇವಿನ ಎಲೆಯೊಂದಿಗೆ ಕಾಯಿಸಿಟ್ಟ ಸಾಸಿವೆ ಎಣ್ಣೆಯನ್ನು ವಾರದಲ್ಲಿ ಒಂದೆರಡು ಬಾರಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಮೃದುವಾಗಿ ಮಸಾಜ್ ಮಾಡಿ. ಎಣ್ಣೆ ಹಚ್ಚಿ 2 ಗಂಟೆಗಳ ಬಳಿಕ ಸೌಮ್ಯವಾದ ಶಾಂಪೂವಿನಿಂದ ಹೇರ್ ವಾಶ್ ಮಾಡಿ. 

ಸಾಸಿವೆ ಎಣ್ಣೆಯಲ್ಲಿ ಕರಿಬೇವಿನ ಎಲೆಗಳನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬುಡದಿಂದಲೂ ಕಪ್ಪಾಗಿ, ದಟ್ಟ ಉದ್ದ ಕೂದಲನ್ನು ಹೊಂದಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link