ಸಾಸಿವೆ ಎಣ್ಣೆಯಲ್ಲಿ ತುಳಸಿ ಸೇರಿದಂತೆ ಈ ಪುಡಿಗಳನ್ನು ಮಿಕ್ಸ್ ಮಾಡಿ ಹಚ್ಚಿದ್ರೆ 10 ನಿಮಿಷದಲ್ಲಿ ಕಡು ಕಪ್ಪಾಗುತ್ತೆ ಬಿಳಿ ಕೂದಲು
ನೀವು ಬಿಳಿ ಕೂದಲಿನ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ ಸಾಸಿವೆ ಎಣ್ಣೆ ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ನೀಡುತ್ತದೆ.
ಸಾಸಿವೆ ಎಣ್ಣೆಯಲ್ಲಿ ಕೂದಲಿನ ಆರೋಗ್ಯಕ್ಕೆ ಹಾಗೂ ಕಡು ಕಪ್ಪು ಕೂದಲನ್ನು ಹೊಂದಲು ಅಗತ್ಯವಾದ ಹಲವು ಅಂಶಗಳಿದ್ದು, ಇದರಲ್ಲಿ ಕೆಲವು ಪುಡಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೇವಲ ಹತ್ತು ನಿಮಿಷಗಳಲ್ಲಿ ಕೂದಲನ್ನು ಕಡು ಕಪ್ಪಾಗಿಸಬಹುದು.
ಬಿಳಿ ಕೂದಲಿಗೆ ಹೇರ್ ಆಯಿಲ್ ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ... * ಸಾಸಿವೆ ಎಣ್ಣೆ 3-4 ಚಮಚ * ತುಳಸಿ ಪೌಡರ್ - 1 ಚಮಚ * ಆಮ್ಲಾ ಪೌಡರ್- 1 ಚಮಚ * ಬೃಂಗರಾಜ ಪೌಡರ್- 1 ಚಮಚ * ಕಾಫಿ ಪೌಡರ್- 1 ಚಮಚ
ಮೇಲೆ ಉಲ್ಲೇಖಿಸಿದ ಪ್ರಮಾಣದಲ್ಲಿ ಸಾಸಿವೆ ಎಣ್ಣೆಯಲ್ಲಿ ತುಳಸಿ, ಆಮ್ಲಾ, ಬೃಂಗರಾಜ, ಕಾಫಿ ಪುಡಿಯನ್ನು ಬೆರೆಸಿ. ಒಂದು ಕಬ್ಬಿಣದ ತವಾ ಅಥವಾ ಬಾಣಲೆಯಲ್ಲಿ ಈ ಮಿಶ್ರಣವನ್ನು 3-4 ನಿಮಿಷಗಳ ಕಾಲ ಬಿಸಿ ಮಾಡಿ.
ಎಣ್ಣೆ ತಣ್ಣಗಾದ ಬಳಿಕ ಇದನ್ನೂ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಸಮಯ ಹಾಗೆ ಬಿಟ್ಟು ಹೇರ್ ವಾಶ್ ಮಾಡಿದರೆ ನಿಮ್ಮ ಕೂದಲು ಕಡು ಕಪ್ಪಾಗಿ ಸೊಂಪಾಗಿ ಬೆಳೆಯುತ್ತೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.