ಈ ಪುಟ್ಟ ಕಾಳನ್ನು ಅರೆದು ತೆಂಗಿನೆಣ್ಣೆಯೊಂದಿಗೆ ಕೂದಲಿಗೆ ಹಚ್ಚಿ!ಬಿಳಿ ಕೂದಲು ಪಕ್ಕಾ ಕಪ್ಪಾಗುವುದು !
ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು, ಸಾಸಿವೆ ಬೀಜಗಳನ್ನು ಬಳಸಬಹುದು. ಇದು ಕೂದಲು ಉದುರುವಿಕೆ, ತಲೆಹೊಟ್ಟು, ಒಣ ಕೂದಲು ಮುಂತಾದ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
ಸಾಸಿವೆ ಬೀಜಗಳಲ್ಲಿ ವಿಟಮಿನ್ ಎ ಕಂಡುಬರುತ್ತದೆ. ಇದು ನೆತ್ತಿಯನ್ನು ಪೋಷಿಸಲು ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಸಾಸಿವೆ ಕಾಳುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ -3 ಮತ್ತು ವಿಟಮಿನ್ ಇ ನಂತಹ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಇದು ಕೂದಲನ್ನು ಬಲಪಡಿಸಲು ಮತ್ತು ಕಪ್ಪು ಬಣ್ಣವನ್ನು ಮರಳಿ ತರುವ ಕೆಲಸ ಮಾಡುತ್ತದೆ.
ಸಾಸಿವೆಯನ್ನು ಚೆನ್ನಾಗಿ ಅರೆದು ತೆಂಗಿನೆಣ್ಣೆಗೆ ಸೇರಿಸಿ ಕುಡಿಸಿ. ಈ ಎಣ್ಣೆ ತಣ್ಣಗಾದ ಬಲಿಕ್ ಅಕುದಲಿಗೆ ಹಚ್ಚಿ ಮಸಾಜ್ ಮಾಡಿ. ಇದು ಬೇರುಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಿ, ಬಿಳಿ ಕೂದಲನ್ನು ಕ್ರಮೇಣ ಕಪ್ಪಾಗಿಸುತ್ತದೆ.
ಒಣಗಿಸಿ ಪುಡಿ ಮಾಡಿದ ಸಾಸಿವೆಯನ್ನು ಒಂದು ಮೊಟ್ಟೆಯ ಜೊತೆ ಬೆರಸಿ ಮಿಶ್ರಣ ಮಾಡಿ.ಈಗ ಅದಕ್ಕೆ ತೆಂಗಿನೆಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಬೆರೆಸಿ ಹೇರ್ ಮಾಸ್ಕ್ ತಯಾರಿಸಿ ಕೂದಲಿಗೆ ಹಚ್ಚಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ