“ಈ ಆಟಗಾರ ಭಾರತದಲ್ಲಿರೋದು ಪುಣ್ಯದ ಫಲ-ಹೆಮ್ಮೆಯ ಸಂಗತಿ”: ಮುತ್ತಯ್ಯ ಮುರಳೀಧರನ್ ಹೇಳಿದ್ದು ಯಾರ ಬಗ್ಗೆ?
ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಶ್ರೀಲಂಕಾದ ಅಂತರಾಷ್ಟ್ರೀಯ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್. ಈ ದಿಗ್ಗಜನ ಬಗ್ಗೆ ಸಿನಿಮಾವೊಂದು ತೆರೆಗೆ ಬಂದಿದೆ.
ಅಂದಹಾಗೆ ಕೇವಲ ಟೆಸ್ಟ್ ಕ್ರಿಕೆಟ್’ನಲ್ಲಿ 800ಕ್ಕೂ ಹೆಚ್ಚು ಪಡೆದ ಏಕೈಕ ಬೌಲರ್ ಅಂದ್ರೆ ಅದು ಮುತ್ತಯ್ಯ ಮುರಳೀಧರನ್. ಇವರು ಟೀಂ ಇಂಡಿಯಾದ ಆಟಗಾರನೊಬ್ಬನ ಬಗ್ಗೆ ಮಾತನಾಡಿದ್ದಾರೆ.
ಶ್ರೀಲಂಕಾದ ಕ್ರಿಕೆಟ್ ಕೋಚ್ ಆಗಿರುವ ಮುತ್ತಯ್ಯ ಮುರಳೀಧರನ್ ಜೀವನಾಧರಿತ ಸಿನಿಮಾ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ. ‘800’ ಎಂಬ ಹೆಸರಿನಲ್ಲಿರುವ ಈ ಚಿತ್ರದಲ್ಲಿ ಮುರಳೀಧರನ್ ಅವರ ಬದುಕಿನ ಚಿತ್ರಣವನ್ನು ಅನಾವರಣ ಮಾಡಲಾಗಿದೆ.
ಇನ್ನು ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಮುತ್ತಯ್ಯ ಮುರಳೀಧರನ್ ಅವರು ಟೀಂ ಇಂಡಿಯಾ ಮತ್ತು ಭಾರತದ ಕ್ರಿಕೆಟಿಗರನ್ನು ಕೊಂಡಾಡಿದ್ದಾರೆ.
ಅದರಲ್ಲೂ ಎಂ.ಎಸ್.ಧೋನಿಯಂತಹ ಆಟಗಾರ ಭಾರತದಲ್ಲಿ ಇರೋದು ಪುಣ್ಯದ ಫಲ ಎಂಬಂತೆ ಮಾತನಾಡಿದ್ದಾರೆ. ಧೋನಿ ಬಗ್ಗೆ ಮಾತನಾಡಿದ ಅವರು, “ಧೋನಿ ನಿಜವಾಗಿಯೂ ಕೂಲ್ ಕ್ಯಾಪ್ಟನ್. ಅನೇಕ ಪಂದ್ಯಗಳ ಗೆಲುವಿಗೆ ಕಾರಣವಾಗಿದ್ದಾರೆ. ಇಂತಹ ಆಟಗಾರ ಭಾರತದಲ್ಲಿ ಇರೋದು ನಿಜಕ್ಕೂ ಹೆಮ್ಮೆ” ಎಂದು ಹೇಳಿದ್ದಾರೆ.
ಎಂ.ಎಸ್.ಶ್ರೀಪತಿ ಎಂಬವರು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮಧುರ್ ಎಂಬವರು ಮುತ್ತಯ್ಯ ಮುರಳೀಧರನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಡಿಸೆಂಬರ್ 2 ರಿಂದ ಈ ಸಿನಿಮಾ ಜಿಯೋದಲ್ಲಿ ಸ್ಟ್ರೀಮ್ ಆಗುತ್ತಿದ್ದು, ಎಲ್ಲರೂ ಕನ್ನಡದಲ್ಲೇ ಸಿನಿಮಾ ನೋಡಿ ಎಂದು ಮುತ್ತಯ್ಯ ಮುರಳೀಧರನ್ ಅವರು ಮನವಿ ಮಾಡಿಕೊಂಡಿದ್ದಾರೆ.