ಭಗವಾನ್‌ ಶ್ರೀಕೃಷ್ಣನ ಜೀವಂತ ಹೃದಯಕ್ಕೆ ಪೂಜೆ ಮಾಡುವ ದೇಶದ ಅತ್ಯಂತ ನಿಗೂಢ ದೇವಾಲಯ ಯಾವುದು ಗೊತ್ತಾ? ಈ ದೇವಸ್ಥಾನದ ಮೇಲೆ ಒಂದೇ ಒಂದು ಹಕ್ಕಿಯೂ ಹಾರಲ್ಲ

Mon, 25 Nov 2024-7:17 pm,
Jagannath Puri Temple

ಹಿಂದೂಗಳ ಪ್ರಮುಖ ಯಾತ್ರಾಸ್ಥಳ ಎಂದು ಕರೆಯಲ್ಪಡುವ ಜಗನ್ನಾಥ ಪುರಿ ದೇವಾಲಯವು ಹಲವು ವೈಚಿತ್ರ್ಯಗಳಿಗೆ ಸಾಕ್ಷಿಯಾಗಿವೆ. ಚಾರ್‌ ಧಾಮ (ಬದರಿನಾಥ್, ದ್ವಾರಕಾ, ರಾಮೇಶ್ವರಂ ಮತ್ತು ಪುರಿ)ಗಳಲ್ಲಿ ಒಂದಾದ ಈ ದೇವಾಲಯವು ಇಂದಿಗೂ ವಿಜ್ಞಾನಕ್ಕೂ ಪತ್ತೆಹಚ್ಚಲು ಸಾಧ್ಯವಾಗದಂತಹ ರಹಸ್ಯಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ.

Jagannath Puri Temple

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳಿವೆ. ಈ ದೇವಾಲಯದ ಮೇಲೆ ಯಾವುದೇ ವಿಮಾನ ಹಾರಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಒಂದೇ ಒಂದು ಪಕ್ಷಿಯೂ ಸಹ ಹಾರುವುದಿಲ್ಲ. ಒಂದು ವೇಳೆ ಅಂತಹ ಘಟನೆ ಸಂಭವಿಸಿದರೆ ಅದು ಜಗತ್ತಿಗೆ ಕಂಟಕ ಎದುರಾಗುವ ಮುನ್ಸೂಚನೆ ಎಂದು ಹೇಳಲಾಗುತ್ತದೆ.

 

Jagannath Puri Temple

ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವು ಮೊದಲು ಬದರಿನಾಥಕ್ಕೆ ಆಗಮಿಸುತ್ತಾರೆ. ಅಲ್ಲಿ ಮಜ್ಜನ ಮುಗಿಸಿದ ವಿಷ್ಣು ನಂತರ ಗುಜರಾತ್‌ (ದ್ವಾರಕೆ)ಗೆ ಆಗಮಿಸಿ ವಸ್ತ್ರಗಳನ್ನು ಧರಿಸುತ್ತಾರೆ. ಅಲ್ಲಿಂದ ಮುಂದೆ ಒಡಿಶಾದ ಪುರಿಗೆ ಬಂದು ಆಹಾರ ಸೇವಿಸುತ್ತಾರೆ. ನಂತರ ತಮಿಳುನಾಡಿನ ರಾಮೇಶ್ವರಂಗೆಬಂದು ಅಲ್ಲಿ ವಿಶ್ರಾಂತಿ ಪಡೆದಿದ್ದಾರೆ ಎಂಬುದು ನಂಬಿಕೆ. ಹೀಗೆ ಚಾರ್‌ ಧಾಮಗಳು ಸೃಷ್ಟಿಯಾಗಿವೆ ಎನ್ನಲಾಗುತ್ತದೆ.

 

ಹಿಂದೂ ಧರ್ಮದಲ್ಲಿ, ಭೂಮಿಯ ವೈಕುಂಠ ಎಂದು ಕರೆಯಲ್ಪಡುವ ಜಗನ್ನಾಥ ಪುರಿಗೆ ಬಹಳ ವಿಶೇಷ ಪ್ರಾಮುಖ್ಯತೆಯನ್ನು ಪರಿಗಣಿಸಲಾಗಿದೆ. ಇಲ್ಲಿ ಭಗವಾನ್ ಶ್ರೀ ಕೃಷ್ಣ, ಸುಭದ್ರ ಮತ್ತು ಬಲರಾಮರನ್ನು ಧಾರ್ಮಿಕ ವಿಧಿಗಳೊಂದಿಗೆ ಪ್ರತಿದಿನ ಪೂಜಿಸಲಾಗುತ್ತದೆ.

 

ಪುರಾಣಗಳ ಪ್ರಕಾರ, ಭಗವಾನ್ ಶ್ರೀಕೃಷ್ಣ ತನ್ನ ದೇಹವನ್ನು ತೊರೆದ ನಂತರ ದಹನ ಮಾಡಿದಾಗ, ಅವರ ಒಂದು ಭಾಗವನ್ನು ಹೊರತುಪಡಿಸಿ ಸಂಪೂರ್ಣ ದೇಹವು ಪಂಚಭೂತಗಳಲ್ಲಿ ಬೆರೆತುಹೋಯಿತು. ಆ ಸಮಯದಲ್ಲಿ ಶ್ರೀ ಕೃಷ್ಣನ ಹೃದಯವು ಬಡಿಯುತ್ತಿತ್ತು ಎಂದು ಹೇಳಲಾಗುತ್ತದೆ. ಅದೇ ಹೃದಯವನ್ನು ಪುರಿಯಲ್ಲಿ ಜಗನ್ನಾಥನ ಪ್ರತಿಮೆಯೊಳಗೆ ಇಂದಿಗೂ ಸುರಕ್ಷಿತವಾಗಿರಿಸಿ ನಿತ್ಯ ಪೂಜಿಸಲಾಗುತ್ತದೆ.

 

ಪುರಿ ಜಗನ್ನಾಥ ದೇವಾಲಯದಲ್ಲಿ ಸಿಗುವ ಪ್ರಸಾದವನ್ನು ಮಹಾಪ್ರಸಾದ ಎಂದು ಕರೆಯುತ್ತಾರೆ. ಈ ಪ್ರಸಾದದ ವಿಶೇಷತೆ ಏನೆಂದರೆ ಇದನ್ನು ಮಣ್ಣಿನ ಪಾತ್ರೆಯಲ್ಲಿ ಮಾತ್ರ ತಯಾರಿಸಲಾಗುತ್ತದೆ. ಇದಷ್ಟೇ ಅಲ್ಲದೆ, ಒಲೆಯಲ್ಲೇ ಇದನ್ನು ತಯಾರಿಸಲಾಗುತ್ತದೆ. ಇನ್ನು ಪ್ರಸಾದ ತಯಾರಿಸುವಾಗ ಪಾತ್ರೆಗಳನ್ನು ಒಂದರ ಮೇಲೊಂದರಂತೆ ಇಡುತ್ತಾರೆ. ಆದರೆ ಈ ಸಂದರ್ಭದಲ್ಲಿ ಮೊದಲು ಆಹಾರ ಸಿದ್ಧವಾಗುವುದು ಮೊದಲ ಮಡಿಕೆಯಲ್ಲಿರುವ ಆಹಾರ.

 

ಜಗನ್ನಾಥ ಪುರಿ ದೇವಸ್ಥಾನವನ್ನು ಗರುಡ ಪಕ್ಷಿ ರಕ್ಷಿಸುತ್ತದೆ ಎಂದು ನಂಬಲಾಗಿದೆ. ಈ ಪಕ್ಷಿಯನ್ನು ಪಕ್ಷಿಗಳ ರಾಜ ಎಂದು ಕರೆಯಲಾಗುತ್ತದೆ, ಆದ್ದರಿಂದ ಇತರ ಪಕ್ಷಿಗಳು ದೇವಾಲಯದ ಮೇಲೆ ಹೋಗಲು ಹೆದರುತ್ತವೆ. ಕುತೂಹಲಕಾರಿಯಾಗಿ, ಪುರಿಯ ಜಗನ್ನಾಥ ದೇವಾಲಯದ ಮೇಲೆ ಎಂಟು ಲೋಹದ ಚಕ್ರವಿದೆ, ಇದನ್ನು ನೀಲಿ ಚಕ್ರ ಎಂದು ಕರೆಯಲಾಗುತ್ತದೆ. ದೇ

 

ಸಾಮಾನ್ಯವಾಗಿ ನೀವು ದೇವಸ್ಥಾನದಲ್ಲಿ ಒಂದು ಅಥವಾ ಎರಡು ಬಾಗಿಲುಗಳನ್ನು ನೋಡಿರಬಹುದು, ಆದರೆ ಜಗನ್ನಾಥ ಪುರಿ ದೇವಸ್ಥಾನಕ್ಕೆ ನಾಲ್ಕು ಬಾಗಿಲುಗಳಿವೆ. ಮುಖ್ಯ ದ್ವಾರವನ್ನು ಸಿಂಹದ್ವಾರಂ ಎಂದು ಕರೆಯಲಾಗುತ್ತದೆ. ಸಿಂಹದ್ವಾರಂ ದ್ವಾರದಲ್ಲಿ ಸಮುದ್ರದ ಅಲೆಗಳ ಶಬ್ದ ಕೇಳುತ್ತದೆ ಎಂದು ಹೇಳಲಾಗುತ್ತದೆ. ಒಂದು ಬಾರಿ ಈ ದೇವಾಲಯಕ್ಕೆ ಪ್ರವೇಶಿಸಿದರೆ ಅಲೆಗಳ ಶಬ್ದವು ಸಂಪೂರ್ಣವಾಗಿ ನಿಲ್ಲುತ್ತದೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link