ಸಮಂತಾ ಜೊತೆ ಡಿವೋರ್ಸ್ ಆಗಿದ್ದು ಇದೇ ಕಾರಣಕ್ಕೆ...! ದೂರವಾದ ಕುರಿತು ಕೊನೆಗೂ ಮೌನ ಮುರಿದ ನಾಗ ಚೈತನ್ಯ!
ಟಾಲಿವುಡ್ ಸ್ಟಾರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದ ಸಮಂತಾ ರುತ್ ಪ್ರಭು ಹಾಗೂ ನಾಗಚೈತನ್ಯ ರೀಲ್ ಅಷ್ಟೇ ಅಲ್ಲದೆ ರಿಯಲ್ ಲೈಫ್ ನಲ್ಲೂ ಅತ್ಯುತ್ತಮ ಜೋಡಿಯಾಗಿ ಗುರುತಿಸಿಕೊಂಡಿದ್ದರು.
"ಏ ಮಾಯ ಚೇಸಾವೆ" ಚಿತ್ರದ ಮೂಲಕ ಪರಸ್ಪರ ಪರಿಚಯವಾಗಿದ್ದ ಸಮಂತಾ ನಾಗಚೈತನ್ಯ ಹಿಟ್ ಮೂವಿ ಬಳಿಕ ಪ್ರೀತಿಯಲ್ಲಿ ಬಿದ್ದದ್ದರು.
ಅಂತರ್ ಧರ್ಮೀಯರಾಗಿದ್ದ ನಟಿ ಸಮಂತಾ ರುತ್ ಪ್ರಭು- ನಾಗ ಚೈತನ್ಯ ಜೋಡಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು.
ಆದರೆ, ವೈವಾಹಿಕ ಭಿನ್ನಾಭಿಪ್ರಾಯಗಳಿಂದಾಗಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಪಡೆದಿದ್ದರು.
ಡಿವೋರ್ಸ್ ಕುರಿತಂತೆ ಭಾವನಾತ್ಮಕವಾಗಿ ಆಗಾಗ್ಗೆ ಸಮಂತಾ ಪೋಸ್ಟ್ ಹಾಕಿಕೊಳ್ಳುತ್ತಾರೆ. ಆದರೆ, ನಾಗಚೈತನ್ಯ ಎಂದಿಗೂ ಈ ಬಗ್ಗೆ ಮಾತನಾಡಿರಲಿಲ್ಲ.
ಇದೀಗ ಮೊದಲ ಬಾರಿಗೆ ತಮ್ಮ ಡಿವೋರ್ಸ್ ಬಗ್ಗೆ ಮಾತನಾಡಿರುವ ನಾಗ ಚೈತನ್ಯ, ಯಾವುದೇ ಜಗಳ, ಆರೋಪ-ಪ್ರತ್ಯಾರೋಪಗಳಿರದೆ, ಚೀಪ್ ಗಿಮಿಕ್ ಗಳಿಲ್ಲದೆ ನಾವು ಪರಸ್ಪರ ತುಂಬಾ ಗೌರವಯುತವಾಗಿ ಬೇರ್ಪಟ್ಟಿದ್ದೇವೆ ಎಂದು ತಿಳಿಸಿದ್ದಾರೆ.