ಭಾರತೀಯ ಸೇನೆ, ಮಿಸ್ ಇಂಡಿಯಾ..! ನಾಗ ಚೈತನ್ಯ ಮದುವೆಯಾಗಲಿರುವ ನಟಿಯ ಕುಟುಂಬ ಸಾಮಾನ್ಯದ್ದಲ್ಲ..
ಇಷ್ಟು ದಿನ ಶೋಭಿತಾ ಧೂಳಿಪಾಲ ತಮ್ಮ ಗ್ಲಾಮರ್ ಮತ್ತು ಸಿನಿಮಾಗಳ ಮೂಲಕ ಸುದ್ದಿಯಲ್ಲಿದ್ದರು. ವಿವಿಧ ವೆಬ್ ಸಿರೀಸ್‌ಗಳೊಂದಿಗೆ ತೆರೆ ಮೇಲೆ ಕಾಣಿಸಿಕೊಂಡು ಸಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದರು... ಇತ್ತೀಚೆಗೆ ನಾಗ ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಮುನ್ನೆಲೆಗೆ ಬಂದಿದ್ದಾರೆ..
ಮಾಧ್ಯಮಗಳಿಂದ ದೂರವಿರುವ ಅಕ್ಕಿನೇನಿ ಹಾಗೂ ಶೋಭಿತಾ ಕುಟುಂಬ ಕೆಲ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯ ನೇರವೇರಿಸಿದೆ... ಈ ಕುರಿತ ಫೊಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
ಶೋಭಿತಾ ಧೂಳಿಪಾಲ.. ಅಚ್ಚ ತೆಲುಗು ಹುಡುಗಿ, ಮಾತೃಭಾಷೆ ಬಿಟ್ಟು ಹಿಂದಿಯ ‘ರಮಣ್ ರಾಘವ್ 2.ಓ’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.
ಶೋಭಿತಾ ಅವರ ವೃತ್ತಿಜೀವನ ಬಾಲಿವುಡ್ ಸಿನಿಮಾಗಳಿಂದ ಪ್ರಾರಂಭವಾಯಿತು. ನಂತರ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ನಾಯಕಿಯಾಗಿ ತಮ್ಮ ಅದೃಷ್ಟವನ್ನು ಪರೀಕ್ಷೆಗಿಳಿದು ಯಶಸ್ಸು ಕಂಡಿದ್ದಾರೆ..
31 ಮೇ 1992 ರಂದು ಆಂಧ್ರಪ್ರದೇಶದ ತೆನಾಲಿಯಲ್ಲಿ ವೇಣು ಗೋಪಾಲ್ ರಾವ್ ಮತ್ತು ಶಾಂತಿ ಕಾಮಾಕ್ಷಿ ದಂಪತಿಗೆ ಜನಿಸಿದ ಶೋಭಿತಾ, ಫೆಮಿನಾ ಮಿಸ್ ಇಂಡಿಯಾ ಅರ್ಥ್ 2013 ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಆಕೆಯ ತಂದೆ ವೃತ್ತಿಯಲ್ಲಿ ನೌಕಾ ಅಧಿಕಾರಿಯಾಗಿದ್ದ ಕಾರಣ, ಅವರ ಕುಟುಂಬವು ವಿಶಾಖಪಟ್ಟಣಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರು ಲಿಟಲ್ ಏಂಜಲ್ ಸ್ಕೂಲ್ ಮತ್ತು ವಿಶಾಖ ವ್ಯಾಲಿ ಸ್ಕೂಲ್ನಲ್ಲಿ ಓದಿದರು.
ನಂತರ ಅವರ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು. ಅಲ್ಲಿ ಎಂ.ಕಾಂ ಜೊತೆಗೆ ಬಿ.ಕಾಂ ಮುಗಿಸಿದಳು. ಆ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ಮಿಸ್ ಇಂಡಿಯಾ ಅರ್ಥ್ ಕಿರೀಟ ಮುಡಿಗೇರಿಸಿಕೊಂಡರು. ನಟಿಯ ಒಟ್ಟು ಆಸ್ತಿ ಸುಮಾರು ರೂ. 35 ಕೋಟಿ ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.
ಶೋಭಿತಾ ಧೂಳಿಪಾಲ 'ಗೂಢಾಚಾರಿ' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. 'ಮೇಡ್ ಇನ್ ಹೆವನ್', 'ಬರ್ಡ್ ಆಫ್ ಬ್ಲಡ್', 'ದಿ ನೈಟ್' ಮುಂತಾದ ವೆಬ್ ಸೀರೀಸ್‌ಗಳಲ್ಲಿ ನಟಿಸಿದ್ದಾರೆ.
ಸದ್ಯ ಸೋಭಿತಾ ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ನಾಗ ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲೇ ಅಕ್ಕಿನೇನಿ ಮನೆ ಸೊಸೆಯಾಗಲಿದ್ದಾರೆ.