ಸಮಂತಾಗೆ ವಿಚ್ಛೇದನ ನೀಡುತ್ತಿದ್ದಂತೆಯೇ ನಾಗಾರ್ಜುನ ಕುಟುಂಬದ ಸೊಸೆಯಾಗಲು ರೆಡಿಯಾದ ಖ್ಯಾತ ನಟಿ!

Fri, 09 Sep 2022-3:25 pm,

ಶೋಭಿತಾ ಧೂಳಿಪಾಲ ಅವರು ತಮ್ಮ ಟ್ರೇಲರ್ ಲಾಂಚ್ ಲುಕ್‌ನಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 

ಇತ್ತೀಚೆಗಷ್ಟೇ ಪೊನ್ನಿಯನ್ ಸೆಲ್ವನ್' ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ಜೊತೆಗೆ ನಟಿ ಶೋಭಿತಾ ಧೂಳಿಪಾಲ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೋಭಿತಾ ಧೂಳಿಪಾಳ ಅವರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಬಹಳ ಅದ್ಭುತವಾದ ಲುಕ್‌ನಲ್ಲಿ ಆಗಮಿಸಿದ್ದರು.

ಶೋಭಿತಾ ಧೂಳಿಪಾಲ ಅವರು ತಮ್ಮ ಟ್ರೇಲರ್ ಲಾಂಚ್ ಲುಕ್‌ನಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 

ಈ ಲುಕ್‌ನಲ್ಲಿ ಶೋಭಿತಾ ಧೂಳಿಪಾಲ ಗೋಲ್ಡನ್ ಏಂಜೆಲ್‌ನಂತೆ ಕಾಣುತ್ತಿರುವುದನ್ನು ಕಾಣಬಹುದು. ನಟಿ ಆಫ್ ಶೋಲ್ಡರ್ ಬ್ಲೌಸ್ ಧರಿಸಿದ್ದಾರೆ. ಇದರೊಂದಿಗೆ ಭಾರೀ ಆಭರಣಗಳೊಂದಿಗೆ ಮಿಂಚುತ್ತಿದ್ದಾರೆ.  

ಶೋಭಿತಾ  ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಭಾಗವಾಗಿರುವ ಪ್ರಸಿದ್ಧ ನಟಿ. ನಟಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಾಗ ಚೈತನ್ಯ ಅವರಿಗೆ 35 ವರ್ಷವಾಗಿದ್ದರೆ, ಶೋಭಿತಾ ಅವರಿಗಿಂತ ಐದು ವರ್ಷ ಚಿಕ್ಕವರು.   

ಇತ್ತೀಚಿನ ದಿನಗಳಲ್ಲಿ ನಾಗ ಚೈತನ್ಯ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿದೆ.   

ನಾಗಾ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕೆಲವು ಸಮಯದ ಹಿಂದೆ, ಇಬ್ಬರೂ ಈ ಮನೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  

ವರದಿಗಳ ಪ್ರಕಾರ, ನಾಗ ಚೈತನ್ಯ ಶೋಭಿತಾಗೆ ತಮ್ಮ ಐಷಾರಾಮಿ ಮನೆ ತೋರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ, ಇಬ್ಬರೂ ತುಂಬಾ ಸಂತೋಷದಿಂದ ಕಾಣುತ್ತಿದ್ದರು. ಮನೆಗೆ ಭೇಟಿ ನೀಡಿದ ನಂತರ ನಾಗ ಮತ್ತು ಶೋಭಿತಾ ಕೂಡ ಕಾರಿನಲ್ಲಿ ಒಟ್ಟಿಗೆ ಹೋಗುತ್ತಿರುವುದು ಕಂಡು ಬಂದಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link