Naga Chaturthi 2024: ನಾಗ ಚತುರ್ಥಿಯ ಪೂಜಾ ವಿಧಾನ, ಮಂಗಳಕರ ಸಮಯ ಮತ್ತು ಮಹತ್ವವನ್ನು ತಿಳಿಯಿರಿ

Thu, 08 Aug 2024-10:08 am,

ಶ್ರಾವಣ ಶುಕ್ಲ ಪಕ್ಷದ ಚತುರ್ಥಿಯನ್ನು ನಾಗ ಚತುರ್ಥಿ ಅಥವಾ ನಾಗರ ಚೌತಿ ಎಂದು ಕರೆಯಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಗಂಡ ಮತ್ತು ಮಕ್ಕಳ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ. 

ನಂಬಿಕೆಗಳ ಪ್ರಕಾರ, ಈ ದಿನದಂದು ಸರ್ಪ ದೇವರನ್ನು ಪೂಜಿಸುವುದರಿಂದ ಕಾಲಸರ್ಪ ಮತ್ತು ರಾಹು-ಕೇತುಗಳ ದುಷ್ಪರಿಣಾಮಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಈ ಹಬ್ಬವನ್ನು ನಾಗ ಪಂಚಮಿಯ ಒಂದು ದಿನ ಮೊದಲು ಆಚರಿಸಲಾಗುತ್ತದೆ.

ಈ ವರ್ಷ ಆಗಸ್ಟ್ 8 ರಂದು ನಾಗ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಹಾಗಾಗಿ ನಾಗ ಪಂಚಮಿಯನ್ನು ಆಗಸ್ಟ್ 9 ರಂದು ಆಚರಿಸಲಾಗುತ್ತದೆ. ನಾಗ ಚತುರ್ಥಿಯ ದಿನದಂದು ಭಕ್ತರು ನಾಗದೇವತೆಗಳನ್ನು ಪೂಜಿಸುತ್ತಾರೆ.

ಈ ದಿನ ಹಾವಿನ ಹುತ್ತಕ್ಕೆ ಹಾಲನ್ನು ನೈವೇದ್ಯ ಮಾಡಿ ಪೂಜಿಸುತ್ತಾರೆ. ಮಹಿಳೆಯರು ಇಡೀ ದಿನ ಉಪವಾಸವನ್ನು ಆಚರಿಸುತ್ತಾರೆ. ದೇವಾಲಯಗಳಿಗೆ ಹೋಗುತ್ತಾರೆ ಮತ್ತು ನಾಗ ದೇವರ ವಿಗ್ರಹಗಳಿಗೆ ನೀರು ಮತ್ತು ಹಾಳು ಎರೆಯುತ್ತಾರೆ.

ಇದರ ನಂತರ, ವಿಗ್ರಹಗಳ ಮೇಲೆ ಅರಿಶಿನವನ್ನು ಲೇಪಿಸಲಾಗುತ್ತದೆ ಮತ್ತು ಅವುಗಳ ಮೇಲೆ ಕುಂಕುಮ ಚುಕ್ಕೆಗಳನ್ನು ಹಾಕಲಾಗುತ್ತದೆ. ನಂತರ, ಧೂಪದ್ರವ್ಯ ಮತ್ತು ಪ್ರಸಾದವನ್ನು ಅರ್ಪಿಸಲಾಗುತ್ತದೆ. ಅಂತಿಮವಾಗಿ ಆರತಿ ಮಾಡಲಾಗುತ್ತದೆ.

ಒಂಬತ್ತು ಸರ್ಪ ದೇವತೆಗಳಾದ ಶೇಷ, ಪದ್ಮನಾಭ, ಕಂಬಳ, ಅನಂತ, ವಾಸುಕಿ, ಧೃತರಾಷ್ಟ್ರ, ಶಂಖಪಾಲ, ತಕ್ಷಕ ಮತ್ತು ಕಾಳಿಯರ ಆಶೀರ್ವಾದವನ್ನು ಪಡೆಯಲು ಸರ್ಪ ಸೂಕ್ತಂ ಸ್ತೋತ್ರವನ್ನು ಈ ದಿನ ಹೇಳಬಹುದು.

ನಾಗ ಚತುರ್ಥಿಯಂದು ರಾಹು-ಕೇತುಗಳನ್ನು ಪೂಜಿಸುವುದರಿಂದ ಜಾತಕದ ಮೇಲೆ ಅವರ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ನಾಗದೇವತೆಗಳನ್ನು ಪೂಜಿಸುವುದರಿಂದ ನಮ್ಮ ಪೂರ್ವಜರಿಂದ ಬಂದಿರುವ ನಾಗಶಾಪದಿಂದ ಮುಕ್ತಿಯೂ ಸಿಗುತ್ತದೆ. 

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link