ಸಮಂತಾಗೆ 200 ಕೋಟಿ ಆಫರ್ ಕೊಟ್ಟ ನಾಗಚೈತನ್ಯ ಕುಟುಂಬ! ಕಾರಣ ಗೊತ್ತಾದ್ರೆ ಶಾಕ್ ಆಗ್ತೀರ!
Samantha: ಸಮಂತಾ ತೆಲುಗು ಇಂಡಸ್ಟ್ರಿಯಲ್ಲಿ ಅಷ್ಟೆ ಅಲ್ಲದೆ ಇಡೀ ಸೌತ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ನೇಮ್, ಫೇಮ್ ಗಳಿಸಿರುವ ನಟಿ. ಈಕೆಯ ವಿಚ್ಛೇದನದ ಸುದ್ದಿ ಇಂದಿಗೂ ಕೂಡ ಸಿಕ್ಕಾಪಟ್ಟೆ ಚರ್ಚೆಯಾಗುತ್ತದೆ. ಇತೀಚೆಗಷ್ಟೆ ನಾಗಚೈತನ್ಯ ಅವರ ಎರಡನೇ ಮದುವೆ ಕೂಡ ನಡೆದು ಮುಗಿದಿದೆ. ಆದರೆ, ಸಮಂತಾ ಅವರ ವಿಚ್ಛೇದನ ಸುದ್ದಿಗಳಿಗೆ ಮಾತ್ರ ಇನ್ನೂ ಕೂಡ ಬ್ರೇಕ್ ಬಿದ್ದಿಲ್ಲ.
2008ರಲ್ಲಿ ಒಂದು ಸಿನಿಮಾದಲ್ಲಿ ಆಗಿದ್ದ ಇವರ ಪರಿಚಯ ನಂತರ ಸ್ನೇಹಕ್ಕೆ ತಿರುಗಿತ್ತು, 8 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ ನಂತರ ಈ ಜೋಡಿ ಮನೆಯವರನ್ನು ಒಪ್ಪಿಸಿ ಎರಡು ಧರ್ಮದ ಸಂಪ್ರದಾಯದಂತೆ ಮದುವೆ ಕೂಡ ಆಗಿತ್ತು.
2017ರಲ್ಲಿ ಮದುವೆಯಾಗಿದ್ದ ಈ ಜೋಡಿ ನಾಲ್ಕೆ ವರ್ಷಗಳಲ್ಲಿ ವಿಚ್ಛೇದನ ಪಡೆಯುವ ನಿರ್ಧಾರಕ್ಕೆ ಬಂದುಬಿಟ್ಟಿತ್ತು. ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದರು. ಇವರಿಬ್ಬರು ದೂರವಾದ ನಂತರ ಮತ್ತೆ ಒಂದಾಗುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದರು, ಆದರೆ ನಾಗಚೈತನ್ಯ ಇತ್ತೀಚೆಗೆ ಶೋಭಿತಾ ಅವರನ್ನು ಎರಡನೆ ಮದುವೆಯಾಗುವ ಮೂಲಕ ಈ ನಂಬಿಕೆಯನ್ನು ಹುಸಿ ಮಾಡಿದ್ದಾರೆ.
ಈ ಜೋಡಿ ವಿಚ್ಛೇದನ ಪಡೆಯಲು ಕಾರಣ ಏನು ಎಂಬುದು ಇಂದಿನ ವರೆಗೂ ಕೂಡ ತಿಳಿದುಬಂದಿಲ್ಲವಾದರೂ, ಈ ಕುರಿತಾದ ಚರ್ಚೆಗಳು ಇಂದಿಗೂ ನಡೆಯುತ್ತಲೇ ಇರುತ್ತದೆ.
ಇದೀಗ, ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ಅದ್ದೂರಿಯಾಗಿ ನಡೆದು ಮುಗಿದಿದೆ. ಇದರ ಬೆನ್ನಲ್ಲೆ ಸಮಂತಾ ಅವರಿಗೆ ಸಂಬಂಧಪಟ್ಟ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಮಂತಾ ಹಾಗೂ ನಾಗಚೈತನ್ಯ ಅವರು ವಿಚ್ಛೇದನ ಪಡೆದ ನಂತರ, ನಾಗಚೈತನ್ಯ ಹಾಗೂ ನಾಗಾರ್ಜುನ ಅವರು ಸಮಂತಾ ಅವರಿಗೆ 200 ಕೋಟಿ ಜೀವನಾಂಶ ಕೊಡುವುದಾಗಿ ಆಫರ್ ಕೊಟ್ಟಿದ್ದರಂತೆ.
ಅಕ್ಕಿನೇನಿ ಕುಟುಂಬ ನೀಡಿದ 200 ಕೋಟಿ ಆಫರ್ ಅನ್ನು ಸಮಂತಾ ಅವರು ತಿರಸ್ಕರಿಸಿದ್ದೃಂತೆ, ತಾವು ಸೆಲ್ಫ್ ಮೇಡ್ ವುಮೆನ್ ಎಂದು ಹೇಳಿ ನಾಗಾರ್ಜುನ ಅವರ ಕುಟುಂಬ ಕೊಟ್ಟ ಆಫರ್ ಅನ್ನು ರೆಜೆಕ್ಟ್ ಮಾಡಿದ್ದರಂತೆ.
ಅಷ್ಟೆ ಅಲ್ಲ, ಸಮಂತಾ ಅವರು ತಮ್ಮ ಮಾಜಿ ಪತಿಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.