ಅನುಷ್ಕಾ ಶೆಟ್ಟಿ ಜೊತೆ ನಾಗಚೈತನ್ಯ ಮದುವೆ ಆಗಿದ್ರಾ? ಹಾಗಾದ್ರೆ ಸಮಂತಾ ಮೊದಲ ಪತ್ನಿ ಅಲ್ವಾ? ನಾಗಾರ್ಜುನʼಗೂ ಗೊತ್ತಿತ್ತಂತೆ ಈ ವಿಚಾರ!!
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಡುವೆ ಅಫೇರ್ ಇದೆ ಎನ್ನುವ ಮಾತುಗಳು ಬಹುಕಾಲದಿಂದಲೂ ಸೌತ್ ಸಿನಿರಂಗದಲ್ಲಿ ಕೇಳಿಬಂದ ವಿಚಾರ. ಆದರೆ ನಾಗಚೈತನ್ಯ ಜೊತೆ ಅನುಷ್ಕಾ ಎಂಗೇಜ್‌ಮೆಂಟ್ ನಡೆದಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು.
ಅನುಷ್ಕಾ ಶೆಟ್ಟಿ ಹಾಗೂ ನಾಗಚೈತನ್ಯ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂಬ ವದಂತಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಆ ಸಮಯದಲ್ಲಿ ನಟಿ ಅನುಷ್ಕಾ ಶೆಟ್ಟಿ ಅವರು ನಾಗಚೈತನ್ಯ ತಂದೆ ನಾಗಾರ್ಜುನ ಜೊತೆ ನಟಿಸಿದ್ದರು. ನಾಗ ಚೈತನ್ಯ ಸ್ವಿಟ್ಜರ್ಲೆಂಡ್‌ನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾಗ ಅನುಷ್ಕಾ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥದ ವದಂತಿ ಹಬ್ಬಿತ್ತು.
ಈ ಬಗ್ಗೆ ನಾಗಾರ್ಜುನ ಸಂದರ್ಶನವೊಂದರಲ್ಲಿ ಮಾತನಾಡಿದ್ದು. "ನಾನು ಅವನಿಗೆ ಫೋನ್ ಮಾಡಿದೆ. ನೀನು ಅನುಷ್ಕಾ ನಿನ್ನೆ ರಾತ್ರಿ ನಿಶ್ಚಿತಾರ್ಥ ಮಾಡಿಕೊಂಡ್ರಂತೆ, ನನಗೇ ಹೇಳಿಲ್ವಲ್ಲ" ಎಂದೆ.
ಅದಕ್ಕೆ ಅವನು "ವ್ಹಾವ್, ನಿಜಾನಾ?" ಎಂದು ಶಾಕ್ ಆಗಿ ಜೋರಾಗಿ ನಕ್ಕಿದ್ದ. ಬಳಿಕ ಅನುಷ್ಕಾಗೂ ಫೋನ್ ಮಾಡಿದ್ದೆ, ಅವಳೂ ಸಹ ನಗಾಡಿದ್ದಳು. ಅದೆಲ್ಲಾ ಬರೀ ಗಾಳಿಸುದ್ದಿ ಎಂದು ಸ್ಪಷ್ಟನೆ ನಾಗಾರ್ಜುನ ಸ್ಪಷ್ಟನೆ ನೀಡಿದ್ದರು.
ನಟ ನಾಗಚೈತನ್ಯ ಸಮಂತಾ ಅವರನ್ನೇ ಮೊದಲು ಮದುವೆಯಾದದ್ದು, ಆದರೆ ಈ ಜೋಡಿ ಡಿವೋರ್ಸ್ ನೀಡಿ ದೂರಾಗಿದ್ದಾರೆ.