ನಾಗಾರ್ಜುನ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ..! ಅಕ್ಕಿನೇನಿ ಕುಟುಂಬದ ಸೊಸೆಯಾಗಲಿದ್ದಾರೆ ಮಿಸ್ ಇಂಡಿಯಾ..!
Sushant marriage: ಟಾಲಿವುಡ್‌ನ ಟಾಪ್ ಸ್ಟಾರ್ ನಾಗಾರ್ಜುನ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ಇದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು, ಇದೀಗ ಅವರ ಕುಟುಂಬದಲ್ಲಿ ಮತ್ತೊಂದು ಮದುವೆಯ ಸದ್ದು ಕೇಳಿ ಬರುತ್ತಿದೆ.
ಸದ್ಯ ಮೀನಾಕ್ಷಿ ಚೌಧರಿ ಅವರು ಮಿಸ್ ಇಂಡಿಯಾ ಪಟ್ಟ ಗೆದ್ದ ನಂತರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಇದೀಗ ನಟಿ ಅಕ್ಕಿನೇನಿ ಕುಟುಂಬದ ಸೊಸೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ನಟ ನಾಗಾರ್ಜುನ ಅವರ ಮನೆಯಲ್ಲಿ ಶೀಘ್ರವೇ ಗಟ್ಟಿಮೇಳ ಮೊಳಗಲಿದೆ, ಸಮಂತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ ವಿಚ್ಛೇದನದ ನಂತರ ಶೋಭಿತಾ ಧೂಳಿಪಾಲ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಗುಟ್ಟಾಗಿ ಪ್ರೀತಿ ಮಾಡುತ್ತಿದ್ದ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಜೋಡಿ ಕಳೆದೆರೆಡು ತಿಂಗಳ ಹಿಂದೆಯಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಈ ಜೋಡಿಯ ಮದುವೆಗೆ ಸಿದ್ದತೆಗಳು ಆರಂಭವಾಗಿದೆ.
ಈ ಜೋಡಿ ಡಿಸೆಂಬರ್ ತಿಂಗಳ 22 ರಂದು ಹಸೆಮಣೆ ಏರಲಿದ್ದು, ಮದುವೆ ಆಮಂತ್ರಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಕ್ಕಿನೇನಿ ಕುಟುಂಬ ನಾಗಚೈತನ್ಯ ಅವರ ಮದುವೆ ಸಂಭ್ರಮದ ಖುಷಿಯಲ್ಲಿರುವಾಗ, ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಅಕ್ಕಿನೇನಿ ಕುಟುಂಬದಲ್ಲಿ ಮತ್ತೊಂದು ಮದುವೆ ಶೀಘ್ರವೇ ನಡೆಯಲಿದೆ ಎನ್ನಲಾಗುತ್ತಿದೆ.
ಸದ್ಯ ಮಿಸ್ ಇಂಡಿಯಾ ಪಟ್ಟ ಗಿಟ್ಟಿಸಿಕೊಂಡು, ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಮೀನಾಕ್ಷಿ ಚೌಧರಿ ಅಕ್ಕಿನೇನಿ ಕುಟುಂಬಕ್ಕೆ ಸೊಸೆಯಾಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ನಟಿ ಮೀನಾಕ್ಷಿ ಚೌಧರಿ, ಮೂಲತಃ ಹರಿಯಾಣ ರಾಜ್ಯದವರು, ಈಕೆ ವೃತ್ತಿಯಲ್ಲಿ ಡೆಂಟಿಸ್ಟ್ ಆಗಿ ಕೆಲಸ ಮಾಡಿದವರು. ಅಷ್ಟೆ ಅಲ್ಲ ಈಕೆ ಬ್ಯಾಡ್ಮಿಂಟನ್ ಆಟಗಾರ್ತಿ ಕೂಡ ಹೌದು.
ಇದೀಗ ಮಿಸ್ ಇಂಡಿಯಾ ಪಟ್ಟ ಗಿಟ್ಟಿಸಿಕೊಂಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೀನಾಕ್ಷಿ ಚೌಧರಿ ಅಕ್ಕಿನೇನಿ ಕುಟುಂಬದ ಸೊಸೆಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಸುಶಾಂತ್ ಅವರ ಜೊತೆ ಮೀನಾಕ್ಷಿ ಚೌಧರಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು, ಸದ್ಯ ಇದು ಟಾಲಿವುಡ್‌ನ ಚರ್ಚೆಯ ಹಾಟ್ ಟಾಪಿಕ್ ಆಗಿದೆ.