ಮಹಿಳೆಯರು ವಾರದ ಈ ದಿನ ಉಗುರು ಕತ್ತರಿಸಿದ್ರೆ ಅದೃಷ್ಟವೇ ಬದಲಾಗುವುದು... ಪತಿಯ ಆಯಸ್ಸು ಹೆಚ್ಚಾಗುತ್ತೆ; ದುಡಿದಷ್ಟೂ ಹಣ ದುಪ್ಪಟ್ಟಾಗುತ್ತೆ
ಸಾಕಷ್ಟು ಜನರನ್ನು ನೋಡಿರಬಹುದು, ಯಾವುದೋ ಒಂದು ದಿನದಂದು ಉಗುರು ಕತ್ತರಿಸಿ ಬಿಸಾಡುತ್ತಾರೆ. ಆದರೆ ನಿಮಗೆ ತಿಳಿದಿದೆಯೇ? ಉಗುರುಗಳು ಮತ್ತು ಕೂದಲನ್ನು ಕತ್ತರಿಸಲು ಅದಕ್ಕೇ ಆದ ನಿಯಮಗಳನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ಅಂದರೆ ಯಾವುದೇ ಸಮಯದಲ್ಲಿ ಉಗುರುಗಳನ್ನು ಕತ್ತರಿಸುವಂತಿಲ್ಲ. ಹೀಗೆ ಮಾಡಿದರೆ ಸಂಪತ್ತಿಗೆ ಸಂಕಷ್ಟ ಬರಬಹುದು.
ವೈದಿಕ ಜ್ಯೋತಿಷ್ಯದ ಪ್ರಕಾರ, ಕೂದಲು ಮತ್ತು ಉಗುರುಗಳು ಶನಿ ದೇವನಿಗೆ ಸಂಬಂಧಿಸಿವೆ. ಅಂದರೆ, ಇವೆರಡನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಶನಿದೇವನು ಕೋಪಗೊಳ್ಳಬಹುದು. ಅಷ್ಟೇ ಅಲ್ಲದೆ, ಆತನ ಕೋಪಕ್ಕೆ ಬಲಿಯಾಗುವ ಅಪಾಯವೂ ಇದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಸೋಮವಾರ ಶಿವ ಮತ್ತು ಚಂದ್ರ ಗ್ರಹಕ್ಕೆ ಸಮರ್ಪಿಸಲಾಗಿದೆ. ಆದ್ದರಿಂದ ಈ ದಿನ ಉಗುರು ಕತ್ತರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದರಲ್ಲೂ ಮದುವೆಯಾದ ಮಹಿಳೆಯರು ಈ ದಿನ ಉಗುರುಗಳನ್ನು ಕತ್ತರಿಸುವುದರಿಂದ ತಮೋಗುಣ ದೂರವಾಗುತ್ತದೆ. ಜೊತೆಗೆ ಪತಿಯ ಆರ್ಥಿಕ ಸ್ಥಿತಿಯೂ ಬಲಗೊಳ್ಳುತ್ತದೆ.
ಬುಧವಾರವು ಗಣೇಶನಿಗೆ ಸಮರ್ಪಿತವಾಗಿದೆ. ಈ ದಿನ ಉಗುರುಗಳನ್ನು ಕತ್ತರಿಸುವುದು ಆರ್ಥಿಕ ಲಾಭವನ್ನು ತರುತ್ತದೆ. ಇದರೊಂದಿಗೆ ಪ್ರಗತಿಯ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ.
ಶುಕ್ರವಾರ ಉಗುರು ಕತ್ತರಿಸಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಉಗುರು ಕತ್ತರಿಸಿದರೆ, ಸಂಬಂಧಗಳನ್ನು ಸುಧಾರಿಸುತ್ತದೆ. ಇದರೊಂದಿಗೆ, ಸೌಕರ್ಯಗಳು ಹೆಚ್ಚಾಗುತ್ತವೆ.
ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸುವುದಿಲ್ಲ.