ಗರ್ಲ್ ಫ್ರೆಂಡ್ ವಿಚಾರಕ್ಕೆ Biggboss ಮನೆಯೊಳಗೆ ಸುದ್ದಿಯಾಗಿದ್ದರು ಕಾರ್ತಿಕ್ ! ಈ ನಟಿ ಯೇನಾ ಇವರ ನಿಜವಾದ ಮನದರಸಿ
ಕಾರ್ತಿಕ್ ಮಹೇಶ್ ಬಿಗ್ ಬಾಸ್ ಸೀಸನ್ 10 ರ ಕಠಿಣ ಸ್ಪರ್ಧಿ. ಸಾಮಾಜಿಕ ಮಾಧ್ಯಮದಲ್ಲಿ ಅಬ್ಬರಿಸುತ್ತಿರುವ ಕಾರ್ತಿಕ್ ಗೆ ವಿಜೇತರಾಗುವ ಎಲ್ಲಾ ರೀತಿಯ ಅರ್ಹತೆ ಇದೆ. ಅವರಿಗಿರುವ ಅಭಿಮಾನ ಬಳಗವನ್ನು ನೋಡಿದರೆ ಕಾರ್ತಿಕ್ ಈ ಬಾರಿ ವಿನ್ನರ್ ಆದರೂ ಆಶ್ಚರ್ಯ ಇಲ್ಲ.
ಕಾರ್ತಿಕ್ ಮೊದಲಿನಿಂದಲೂ ಮನೆಯಲ್ಲಿ ಲವರ್ ಬಾಯ್ ಫೀಲ್ ನೀಡಿದ್ದರು. ಫ್ರೆಂಡ್ಶಿಪ್, ಫ್ಲರ್ಟಿಂಗ್ ಎರಡರಲ್ಲೂ ಮುಂದಿದ್ದರು.
ಆದರೆ ಅವರು ಪದೇ ಪದೇ ತಮ್ಮ ಸಹ ಸ್ಪರ್ಧಿಗಳಲ್ಲಿ ಮನೆಯ ಹೊರಗೆ ತಮಗಾಗಿ ಒಬ್ಬ ಹುಡುಗಿ ಕಾಯುತ್ತಿದ್ದಾರೆ ಎನ್ನುವುದನ್ನು ಕೂಡಾ ಹೇಳಿದ್ದಾರೆ. ಈ ವಿಚಾರವನ್ನು ಸ್ನೇಹಿತ್, ನಮೃತಾ ಕೂಡಾ ಮನೆಯಲ್ಲಿ ಹೇಳಿದ್ದರು.
ಇದೀಗ ಕಾರ್ತಿಕ್ ಮಹೇಶ ನಿಜವಾದ ಗರ್ಲ್ ಫ್ರೆಂಡ್ ಯಾರು ಎನ್ನುವ ಬಗ್ಗೆ ಮನೆಯ ಹೊರಗೆ ಚರ್ಚೆ ಆರಂಭವಾಗಿದೆ. ಇವರೇ ಕಾರ್ತಿಕ್ ನಿಜವಾದ ಮನದನ್ನೆ ಎನ್ನುವ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ಹೌದು, ನಟಿ ರಶಿಕಾ ಶೆಟ್ಟಿಯೇ ಕಾರ್ತಿಕ್ ಅವರ ನಿಜವಾದ ಗರ್ಲ್ ಫ್ರೆಂಡ್ ಎನ್ನುವ ಮಾತು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಕಾರ್ತಿಕ್ ಜೊತೆಗಿನ ಇವರ ಸೆಲ್ಫಿ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಇವರೇ ಕಾರ್ತಿಕ್ ನಿಜವಾದ ಪ್ರೀತಿ ಎನ್ನುವ ವಿಚಾರ ಕೂಡಾ ಹರಿದಾಡಲು ಆರಂಭಿಸಿದೆ.
ಆದರೆ ಈ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಇನ್ನು ಕೂಡಾ ಅಧಿಕೃತವಾಗಿಲ್ಲ. ಕಾರ್ತಿಕ್ ತನ್ನ ಹುಡುಗಿಯ ಬಗ್ಗೆ ಮಾತನಾಡಿದ್ದಾರೆ ಹೊರತು ಎಲ್ಲಿಯೂ ಅವರ ಹೆಸರು ಹೇಳಲಿಲ್ಲ. ರಶಿಕಾ ಕೂಡಾ ಈ ಬಗ್ಗೆ ಎಲ್ಲಿಯೂ ಏನೂ ಹೇಳಿಲ್ಲ.