Bollywood Actresses: ತಮ್ಮನ ವಯಸ್ಸಿನವರನ್ನು ನೋಡಿ, ಲವ್ ಮಾಡಿ ಮದುವೆಯಾದ ‘ಸ್ಟಾರ್’ ಸೆಲೆಬ್ರಿಟಿಗಳು ಇವರು
ಸೆಲೆಬ್ರಿಟಿಗಳ ಜೀವನ ಕೊಂಚ ವಿಭಿನ್ನವಾಗಿರುತ್ತದೆ. ಅವರ ಪ್ರೇಮ ಜೀವನ ಕೂಡ ಎಲ್ಲಕ್ಕಿಂತ ಭಿನ್ನ. ಇಂದು ನಾವು ನಿಮಗೆ ತಿಳಿಸಹೊರಟಿರುವುದು ಬಾಲಿವುಡ್ ಮತ್ತು ಕ್ರೀಡಾ ಲೋಕದಲ್ಲಿ ತಮಗಿಂತ ಕಿರಿಯ ವಯಸ್ಸಿನವರ ಜೊತೆ ವಿವಾಹವಾದ ಸ್ಟಾರ್’ಗಳ ಬಗ್ಗೆ.
ಬಾಲಿವುಡ್, ಹಾಲಿವುಡ್’ನಲ್ಲಿ ಸಾಕಷ್ಟು ಹೆಸರು ಗಳಿಸಿರುವ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಾಂಕಗಿಂತ ನಿಕ್ 10 ವರ್ಷ ಸಣ್ಣವರು.
ವಿಶ್ವದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರಾಗಿರುವ ಐಶ್ವರ್ಯಾ ರೈ ಅವರು 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಆಗ ಅವರ ವಯಸ್ಸು 34 ವರ್ಷ, ಅಭಿಷೇಕ್ ವಯಸ್ಸು 31 ಆಗಿತ್ತು.
2016 ರಲ್ಲಿ ಬಿಪಾಶಾ ಬಸು ಕರಣ್ ಸಿಂಗ್ ಗ್ರೋವರ್ ಅವರನ್ನು ವಿವಾಹವಾದರು. ತನಗಿಂತ 3 ವರ್ಷ ಚಿಕ್ಕವನಾದ ಕರಣ್ ಸಿಂಗ್ ಜೊತೆ ಬಸು ಮದುವೆಯಾದಾಗ ಅಭಿಮಾನಿಗಳು ಶಾಕ್ ಆಗಿದ್ದರು.
2015 ರಲ್ಲಿ ಸೋಹಾ ಅಲಿ ಖಾನ್ ಮತ್ತು ಕುನಾಲ್ ಖೆಮ್ಮು ವಿವಾಹವಾದರು. ಆಗ ಸೋಹಾ ವಯಸ್ಸು 37 ವರ್ಷ ಮತ್ತು ಕುನಾಲ್ ಖೆಮ್ಮು ಅವರಿಗೆ 32 ವರ್ಷವಾಗಿತ್ತು.
ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಮದುವೆಯಾಗಿ ಮೂರು ವರ್ಷಗಳಾಗಿವೆ. ನೇಹಾ ಅಂಗದ್ ಬೇಡಿಗಿಂತ ಮೂರು ವರ್ಷ ದೊಡ್ಡವರು.
ನಟಿ ಅಮೃತಾ ಸಿಂಗ್ ಅವರು 90ರ ದಶಕದಲ್ಲಿ ತನಗಿಂತ ಹತ್ತು ವರ್ಷಕ್ಕಿಂತ ಕಿರಿಯ ನಟ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಆದರೆ 13 ವರ್ಷಗಳ ನಂತರ ಆ ಮದುವೆ ಮುರಿದುಬಿತ್ತು.
ಕ್ರೀಡಾ ಲೋಕದಲ್ಲಿಯೂ ಇಂತಹ ಜೋಡಿಯೊಂದಿದೆ. ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ನಡುವೆ 6 ವರ್ಷಗಳ ಅಂತರವಿದೆ.
ಬಾಲಿವುಡ್ ನಟಿ ಮಲೈಕಾ ಅರೋರಾ ಕೂಡ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.