ನಮ್ಮನೆ ಯುವರಾಣಿ ಸಿರೀಯಲ್‌ ಮೀರಾ ತಂಗಿ ಎಷ್ಟು ಕ್ಯೂಟ್‌ ಆಗಿದ್ದಾರೆ ಗೊತ್ತಾ? ಇವರೂ ಸಖತ್‌ ಫೇಮಸ್!!‌

Wed, 04 Sep 2024-8:32 am,

ನಮ್ಮನೆ ಯುವರಾಣಿ ಸಿರೀಯಲ್‌ ಮುಗಿದರೂ ಕೂಡ ಈಗಲೂ ಈ ಮೀರಾ ಪಾತ್ರ ಅಷ್ಟೇ ಜನಪ್ರಿಯವಾಗಿದೆ.. ಏಕೆಂದರೇ ಆ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಅಂಕಿತಾ ಅಮರ್‌ ಅವರ ಅದ್ಭುತ ನಟನೆ..   

ಹೌದು ಸರಳವಾದ ಅಭಿನಯ, ವಿನಯದ ಸಂಭಾಷಣೆ ಹೀಗೆ ಪ್ರತಿಯೊಂದು ವಿಷಯದಲ್ಲೂ ತಮ್ಮದೇ ವಿಭಿನ್ನ ಶೈಲಿಯನ್ನು ಹೊಂದಿದ್ದ ನಟಿ ಅಂಕಿತಾ ಅಮರ್‌ ಈ ಸಿರೀಯಲ್‌ ಮೂಲಕವೇ ಮನೆಮಾತಾಗಿದ್ದಾರೆ..   

ಇನ್ನು ನಟಿ ಅಂಕಿತಾ ಅಮರ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.. ಆಗ್ಗಾಗೆ ಪೋಟೋ.. ರೀಲ್ಸ್‌ ವಿಡಿಯೋಗಳನ್ನು ಶೇರ್‌ ಮಾಡುತ್ತಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ..  

ನಟಿ ಅಂಕಿತಾ ಅಮರ್‌ ವೈಯಕ್ತಿಕ ಜೀವನಕ್ಕೆ ಬರುವುದಾದರೇ ಇವರಿಗೆ ಒಬ್ಬಳೂ ತಂಗಿ ಇದ್ದಾರೆ.. ಅವರೂ ನೋಡೋಕೆ ಸೇಮ್‌ ಮೀರಾ ಅವರಂತೆಯೇ ಸಖತ್‌ ಕ್ಯೂಟ್‌ ಆಗಿದ್ದಾರೆ.. ಇವರ ಅನನ್ಯ ಅಮರ್‌..   

ಕಿರುತೆರೆ ಲೋಕದಲ್ಲಿ ಸದ್ದು ಮಾಡುತ್ತಿರುವ ಅಂಕಿತಾ ಅಮರ್‌ ಕುಟುಂಬವೇ ರಂಗಭೂಮಿಯಲ್ಲಿ ಮಿಂಚುತ್ತಿದೆ.. ಹೌದು ಮೀರಾ ಅಲಿಯಾಸ್‌ ಅಂಕಿತಾ ಅವರ ತಂದೆ ತಾಯಿ ಸಿರೀಯಲ್‌ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಅನುಭವವನ್ನು ಹೊಂದಿದ್ದಾರೆ..  

ಇದೇ ಕಾರಣದಿಂದ ನಟಿ ಅಂಕಿತಾ ಅವರಿಗೆ ನಟನೆ ಒಲಿದುಬಂದಿದೆ.. ಇಷ್ಟೇ ಅಲ್ಲ.. ಅಂಕಿತಾ ಅದ್ಭುತವಾದ ಸಿಂಗರ್‌ ಹಾಗೂ ಡಾನ್ಸರ್‌ ಕೂಡ ಹೌದು.. ಸಾಮಾಜಿಕ ಜಾಲತಾಣದಲ್ಲಿ ಇವರ ಹಾಡುಗಾರಿಕೆಯ ವಿಡಿಯೋಗಳು ಆಗ್ಗಾಗೆ ವೈರಲ್‌ ಆಗುತ್ತಿರುತ್ತವೆ..  

ವಿಶೇಷವೆಂದರೇ ನಟಿ ಅಂಕಿತಾ ನಿರೂಪಣೆಯಲ್ಲೂ ಕೂಡ ತಮ್ಮದೇ ಆದ ಹೆಸರು ಮಾಡುತ್ತಿದ್ದಾರೆ.. ಇವರ ಅದ್ಭುತ ಟ್ಯಾಲೆಂಟ್‌ಗೆ ಅವಕಾಶಗಳು ಸಿಗಲಿ.. ಬಣ್ಣದ ಲೋಕದಲ್ಲಿ ದೊಡ್ಡ ಹೆಸರು ಮಾಡಲಿ ಎನ್ನುವುದೇ ನಮ್ಮೆಲ್ಲರ ಆಶಯ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link