Namratha Gowda: ಬ್ಲ್ಯಾಕ್‌ ಗೌನ್‌ನಲ್ಲಿ ಹಾಟ್‌ ನಾಗಿಣಿ: ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಬಿಗ್‌ ಬಾಸ್‌ ಬೆಡಗಿ!‌

Sun, 14 Apr 2024-6:02 pm,

ಕಿರುತೆರೆ ನಟಿ ನಮ್ರತಾ ಗೌಡ ತಮಮ್‌ ಜನ್ಮ ದಿನದ ಸೆಲೆಬ್ರೇಷನ್‌ ಮೂಡ್‌ನಲ್ಲಿ ಇದ್ದಾರೆ. ಈ ನಟಿ ಕೈಯಲ್ಲಿ  ಕೇಕ್​ ಹಿಡಿದುಕೊಂಡು ಚೆಂದದ ಫೋಟೋಶೂಟ್​ ಮಾಡಿಸಿದ್ದಾರೆ.

ನಟಿ ನಮ್ರತಾ ಗೌಡ ಬ್ಲ್ಯಾಕ್‌ ಗೌನ್‌ ಧರಿಸಿ ಸಖತ್‌ ಹಾಟ್‌ ಆಗಿ ಮಿಂಚಿದ್ದಾರೆ. ಹಾಗೇಯೆ ಈ ನಟಿ ಫೋಟೊಗಳಿಗೆ ವಿಭಿನ್ನ ಪೋಸ್‌ ನೀಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಸೀರಿಯಲ್‌ ಸುಂದರಿ ನಮ್ರತಾ ಗೌಡ ಯಾವ ಯಾವ ಬಿ-ಟೌನ್‌ ಬ್ಯೂಟಿಗಿಂತ ಕಡಿಮೆ ಕಾಣದೆ ಗ್ಲಾಮರಸ್‌ ಆಗಿ ಕಾಣಿಸಿಕೊಂಡ ನಟಿ, ಡಾರ್ಕ್​ ಥೀಮ್‌ನಲ್ಲಿ ಕ್ಯಾಂಡಲ್‌ ಲೈಟ್‌ನಲ್ಲಿ ಫೋಟೊಶೂಟ್‌ ಮಾಡಿಸಿದ್ದಾರೆ.

ನಟಿ ನಮ್ರತಾ ಗೌಡ ಫೋಟೋಸ್‌ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು, ಈ ಪೋಸ್ಟ್‌ಗೆ ಐವತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್‌  ಹಾಗೂ ಕಾಮೆಂಟ್‌ಗಳ ಮಳೆಯೇ ಸುರಿದಿದೆ

ನಮ್ರತಾ ಗೌಡ ಫೋಟೋಗಳಿಗೆ ನೆಟ್ಟಿಗರು ಕ್ಲೀನ್‌ ಬೋಲ್ಡ್‌ ಆಗಿದ್ದು, ಕಾಮೆಂಟ್‌ ಬಾಕ್ಸ್‌ನಲ್ಲಿ ಸೂಪರ್, ಅಮೇಜಿಂಗ್‌, ಬ್ಯೂಟಿಫುಲ್‌ ಎಂದು ಬರೆಯುವುದರ ಜೊತೆಗೆ ಹುಟ್ಟು ಹಬ್ಬಕ್ಕೆ ವಿಶ್‌ ಕೂಡ ಮಾಡಿದ್ದಾರೆ.

ನಟಿ ನಮ್ರತಾ ಗೌಡ ನಟನೆ ಮಾತ್ರವಲ್ಲದೇ, ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡುವರು ಅನೇಕ ಜಾಹೀರಾತುಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಾ ಒಳ್ಳೆ ಸಂಭಾವನೆ ಕೂಡ ಪಡೆಯುತ್ತಿದ್ದಾರೆ.

ನಮ್ರತಾ ಗೌಡ ಕಿರುತೆರೆಯಲ್ಲಿ ಧಾರವಾಹಿಯಲ್ಲಿ ನಟಿಸುವುದರ ಜೊತೆಗೆ ತಕಮಿಧಿತ ಡ್ಯಾನ್ಸ್ ಪ್ರೋಗ್ರಾಮ್ ಹಾಗೂ ಬಿಗ್‌ ಬಾಸ್‌ ರಿಯಾಲಿಟಿ ಶೋದಲ್ಲಿಯೂ ಕೂಡ ಭಾಗವಹಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link