Namratha Gowda: ಜನ್ಮದಿನದಂದು ಐಷಾರಾಮಿ ಕಾರು ಖರೀದಿಸಿದ ಕಿರುತೆರೆಯ ನಾಗಿಣಿ!

Mon, 15 Apr 2024-9:56 am,

ಕನ್ನಡ ಕಿರುತೆರೆಯ ನಟಿ ನಮ್ರತಾ ಗೌಡ ಬರ್ತ್ ಡೇ ಸೆಲೆಬ್ರೇಷನ್ ಮೂಡ್‌ಬಲ್ಲಿ ಹೊಸ ಕಾರು ಖರೀದಿಸಿದ್ದಾರೆ. ಈ ವಿಶೇಷ ದಿನದಂದು ನಮ್ರತಾ ಮನೆಗೆ MG ಎಲೆಕ್ಟ್ರಿಕಲ್ ಕಾರು ಹೊಸ ಅಥಿತಿಯಾಗಿ ಬಂದಿದೆ. 

ನಟಿ ನಮ್ರತಾ ಗೌಡ MG ಮೋಟರ್​ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರನ್ನು ಖರೀದಿಸಿದ್ದು, ಇದರ ಬೆಲೆ 6 ರಿಂದ 9 ಲಕ್ಷಗಳವರೆಗೂ ಇದೆ ಎನ್ನಲಾಗ್ತಿದೆ.

ಸೀರಿಯಲ್‌ ನಟಿ ನಮ್ರತಾ ಗೌಡ ಆಕಾಶ ದೀಪ ಧಾರವಾಹಿಯಿಂದ ನಟನೆ ಮಾಡಿ, ಬಳಿಕ ಪುಟ್ಟಗೌರಿ  ಮದುವೆ ಹಾಗೂ ನಾಗಿಣಿ 2 ಸೀರಿಯಲ್‌ಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ನಟಿ ನಮ್ರತಾ  ಗೌಡ ಮೊದ ಮೊದಲು ಬಾಲನಟಿಯಾಗಿ ತುತ್ತೂರಿ, ಮಿಲನ ಅಂತಹ ಹಲವಾರು ಸಿನಿಮಾಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು.

ನಮ್ರತಾ ಗೌಡ ಇತ್ತೀಚೆಗೆ ಬಿಗ್‌ ಬಾಸ್‌ ಕನ್ನಡ ಸೀಸನ್‌  10 ರಲ್ಲಿ ಸ್ಪರ್ಧಿಸಿ ಫೈನಲ್ಸ್‌ಗೆ ಒಂದು ವಾರ ಮುಂಚೆ ದೊಡ್ಮನೆಯಿಂದ ಹೊರ ಬಂದರೂ ಅಭಿಮಾನಿಗಳ ಬಳಗವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.

ನಮ್ರತಾ ಗೌಡ ತನ್ನ ನಟನೆ ಮೂಲಕ ಮಾತ್ರ ಫ್ಯಾನ್ಸ್‌ ಮನ ಬೆದ್ದಿಲ್ಲ. ಈ ನಟಿ ಒಳ್ಳೆಯ ಡ್ಯಾನ್ಸರ್‌ ಆಗಿದ್ದು, ಈಕೆಯ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link